ETV Bharat / entertainment

ಹೆಡ್ ಬುಷ್ ಸಿನಿಮಾ ಪ್ರಚಾರ ಜೋರು.. ಸಂದರ್ಶನಕಾರನಾದ ನಟ ರಾಕ್ಷಸ

author img

By

Published : Oct 4, 2022, 4:31 PM IST

Updated : Oct 5, 2022, 11:18 AM IST

ಮಾನ್ಸೂನ್ ರಾಗ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಧನಂಜಯ್ ಸದ್ಯ ಹೆಡ್ ಬುಷ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

dolly dhananjay interwiew to yogi
ಹೆಡ್ ಬುಷ್ ಸಿನಿಮಾ ಪ್ರಚಾರ

ಅದ್ಭುತ ಅಭಿನಯ ಮೂಲಕ ನಟ ರಾಕ್ಷಸ ಎಂದು ಗುರುತಿಸಿಕೊಂಡು ಬಹು ಬೇಡಿಕೆ ನಟನಾಗಿ ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿರುವ ನಟ‌ ಡಾಲಿ ಧನಂಜಯ್. ಮಾನ್ಸೂನ್ ರಾಗ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಧನಂಜಯ್ ಸದ್ಯ ತಮ್ಮ ಡಾಲಿ ಪಿಕ್ಚರ್ ಅಡಿ ನಿರ್ಮಾಣವಾಗಿರುವ ಹೆಡ್ ಬುಷ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಡಾನ್ ಜಯರಾಜ್ ಪಾತ್ರ ಮಾಡಿರುವ ಧನಂಜಯ್ ಈ ಪಾತ್ರಕ್ಕಾಗಿ ತಮ್ಮ ತೂಕ ಹೆಚ್ಚಿಸಿಕೊಂಡು ಅಭಿನಯಿಸಿದ್ದಾರೆ. ಧನಂಜಯ್ ಅಲ್ಲದೇ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಕ್ರೇಜಿ ಸ್ಟಾರ್ ರವಿಚಂದ್ರನ್, ದೇವರಾಜ್ ಹೀಗೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.

  • " class="align-text-top noRightClick twitterSection" data="">

ಈ ಹಿನ್ನೆಲೆ ಡಾಲಿ ಧನಂಜಯ್ ಈ ಸಿನಿಮಾದ ಪ್ರಚಾರವನ್ನು ಬಹಳ ಡಿಫ್ರೆಂಟ್ ಆಗಿ ಮಾಡುತ್ತಿದ್ದಾರೆ. ಲೂಸ್ ಮಾದ ಯೋಗಿ ಅವರನ್ನು ಡಾಲಿ ಸಂದರ್ಶನ ಮಾಡುವ ಮೂಲಕ ತಮ್ಮ ಸಿನಿಮಾ ಜರ್ನಿಯ ಬಗ್ಗೆ ಸಾಕಷ್ಟು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಹೆಡ್ ಬುಷ್ ಟ್ರೈಲರ್ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ.1970ರ ಸಮಯದ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಚಿತ್ರದ ನಿರ್ದೇಶಕ ಶೂನ್ಯ ಮಾಡಿದ್ದಾರೆ.
ಇನ್ನು ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಪಾಯಲ್ ರಜಪೂತ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ಸಹ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನವಿದೆ. ಇದೇ ವರ್ಷ ಅಕ್ಟೋಬರ್ 21ರಂದು ಸಿನಿಮಾ ಬಿಡುಗಡೆಯಾಗಲಿದ್ದು ಪ್ರಚಾರ ಜೋರಾಗಿದೆ. ಜಯರಾಜ್ ಕ್ಯಾರೆಕ್ಟರ್​ನಲ್ಲಿ ಡಾಲಿ ಹೇಗೆ ಕಾಣ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: 'ಬಲ್ಲಾಳ ದೇವ'ನ ಕಚೇರಿಗೆ ಬಂತು ಅದ್ಬುತ ಗಿಫ್ಟ್​.. ಪವರ್​ ಸ್ಟಾರ್​ ಪುತ್ಥಳಿ ಸ್ಮರಣಿಕೆಗೆ ರಾಣಾ ಖುಷ್​

Last Updated : Oct 5, 2022, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.