ಕನ್ನಡ ಸಿನಿಮಾ ರಂಗ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ತನ್ನ ಆ್ಯಕ್ಟಿಂಗ್ ಖದರ್ ನಿಂದಲೇ ಛಾಪು ಮೂಡಿಸಿರೋ ನಟ ಕಿಚ್ಚ ಸುದೀಪ್. ಸದ್ಯ ರಿಯಾಲಿಟಿ ಶೋ ಮುಗಿಸಿದ್ಧಾರೆ. ಮತ್ತೊದೆಡೆ ಪೈಲ್ವಾನ್, ವಿಕ್ರಾಂತ್ ರೋಣ ಸಿನಿಮಾ ನಂತರ ಏನು ಮಾಡ್ತಾ ಇದ್ದಾರೆ? ಅನ್ನೋದು ಸಿನಿಮಾ ಅಭಿಮಾನಿಗಳು ಅಲ್ಲದೇ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಆದರೆ ಈ ಆರಡಿ ಕಟೌಟ್ ಮಾತ್ರ ಫ್ಯಾಮಿಲಿ ಜೊತೆಗೆ ಮತ್ತು ಸಿನಿಮಾ ಸ್ನೇಹಿತರ ಜೊತೆ ಕ್ರಿಕೆಟ್ ಆಡುವ ಮುಖಾಂತರ ರಿಲ್ಯಾಕ್ಸ್ ಮೂಡ್ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ನಂತರ ಯಾವ ನಿರ್ದೇಶಕನ ಜೊತೆ ಸಿನಿಮಾ ಮಾಡ್ತಾರೆ? ಯಾವ ನಿರ್ಮಾಣ ಸಂಸ್ಥೆ? ಈ ಬಾರಿ ಯಾವ ರೀತಿಯ ಸಿನಿಮಾ ಮಾಡಬೇಕು ಅಂತಾ ಸುದೀಪ್ ತಲೆಯಲ್ಲಿ ಸಾಕಷ್ಟು ಯೋಚನೆಗಳು ಓಡುತ್ತಿವೆ. ಆದರೆ, ಈ ರನ್ನ ಮೈಂಡಙ್ಗೆ ಪ್ರೀ ಬಿಟ್ಟು ಸಿನಿಮಾ ಸ್ನೇಹಿತರಾದ ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಜೆ.ಕೆ, ಸುನೀಲ್ ರಾವ್, ರಾಜೀವ್ ಹಾಗೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಜೊತೆ ಸೇರಿ ಸಿನಿಮಾ ಪತ್ರಕರ್ತರ ಜೊತೆ ಕ್ರಿಕೆಟ್ ಮ್ಯಾಚ್ ಆಡುವ ಮೂಲಕ ರಿಲ್ಯಾಕ್ಸ್ ಮಾಡುತ್ತಾ ಇದ್ದಾರೆ.
ಹೌದು ಸುದೀಪ್ ಯಲಹಂಕದ ರಾಜನಾಕುಂಟೆಯಲ್ಲಿರೋ ಜೆಸ್ಟ್ ಕ್ರಿಕೆಟ್ ಮೈದಾನದಲ್ಲಿ ಸಿನಿಮಾ ಪತ್ರಕರ್ತರ ಜೊತೆ ಕ್ರಿಕೆಟ್ ಮ್ಯಾಚ್ ಆಡಿದ್ದಾರೆ. ಈ ಮಧ್ಯೆ ಸುದೀಪ್ ಸಿಸಿಎಲ್ ಕ್ರಿಕೆಟ್ ಮ್ಯಾಚ್ ಬಗ್ಗೆ ನಿರ್ಮಾಪಕರಾದ ಜಾಕ್ ಮಂಜು, ನಿರ್ದೇಶಕ ನಂದ ಕಿಶೋರ್ ಸೇರಿದಂತೆ ಕೆಲ ಸ್ನೇಹಿತರ ಜೊತೆ ಒಂದು ಮೀಟಿಂಗ್ ಕೂಡ ಮಾಡಲಾಗಿದೆ.
