ETV Bharat / entertainment

'ಆದಿಪುರುಷ್​ ವಿಷಯದಲ್ಲಿ ಆ ದೇವರು ಕೂಡ ನಿಮ್ಮನ್ನು ಕ್ಷಮಿಸಲ್ಲ': ಮನೋಜ್ ದೇಸಾಯಿ - kriti sanon

'ಆದಿಪುರುಷ್​' ಸಿನಿಮಾ ಬಗ್ಗೆ ಗೈಟಿ ಗ್ಯಾಲಾಕ್ಸಿಯ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Gaiety Galaxy executive director slams Adipurush team
ಆದಿಪುರುಷ್​ ಬಗ್ಗೆ ಮನೋಜ್ ದೇಸಾಯಿ ಟೀಕೆ
author img

By

Published : Jun 24, 2023, 11:41 AM IST

ಪೌರಾಣಿಕ ಸಿನಿಮಾ 'ಆದಿಪುರುಷ್​' ಮೇಲೆ ಟೀಕೆಗಳ ಸುರಿಮಳೆ ಮುಂದುವರಿದಿದೆ. ಕಂಟೆಂಟ್, ವಿಎಫ್‌ಎಕ್ಸ್, ಡೈಲಾಗ್ಸ್​​ ಮತ್ತು ಪಾತ್ರಗಳ ಚಿತ್ರೀಕರಣದಲ್ಲಿ ನಿರ್ದೇಶಕರು ಮಾಡಿದ ತಪ್ಪುಗಳನ್ನು ಪ್ರೇಕ್ಷಕರು ಕಂಡು ಹಿಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ, ಗೈಟಿ ಗ್ಯಾಲಾಕ್ಸಿಯ (Gaiety Galaxy) ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ಅವರು ಇದೇ ವಿಷಯಕ್ಕೆ ಸಂಬಂಧಿಸಿದಂತೆ 'ಆದಿಪುರುಷ್​​' ಚಿತ್ರತಂಡವನ್ನು ಟೀಕಿಸಿದ್ದಾರೆ. ಆದಿಪುರುಷ್​​ ವಿಷಯದಲ್ಲಿ ನಿಮ್ನನ್ನು ದೇವರೂ ಕೂಡ ಕ್ಷಮಿಸುವುದಿಲ್ಲ ಎಂದು ಸಿಡಿದೆದ್ದಿದ್ದಾರೆ.

ಥಿಯೇಟರ್ ಮಾಲೀಕರಿಗೆ ನಷ್ಟ: "ಪ್ರೇಕ್ಷಕರು ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ. ನಿನ್ನೆ ಎರಡು ಶೋಗಳನ್ನು ರದ್ದುಗೊಳಿಸಲಾಗಿದೆ. ನೆಗೆಟಿವ್ ಟಾಕ್​​ ಬಂದಿದ್ದರಿಂದ ಇಂದಿನ ಪ್ರದರ್ಶನಗಳನ್ನು ಕೂಡ ರದ್ದುಗೊಳಿಸಬೇಕಾಗಿದೆ. ಶೀಘ್ರದಲ್ಲೇ ಈ ಚಿತ್ರವನ್ನು ಥಿಯೇಟರ್‌ಗಳಿಂದ ತೆಗೆದುಹಾಕಲಾಗುತ್ತದೆ. ಅಂತಹ ದಿನ ಬರುತ್ತದೆ ಎಂದು ನಾವು ಎಂದಿಗೂ ಯೋಚಿಸಿರಲಿಲ್ಲ. ನಮ್ಮ ಥಿಯೇಟರ್​ನಲ್ಲಿ ಮಾತ್ರವಲ್ಲ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಥಿಯೇಟರ್ ಮಾಲೀಕರಿಗೆ ಈಗಾಗಲೇ ನಷ್ಟವಾಗಿದೆ. ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು (ಆದಿಪುರುಷ್ ನಿರ್ಮಾಪಕರು). ಈ ಚಿತ್ರವು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಚಿತ್ರ ನಿರ್ಮಾಣದಲ್ಲಿ ತೊಡಗಿರುವ ಎಲ್ಲರಿಗೂ, ಅದರಲ್ಲೂ ಮುಖ್ಯವಾಗಿ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಅಸಮಾಧಾನ ಹೊರಹಾಕಿದರು.

