ETV Bharat / entertainment

ಹಿಂದಿ ದೃಶ್ಯಂ 2 ಅಬ್ಬರ.. 9 ದಿನಗಳಲ್ಲಿ 126 ಕೋಟಿ ಕಲೆಕ್ಷನ್ - Drishyam 2 movie collection

ನವೆಂಬರ್ 18 ರಂದು ಬಿಡುಗಡೆಯಾದ ಹಿಂದಿ ದೃಶ್ಯಂ 2 ಸಿನಿಮಾ ಒಟ್ಟು 126 ಕೋಟಿ ಕಲೆಕ್ಷನ್​ ಮಾಡಿದೆ.

Hindi Drishyam 2 movie collection
ಹಿಂದಿ ದೃಶ್ಯಂ 2 ಕಲೆಕ್ಷನ್
author img

By

Published : Nov 27, 2022, 8:41 PM IST

ನವೆಂಬರ್ 18 ರಂದು ಬಿಡುಗಡೆಯಾದ ಹಿಂದಿಯ ದೃಶ್ಯಂ 2 ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದೆ. ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ಶ್ರಿಯಾ ಸರನ್ ಅಭಿನಯದ 'ದೃಶ್ಯಂ-2' ಚಿತ್ರ ಬಿಡುಗಡೆ ಆದ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಮಿಂಚುತ್ತಲೇ ಇದೆ. ಕೇವಲ 9 ದಿನಗಳಲ್ಲಿ 126 ಕೋಟಿ ಕಲೆಕ್ಷನ್​ ಮಾಡಿದೆ. ಸೌತ್​ ಸಿನಿಮಾ ಇಂಡಸ್ಟ್ರಿ ಅಬ್ಬರಕ್ಕೆ ನಲುಗಿದ್ದ ಬಾಲಿವುಡ್​ಗೆ ಬೂಸ್ಟರ್​ ಡೋಸ್​ ಸಿಕ್ಕಂತಾಗಿದೆ.

ಅಭಿಷೇಕ್ ಪಾಠಕ್ ನಿರ್ದೇಶನದ 'ದೃಶ್ಯಂ-2' ಚಿತ್ರದ ಮೇಕಿಂಗ್ ಬಜೆಟ್ ಕೇವಲ 50 ಕೋಟಿ ರೂಪಾಯಿ. 9 ದಿನಗಳಲ್ಲಿ ಸಿನಿಮಾ 126 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಚಿತ್ರವು ಮೊದಲ ದಿನ 15.38 ಕೋಟಿ, ಎರಡನೇ ದಿನ 21.59 ಕೋಟಿ, ಮೂರನೇ ದಿನ 27.17 ಕೋಟಿ, ನಾಲ್ಕನೇ ದಿನ 11.87 ಕೋಟಿ, ಐದನೇ ದಿನ 10.48 ಕೋಟಿ, 6ನೇ ದಿನ 9.55 ಕೋಟಿ ಬಾಚಿಕೊಂಡಿತ್ತು. ಶುಕ್ರವಾರ 7.87 ಕೋಟಿ, ಶನಿವಾರ 14.05 ಕೋಟಿ ಕಲೆಕ್ಷನ್​ ಮಾಡಿದ್ದು, ಈವರೆಗೆ 126 ಕೋಟಿ ರೂಪಾಯಿ ಸಂಗ್ರಹಿಸಿದೆ.

ಚಿತ್ರದ ಕಥೆ ಏನು?: ಸರಣಿ ಕೊಲೆ ರಹಸ್ಯವನ್ನು ಆಧರಿಸಿದ 'ದೃಶ್ಯಂ 2' ಚಿತ್ರ ಕೊನೆಯವರೆಗೂ ಸಸ್ಪೆನ್ಸ್​ನಿಂದ ಕೂಡಿದ್ದು ಪ್ರೇಕ್ಷಕರಲ್ಲಿ ಥ್ರಿಲ್​ ಹುಟ್ಟಿಸಿದೆ. ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ಸರಳ ಕುಟುಂಬದ ವಿಜಯ್ ಸಲಗಾಂವ್ಕರ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದು, ದಕ್ಷಿಣದ ಸುಂದರ ನಟಿ ಶ್ರಿಯಾ ಸರಣ್ ಅಜಯ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಟಬು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

  • #Drishyam2 continues its PHENOMENAL RUN… Goes on an OVERDRIVE on [second] Sat… Poses tough competition to all films - new as well as holdover titles… Will pack a SOLID PUNCH on [second] Sun as well… [Week 2] Fri 7.87 cr, Sat 14.05 cr. Total: ₹ 126.58 cr. #India biz. pic.twitter.com/koIxUq6qcP

    — taran adarsh (@taran_adarsh) November 27, 2022 " class="align-text-top noRightClick twitterSection" data=" ">

ದೃಶ್ಯಂ 2 ಸಿನಿಮಾ 2015ರಲ್ಲಿ ತೆರೆಕಂಡ ಮಲಯಾಳಂನ ಕ್ರೈಂ ಥ್ರಿಲ್ಲರ್ ಸಿನಿಮಾ. ಇದು ದೃಶ್ಯಂ ಒಂದರ ಮುಂದುವರಿದ ಭಾಗ. ಮಲಯಾಳಂನ ಜನಪ್ರಿಯ ನಟ ಮೋಹನ್‌ಲಾಲ್​ ಅಭಿನಯದಲ್ಲಿ ಮೊದಲ ಬಾರಿಗೆ ಈ ಸಿನಿಮಾ ಚಿತ್ರ ನಿರ್ಮಾಣವಾಗಿತ್ತು. ನಂತರ ತೆಲುಗು, ಕನ್ನಡ, ಹಿಂದಿಯಲ್ಲಿ ರಿಮೇಕ್​ ಮಾಡಲಾಗಿದೆ. ಆದರೆ, ಮಲಯಾಳಂನಲ್ಲಿದ್ದ ಹೆಸರನ್ನೇ ಎಲ್ಲ ಭಾಷೆಗಳಲ್ಲೂ ಇಡಲಾಗಿದೆ.

ಇದನ್ನೂ ಓದಿ: ದೃಶ್ಯಂ 2 ಅಬ್ಬರದ ನಡುವೆಯೂ ಬಾಕ್ಸ್ ಆಫೀಸ್‌ ಧೂಳೆಬ್ಬಿಸಿದ ಭೇಡಿಯಾ

ಹಿಂದಿ ದೃಶ್ಯಂ 2 ಚಿತ್ರವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್, ಕ್ರಿಶನ್ ಕುಮಾರ್ ನಿರ್ಮಿಸಿದ್ದು, ಸಂಜೀವ್ ಜೋಶಿ, ಆದಿತ್ಯ ಚೌಕ್ಸೆ ಮತ್ತು ಶಿವ ಚನಾನ ಸಹ ನಿರ್ಮಾಣ ಮಾಡಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್, ಟಿ - ಸೀರಿಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿವೆ. ಹಿಂದಿ ಭಾಷೆಯ ದೃಶ್ಯಂ ಮೊದಲ ಭಾಗವನ್ನು ನಿರ್ಮಾಪಕ ದಿವಂಗತ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದರು. ರಾಕ್‌ಸ್ಟಾರ್ ಡಿಎಸ್‌ಪಿ (ದೇವಿ ಶ್ರೀ ಪ್ರಸಾದ್) ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ: 'ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ' - ರಿಷಬ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.