ಸಿಸಿಎಲ್ ಕ್ರಿಕೆಟ್ ಮ್ಯಾಚ್ಗೆ ರೆಡಿ: ಇನ್ನು ಕೆಲವು ದಿನಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರೋ ಬಾನದಾರಿಯಲ್ಲಿ ಚಿತ್ರತಂಡ ಕೂಡ ಸಿನಿಮಾ ಪತ್ರಕರ್ತರ ತಂಡದ ನಡುವೆ ಕ್ರಿಕೆಟ್ ಮ್ಯಾಚ್ ಆಟವನ್ನು ಆಡಲಾಗಿತ್ತು. ಇದೀಗ ಸುದೀಪ್ ನೇತೃತ್ವದ ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ರಾಜೀವ್ , ಭಜರಂಗಿ ಲೋಕಿ, ಜೆ.ಕೆ, ಎಕ್ಸ್ ಕ್ಯೂಸ್ ಮಿ ಸಿನಿಮಾದ ನಟ ಸುನೀಲ್ ರಾವ್, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸೇರಿದಂತೆ ಸಾಕಷ್ಟು ಸಿನಿಮಾ ಸ್ನೇಹಿತರ ಜೊತೆ ಸಿನಿಮಾ ಪತ್ರಕರ್ತರ ಜೊತೆ ಕ್ರಿಕೆಟ್ ಆಟವನ್ನು ಆಡಿದ್ದಾರೆ.
ಈ ಮುಖಾಂತರ ಕಿಚ್ಚ ಮುಂದಿನ ತಿಂಗಳು ಫೆಬ್ರವರಿಯಲ್ಲಿ ನಡೆಯುವ ಸಿಸಿಎಲ್ ಕ್ರಿಕೆಟ್ ಮ್ಯಾಚ್ಗೆ ಕಿಚ್ಚನ ಬಳಗ ಸೈಲೆಂಟ್ ಆಗಿ ರೆಡಿಯಾಗುತ್ತಿದೆ ಎನ್ನಲಾಗಿದೆ. ಇನ್ನು ಕಿಚ್ಚ ಸುದೀಪ್ ಸಿನಿಮಾ ಸ್ಟಾರ್ ಆಗಲಿಲ್ಲ ಅಂದಿದ್ದರೆ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಆಡುವ ಕನಸು ಕಂಡಿದ್ದರು. ಅದರಂತೆ ಕರ್ನಾಟಕ ರಣಜಿ ತಂಡದಲ್ಲಿ ಒಮ್ಮೆ ಆಡಿರುವ ಕಿಚ್ಚ, ಸಿನಿಮಾ ಸ್ಟಾರ್ ಆಗಿದ್ದರೂ ಕೂಡ ಇವತ್ತಿಗೂ ಕ್ರಿಕೆಟ್ ಆಟವನ್ನು ಆಡೋದರಲ್ಲಿ ಸದಾ ಮುಂದೆ ಇರ್ತಾರೆ ಅನ್ನೋದು ಖುಷಿಯ ವಿಚಾರ.
ಅಲ್ಲದೇ ಅಂತಾರಾಷ್ರ್ಟೀಯ ಕ್ರಿಕೆಟ್ ಆಟಗಾರರ ಜೊತೆಗೂ ಕಿಚ್ಚ ಸುದೀಪ್ ಉತ್ತಮ ಸ್ನೇಹ ಸಂಪಾದನೆ ಮಾಡಿದ್ದಾರೆ. ಈ ಸ್ನೇಹಕ್ಕೆ ಆಟಗಾರರು ಜೆರ್ಸಿ, ಕ್ಯಾಪ್, ಬ್ಯಾಟ್ ಹೀಗೆ ಮುಂತಾದವುಗಳನ್ನು ಕಿಚ್ಚನಿಗೆ ಕಳುಹಿಸಿ ಕೊಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರರೊಂದಿಗೂ ಸಂಪರ್ಕದಲ್ಲಿದ್ಧಾರೆ.
ಇದನ್ನೂ ಓದಿ :ಕಾಂತಾರ ಚಿತ್ರದ ಜೊತೆಗೆ ಪ್ರತಿಷ್ಠಿತ ಆಸ್ಕರ್ ರೇಸ್ ಪ್ರವೇಶ ಪಡೆದ ವಿಕ್ರಾಂತ್ ರೋಣ!