ಭಾರತೀಯ ಸಿನಿ ಜಗತ್ತಿನ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಇತ್ತೀಚೆಗಷ್ಟೇ ವೈವಾಹಿಕ ಬಂಧನಕ್ಕೆ ಒಳಗಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಉದ್ಯಮಿ ಸೊಹೈಲ್ ಕಥುರಿಯಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಪತ್ನಿ ವಿಶೇಷವಾಗಿ ಶುಭ ಕೋರಿದ್ದಾರೆ. ನಟಿ ತನ್ನ ಪತಿಯೊಂದಿಗಿನ ಸುಮಧುರ ಕ್ಷಣಗಳ ವಿಡಿಯೋ ಹಂಚಿಕೊಂಡು ಅವರ ಜನ್ಮದಿನವನ್ನು ವಿಶೇಷವಾಗಿಸಿದ್ದಾರೆ.
- " class="align-text-top noRightClick twitterSection" data="
">
ಪತಿ ಸೊಹೈಲ್ ಕಥುರಿಯಾ ಜೊತೆಗೆ ಕಳೆದ ಉತ್ತಮ ಕ್ಷಣಗಳ ವಿಡಿಯೋವನ್ನು ಹನ್ಸಿಕಾ ಮೋಟ್ವಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಹ್ಯಾಪಿ ಬರ್ತ್ ಡೇ ಬೇಬಿ' ಎಂದು ಬರೆದುಕೊಂಡಿದ್ದಾರೆ. ಹನ್ಸಿಕಾ ಅವರ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸೊಹೈಲ್ ಲವ್ ಯೂ ಬೇಬಿ ಎಂದು ಬರೆಯುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಈ ರೊಮ್ಯಾಂಟಿಕ್ ವಿಡಿಯೋದಲ್ಲಿ ಹನ್ಸಿಕಾ ಮತ್ತು ಸೊಹೈಲ್ ಅವರ ಪ್ರಯಾಣದ ನೆನಪುಗಳಿವೆ.
ಇದಲ್ಲದೇ ಹನ್ಸಿಕಾ ಮೋಟ್ವಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುಂದರ ಚಿತ್ರ, ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಹನ್ಸಿಕಾ "ವೀಕೆಂಡ್ ಇನ್ ಕ್ರಾಬಿ" ಎಂದು ಬರೆದಿದ್ದಾರೆ. ಕ್ರಾಬಿ ನಗರವು ಥಾಯ್ಲೆಂಡ್ನಲ್ಲಿದ್ದು, ಬಹಳ ಸುಂದರ ಪ್ರದೇಶ. ಇಲ್ಲಿಂದ ಹನ್ಸಿಕಾ ಅವರು ತಮ್ಮ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ನಟಿಯ ಪತಿ ಸೇರಿದಂತೆ ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ. ಇನ್ಸ್ಟಾ ಕಾಮೆಂಟ್ ಸೆಕ್ಷನ್ ಫೈಯರ್, ಹಾರ್ಟ್ ಎಮೋಜಿಗಳಿಂದ ತುಂಬಿದೆ. ಈ ಚಿತ್ರಗಳೀಗ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.
- " class="align-text-top noRightClick twitterSection" data="
">
ಹನ್ಸಿಕಾ ಅವರು ಸೊಹೈಲ್ ಕಥುರಿಯಾ (ವಿಚ್ಛೇದಿತ) ಅವರನ್ನು ಕೆಲ ದಿನಗಳ ಹಿಂದೆ ಮದುವೆ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ತಮ್ಮ ಸ್ನೇಹಿತೆಯ ಪತಿಯನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ನಟಿಯನ್ನು ಟ್ರೋಲ್ ಮಾಡಿದ್ದಾರೆ. ಮತ್ತೊಂದೆಡೆ, ಹನ್ಸಿಕಾ ಮತ್ತು ಅವರ ತಾಯಿ ಸಾಮಾಜಿಕ ಮಾಧ್ಯಮದಲ್ಲಿ ಬಂದ ಈ ಎಲ್ಲ ಆರೋಪಗಳನ್ನು ಆಧಾರರಹಿತ ಎಂದು ಹೇಳಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಜೈಪುರದ 450 ವರ್ಷಗಳ ಹಳೇ ಪುರಾತನ ಮಂಡೋಟಾ ಅರಮನೆಯಲ್ಲಿ ಹನ್ಸಿಕಾ ಸೊಹೈಲ್ ವಿವಾಹ ಸಮಾರಂಭ ಬಹಳ ಅದ್ಧೂರಿಯಾಗಿ ಜರುಗಿತ್ತು. ಮದುವೆಯ ಫೋಟೋಗಳನ್ನು ಈ ದಂಪತಿ ಹಂಚಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದರು.
ಇದನ್ನೂ ಓದಿ: ತಾಯ್ನಾಡಿಗೆ ಹಿಂತಿರುಗಿದ RRR ಖ್ಯಾತಿಯ ನಟ ರಾಮ್ಚರಣ್ಗೆ ಅದ್ದೂರಿ ಸ್ವಾಗತ
ಇನ್ನು ಮದುವೆಗೂ ಮುನ್ನ ಸೊಹೈಲ್ ಅವರು ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಪ್ಯಾರಿಸ್ನ ಐಫೆಲ್ ಟವರ್ನ ಎದುರು ಪ್ರಪೋಸ್ ಮಾಡಿದ್ದರು. ಈ ಪ್ರೇಮ ನಿವೇದನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಮೊಣಕಾಲು ಊರಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿರುವ ಫೋಟೋಗಳು ಇವಾಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದಿನಿಂದಲೇ ಇವರ ಪ್ರೇಮ, ಮದುವೆ ವಿಚಾರಗಳು ಅಭಿಮಾನಿಗಳ ಮನೆ ಸೆಳೆದಿದ್ದು ಹೆಚ್ಚು ಸದ್ದು ಮಾಡಿತ್ತು. ವಿವಾಹ ಸಮಾರಂಭ ಕೂಡ ಅದ್ಧೂರಿಯಾಗಿಯೇ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಇದನ್ನೂ ಓದಿ: ಟಾಲಿವುಡ್ ಪವರ್ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ಕಬ್ಜ ನಿರ್ದೇಶಕ ಆರ್ ಚಂದ್ರು?!