ETV Bharat / entertainment

ಹೊರರಾಜ್ಯ, ವಿದೇಶಗಳಲ್ಲೂ ಹಾರಾಡಲಿದೆ 'ಗಾಳಿಪಟ-2' - ಗಾಳಿಪಟ 2 ಸಿನೆಮಾ ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಯೋಗರಾಜ್ ಭಟ್ ಜೋಡಿ ಮತ್ತೆ ಕಮಾಲ್​ ಮಾಡಲು ರೆಡಿಯಾಗಿದೆ. ಕರ್ನಾಟಕದಲ್ಲಷ್ಟೇ ಅಲ್ಲದೇ ಹೊರರಾಜ್ಯಗಳು ಹಾಗೂ ಹೊರದೇಶಗಳಲ್ಲೂ ಗಾಳಿಪಟ-2 ಚಿತ್ರ ತೆರೆಕಾಣಲು ಸಜ್ಜಾಗಿದೆ.

galipata-2-movie-to-release-on-may-12-in-many-states
ಗಾಳಿಪಟ 2
author img

By

Published : May 9, 2022, 5:56 PM IST

2008ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ 'ಗಾಳಿಪಟ'. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್​​ನಲ್ಲಿ ಬಂದ ಈ ಸಿನಿಮಾ ಸೂಪರ್ ಹಿಟ್ ಆಗುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಇದೀಗ 'ಗಾಳಿಪಟ 2' ಸಿನಿಮಾ ರಿಲೀಸ್​ ಆಗುತ್ತಿದ್ದು, ಗಣೇಶ್, ಯೋಗರಾಜ್ ಭಟ್ ಜೋಡಿ ಮತ್ತೆ ಕಮಾಲ್​ ಮಾಡಲು ಸಿದ್ಧವಾಗಿದೆ.

ಸದ್ಯ ಪೋಸ್ಟರ್ ಹಾಗು ಹಾಡುಗಳಿಂದ ಗಮನ ಸೆಳೆದಿರುವ 'ಗಾಳಿಪಟ 2' ಸಿನಿಮಾ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ, ಆಗಸ್ಟ್ 12ರಂದು ಬಿಡುಗಡೆಯಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ದಿಗಂತ್, ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ವಿಭಿನ್ನ ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲದೇ ಹೊರರಾಜ್ಯಗಳು ಹಾಗೂ ಹೊರದೇಶಗಳಲ್ಲೂ ಗಾಳಿಪಟ 2 ಹಾರಾಡಲು ಸಜ್ಜಾಗಿದೆ.

galipata-2-movie-to-release-on-may-12-in-many-states
ಗಾಳಿಪಟ 2 ಚಿತ್ರತಂಡ

ಸೆನ್ಸಾರ್ ಮಂಡಳಿಯಲ್ಲಿ ಸಿನಿಮಾಗೆ ಯಾವುದೇ ಕಟ್ ಇಲ್ಲದೇ ಯು/ಎ ಸರ್ಟಿಫಿಕೆಟ್ ಸಿಕ್ಕಿದ್ದು, ಔಟ್ ಆ್ಯಂಡ್ ಔಟ್ ಕಾಮಿಡಿ ಕಚಗುಳಿ ಜೊತೆಗೆ ಕುಟುಂಬಗಳ ಬಾಂಧವ್ಯದ ಕಥೆ ಹೊಂದಿದೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಹಿರಿಯ ನಟ ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾರಾವ್, ಋಷಿ, ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಗಾಳಿಪಟ 2 ಪೋಸ್ಟರ್​

ಬಹಳ ದಿನಗಳ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಗಾಳಿಪಟ 2 ಜನಮನ ಗೆದ್ದಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಪರೀಕ್ಷೆ ಹಾಡಿಗೆ ಭಾರಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ದೇಶದ ವಿವಿಧೆಡೆ ಅಂದ್ರೆ ಹೈದರಾಬಾದ್, ಮುಂಬೈ, ದೆಹಲಿ ಹಾಗೂ ವಿದೇಶಗಳಲ್ಲೂ ಬಿಡುಗಡೆ ಆಗುತ್ತಿದೆ. ಚಿತ್ರವು ಕನ್ನಡ ಭಾಷೆಯಲ್ಲಿಯೇ ಇರಲಿದ್ದು, ಇಂಗ್ಲಿಷ್ ಸಬ್ ಟೈಟಲ್​ನೊಂದಿಗೆ ತೆರೆಕಾಣಲಿದೆ.

ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಕೆಜಿಎಫ್​ 2 ಪ್ರದರ್ಶನ.. ಈ ದಾಖಲೆ ಬರೆದ ಮೊದಲ ಕನ್ನಡ ಚಿತ್ರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.