ಬಿಡುಗಡೆಯಾದ ಬಳಿಕದ ಬದಲಾವಣೆಯಲ್ಲಿ ಅರ್ಥವಿಲ್ಲ: ವಿವಾದಾತ್ಮಕ ಸಂಭಾಷಣೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಆದರೆ ಅದು ಬಹಳ ತಡವಾಗಿತ್ತು. ಬಿಡುಗಡೆ ಆದ ನಂತರ ಚಿತ್ರದಲ್ಲಿನ ಸಂಭಾಷಣೆಗಳನ್ನು ಬದಲಾಯಿಸುವುದರಲ್ಲಿ ಅರ್ಥವಿಲ್ಲ ಎಂದು ಮನೋಜ್ ದೇಸಾಯಿ ಹೇಳಿದರು.

ನೇಪಾಳದಲ್ಲಿ ಭಾರತೀಯ ಸಿನಿಮಾ ಪ್ರದರ್ಶನ ಪ್ರಾರಂಭ: ಸೀತೆ ಭಾರತದ ಮಗಳು ಎಂಬ ಡೈಲಾಗ್​​ ನೇಪಾಳ ಸರ್ಕಾರವನ್ನು ಕೆರಳಿತ್ತು. ಆದಿಪುರುಷ್​​ ಸಿನಿಮಾದ ಜೊತೆಗೆ ಎಲ್ಲಾ ಭಾರತೀಯ ಸಿನಿಮಾಗಳೂ ರದ್ದಾಗಿದ್ದವು. ಆದರೆ, ಇದೀಗ ನಿಷೇಧ ತೆರವುಗೊಂಡಿದ್ದು, ಶುಕ್ರವಾರದಿಂದ 'ಆದಿಪುರುಷ್​​' ಚಿತ್ರ ಬಿಟ್ಟು ಉಳಿದೆಲ್ಲ ಚಿತ್ರಗಳ ಪ್ರದರ್ಶನ ಪುನರಾರಂಭಗೊಂಡಿದೆ. ಇದನ್ನು ನೇಪಾಳ ಮೋಷನ್ ಪಿಕ್ಚರ್ ಅಸೋಸಿಯೇಷನ್ ತನ್ನ ​​ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ವಿಡಿಯೋ: ತಂದೆಯಾದ ಖುಷಿ ವ್ಯಕ್ತಪಡಿಸಿ​, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಮ್‌ ಚರಣ್

ಆದಿಪುರುಷ್​​ 8ನೇ ದಿನದ ಕಲೆಕ್ಷನ್ಸ್: ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಕುಸಿತ ಕಂಡಿದೆ. ಆದಿಪುರುಷ್​​ ಬಿಡುಗಡೆ ಆದ 8ನೇ ದಿನ ಕೇವಲ 3.25 ಕೋಟಿ ರೂ. ಸಂಗ್ರಹವಾಗಿದೆ. ಥಿಯೇಟರ್​ಗಳಲ್ಲಿ ಆಕ್ಯುಪೆನ್ಸಿ ದರ ಇರುವ ಕಾರಣ ಕೆಲ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಿಚ್ಚ 46: ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಅಭಿನಯ ಚಕ್ರವರ್ತಿ ಸುದೀಪ್​

ಓಂ ರಾವುತ್​ ನಿರ್ದೇಶನದ ಆದಿಪುರುಷ್​ ಸಿನಿಮಾವನ್ನು ಟಿ ಸೀರಿಸ್ 500 ಕೋಟಿ ರೂ. ಬಿಗ್​ ಬಜೆಟ್‌ನಲ್ಲಿ ನಿರ್ಮಿಸಿದೆ. ಪ್ರಭಾಸ್, ಕೃತಿ ಸನೋನ್, ಸನ್ನಿ ಸಿಂಗ್, ದೇವದತ್ತ ಮತ್ತು ಸೈಫ್ ಅಲಿ ಖಾನ್ ಅಭಿನಯಿಸಿರುವ ಈ ಸಿನಿಮಾ ಕಳೆದ ಶುಕ್ರವಾರದಂದು ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ತೆರೆಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.