ಶೀರ್ಷಿಕೆಯಿಂದಲೇ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ ಚಿತ್ರ 'ಘೋಸ್ಟ್'. ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿರುವ ಪ್ಯಾನ್ ಇಂಡಿಯಾ ಸಿನಿಮಾ ಇದು. ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿರೋ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅಕ್ಟೋಬರ್ 19 ರಂದು ವಿಶ್ವಾದ್ಯಂತ ತೆರೆ ಕಾಣಲು ಸಜ್ಜಾಗಿರುವ ಈ ಚಿತ್ರದ ಟ್ರೇಲರ್ ಅಕ್ಟೋಬರ್ 1 ರಂದು ಬಿಡುಗಡೆಯಾಗಲಿದೆ.
ಟೀಸರ್ನಿಂದಲೇ ಹೊಸ ಬಗೆಯ ಕ್ರೇಜ್ ಕ್ರಿಯೇಟ್ ಮಾಡಿರುವ ಘೋಸ್ಟ್ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಕರುನಾಡ ಚಕ್ರವರ್ತಿ ಶಿವಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ, ನಿರ್ದೇಶಕ ಶ್ರೀನಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ಪ್ರೀ ಬ್ಯುಸಿನೆಸ್ ಜೋರಾಗಿದೆ. ಜೊತೆಗೆ ಅಕ್ಟೋಬರ್ ಮೊದಲ ವಾರ ಘೋಸ್ಟ್ ಚಿತ್ರದ ಪ್ರಚಾರಕ್ಕಾಗಿ ಶಿವ ರಾಜ್ಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳಲಿದ್ದಾರೆ.
-
"Get ready for an adrenaline-packed ride! Renowned director @ssrajamouli sir will be unveiling the Telugu trailer of our action-packed thriller #GHOST at 11 AM on the T-Series YouTube channel. Set your alarms! 🎥👻 #GHOSTTrailer #Rajamouli #Tseries"@NimmaShivanna @SandeshPro… pic.twitter.com/hep0mx5Qtl
— SRINI (@lordmgsrinivas) September 29, 2023 " class="align-text-top noRightClick twitterSection" data="
">"Get ready for an adrenaline-packed ride! Renowned director @ssrajamouli sir will be unveiling the Telugu trailer of our action-packed thriller #GHOST at 11 AM on the T-Series YouTube channel. Set your alarms! 🎥👻 #GHOSTTrailer #Rajamouli #Tseries"@NimmaShivanna @SandeshPro… pic.twitter.com/hep0mx5Qtl
— SRINI (@lordmgsrinivas) September 29, 2023"Get ready for an adrenaline-packed ride! Renowned director @ssrajamouli sir will be unveiling the Telugu trailer of our action-packed thriller #GHOST at 11 AM on the T-Series YouTube channel. Set your alarms! 🎥👻 #GHOSTTrailer #Rajamouli #Tseries"@NimmaShivanna @SandeshPro… pic.twitter.com/hep0mx5Qtl
— SRINI (@lordmgsrinivas) September 29, 2023
ಸಿನಿಮಾ ಬಿಡುಗಡೆಗೂ ಮುನ್ನ 'ಘೋಸ್ಟ್' ಚಿತ್ರದ ಟ್ರೇಲರ್ ಅಕ್ಟೋಬರ್ 1 ರಂದು ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ತೆಲುಗು ಟ್ರೇಲರ್ ಅನ್ನು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಬಿಡುಗಡೆಗೊಳಿಸಲಿದ್ದಾರೆ. ಈ ವಿಚಾರವನ್ನು ತಿಳಿಸಲು ಚಿತ್ರತಂಡ ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡಿದೆ.
ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಶ್ರೀನಿ, "ಅಡ್ರಿನಾಲಿನ್-ಪ್ಯಾಕ್ಡ್ ರೈಡ್ಗೆ ಸಿದ್ಧರಾಗಿ! ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅರ್ ಅವರು ನಮ್ಮ ಆಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಘೋಸ್ಟ್ನ ತೆಲುಗು ಟ್ರೇಲರ್ ಅನ್ನು ಅಕ್ಟೋಬರ್ 1 ರಂದು ಬೆಳಗ್ಗೆ 11 ಗಂಟೆಗೆ T-Series ಯೂಟ್ಯೂಬ್ ಚಾನೆಲ್ನಲ್ಲಿ ಅನಾವರಣಗೊಳಿಸಲಿದ್ದಾರೆ. set your alarms!" ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸೇರಿದಂತೆ ಉಳಿದೆಲ್ಲಾ ಭಾಷೆಗಳಲ್ಲೂ ಘೋಸ್ಟ್ ಚಿತ್ರದ ಟ್ರೇಲರ್ ಅಕ್ಟೋಬರ್ 1 ರಂದೇ ಬಿಡುಗಡೆಯಾಗಲಿದೆ. ತೆಲುಗು ಟ್ರೇಲರ್ ಬೆಳಗ್ಗೆ 11 ಗಂಟೆಗೆ ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ ಆರ್ಆರ್ಆರ್ ಖ್ಯಾತಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಅನಾವರಣಗೊಳಿಸಲಿದ್ದಾರೆ ಎಂಬುದು ಗಮನಾರ್ಹ ವಿಚಾರ.
#AskNimmaShivanna ಸೆಷನ್: 'ಘೋಸ್ಟ್' ಸಿನಿಮಾದ ಪ್ರಚಾರವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ. ಅದರ ಭಾಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಎಕ್ಸ್ನಲ್ಲಿ #AskNimmaShivanna ಸೆಷನ್ ನಡೆಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಶ್ನೆಗಳಿಗೆ ಶಿವಣ್ಣ ತುಂಬಾ ಸೂಕ್ತವಾದ ಉತ್ತರಗಳನ್ನು ನೀಡಿದ್ದಾರೆ.
ಚಿತ್ರತಂಡ ಹೀಗಿದೆ.. ನಿರ್ದೇಶಕ ಶ್ರೀನಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ 'ಘೋಸ್ಟ್' ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳಿವೆ. ಬಾಲಿವುಡ್ ನಟ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುತ್ತಿರುವ ಸಿನಿಮಾಗೆ ಸಂದೇಶ್ ಎನ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ. ಅಕ್ಟೋಬರ್ 19ರಂದು ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ.
ಇದನ್ನೂ ಓದಿ: ಸರ್ಪ್ರೈಸ್! 'ಘೋಸ್ಟ್' ಕುರಿತು ವಿಡಿಯೋ ಕಾಲ್ನಲ್ಲಿ ಅನುಪಮ್ ಖೇರ್- ಶಿವಣ್ಣ ಮಾತುಕತೆ