ETV Bharat / entertainment

Gadar 2 teaser: ಮತ್ತೆ ತಾರಾ ಸಿಂಗ್​ ಆಗಿ ಬರುತ್ತಿದ್ದಾರೆ ನಟ ಸನ್ನಿ ಡಿಯೋಲ್​​ - ನಟ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​

2001ರಲ್ಲಿ ಬ್ಲಾಕ್​ ಬಸ್ಟರ್​ ಆಗಿದ್ದ ಗದಾರ್​: ಏಕ್​ ಪ್ರೇಮ್​ ಕಥಾ ಚಿತ್ರದ ಸೀಕ್ವೆಲ್ ಚಿತ್ರ ಗದಾರ್​ 2​ ಇದೇ ಆಗಸ್ಟ್​​ 11ರಂದು ಬಿಡುಗಡೆ ಆಗುತ್ತಿದೆ.

Gadar 2 teaser: Actor Sunny Deol is coming back as Tara Singh

author img

By

Published : Jun 12, 2023, 3:49 PM IST

ಹೈದ್ರಾಬಾದ್​: ನಟ ರಣಬೀರ್​ ಕಪೂರ್​ ಅಭಿನಯದ ಅನಿಮಲ್​ ಚಿತ್ರದ ಪ್ರೀ ಟೀಸರ್​ ಬಿಡುಗಡೆಯಾದ ಬೆನ್ನಲ್ಲೇ ಇದೀಗ ನಟ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ನಟನೆಯ 'ಗದಾರ್​ 2' ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಗೊಂಡು ಸೂಪರ್​ ಹಿಟ್​​ ಆಗಿದ್ದ ಗದಾರ್​​ ಜೊತೆಗೆ ಗದಾರ್​​ 2 ಟೀಸರ್​​ ಬಿಡುಗಡೆಯಾಗಿದೆ. ಗದಾರ್​ ಚಿತ್ರದ ಸಿಕ್ವೆಲ್​ ಆಗಿರುವ ಈ ಚಿತ್ರ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್​ ಫ್ಲಾಟ್​ಫಾರ್ಮ್​ನಲ್ಲಿ ಧೂಳೆಬ್ಬಿಸುತ್ತಿದೆ.

ತಾರಾ ಸಿಂಗ್​ ಆಗಿ ಮತ್ತೊಮ್ಮೆ ಸನ್ನಿ ಡಿಯೋಲ್​ ಮರಳಿದ್ದಾರೆ ಎಂಬ 'ಗದಾರ್​ 2' ಟೀಸರ್​ ಅನ್ನು ಚಿತ್ರ ತಂಡ ಹಂಚಿಕೊಂಡಿದೆ. ಒಂದು ನಿಮಿಷದ ಈ ಟೀಸರ್​ನಲ್ಲಿ ನಟ ಸನ್ನಿ ಪಾಕಿಸ್ತಾನಕ್ಕೆ ಮರಳುವ ಕುರಿತ ಕಥೆ ಆರಂಭದ ಸುಳಿವನ್ನು ನೀಡಲಾಗಿದೆ. ಚಿತ್ರದಲ್ಲಿ ನಟ ಸನ್ನಿ ಡಿಯೋಲ್​ ತಾರಾ ಸಿಂಗ್​ ಅಗಿ ಸಿಕ್ಕಾಪಟ್ಟೆ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ. ಇನ್ನು ಈ ಚಿತ್ರದ ಟೀಸರ್​ ನೋಡಿದ ಹಲವು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರ ತಂಡ ನಿರೀಕ್ಷೆಗೆ ತಕ್ಕಂತೆ ಈ ಪ್ರೊಮೊಷನ್​ ಮತ್ತು ಟೀಸರ್​ ಬಂದಿಲ್ಲ ಎಂಬ ಮಾತು ಕೇಳಿ ಬಂದಿದೆ.

ಗದಾರ್​ನ ಸಿಕ್ವೆಲ್​ ಭಾಗವನ್ನು ಅನಿಲ್​ ಶರ್ಮಾ ನಿರ್ದೇಶಿಸಿದ್ದಾರೆ. 2001ರಲ್ಲಿ ಬಿಡುಗಡೆಗೊಂಡಿದ್ದ 'ಗದಾರ್​: ಏಕ್​ ಪ್ರೇಮ್​ ಕಹಾನಿ' ಚಿತ್ರ ಬಾಕ್ಸ್​ ಆಫೀಸ್​ ಅನ್ನು ಕೊಳ್ಳೆಹೊಡೆದಿತ್ತು. ನಟಿ ಅಮಿಷಾ ಪಟೇಲ್​, ಅಮರೀಶ್​ ಪುರಿ ನಟನೆಯ ಈ ಚಿತ್ರ ಸೂಪರ್​ ಹಿಟ್​ ಆಗಿತ್ತು. ಇದೀಗ ಎರಡನೇ ಭಾಗ 20 ವರ್ಷಗಳ ಬಳಿಕ ತೆರೆ ಮೇಲೆ ಬರಲು ಸಜ್ಜಾಗಿದೆ. 'ಗದಾರ್​; ದಿ ಕಥಾ ಕಂಟಿನ್ಯೂಸ್'​ ಚಿತ್ರದ ಮೊದಲ ಭಾಗದ ಸಿನಿಮಾದ ಅಂತ್ಯದಿಂದ ಚಿತ್ರ ಆರಂಭವಾಗಲಿದೆ.

ಏನಿದು ಗದಾರ್​ ಕಥೆ: 2001ರಲ್ಲಿ ಬಂದಿದ್ದ 'ಗದಾರ್; ಏಕ್​ ಪ್ರೇಮ್​ ಕಥಾ'​ ಚಿತ್ರದಲ್ಲಿ ನಟ ಸನ್ನಿ ಡಿಯೋಲ್​ ತಾರಾ ಸಿಂಗ್​ ಆಗಿ ಕಾಣಿಸಿಕೊಂಡಿದ್ದರು. ಟ್ರಕ್​ ಡ್ರೈವರ್​ ಆಗಿದ್ದ ಅವರು ಪಾಕಿಸ್ತಾನ ಸೇರಿದ್ದ ತಮ್ಮ ಹೆಂಡತಿ ಅಮಿಷಾ ಅವರನ್ನು ಕರೆ ತರುವ ಕಥೆ ಹೊಂದಿತ್ತು. ಇದೀಗ ಗದಾರ್​ 2 ಚಿತ್ರ 1971ನೇ ಕಾಲಮಾನದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಕಥೆ ಹೊಂದಿರುವುದಾಗಿ ತಂಡ ತಿಳಿಸಿದೆ. ಈ ಚಿತ್ರದಲ್ಲಿ ತಾರಾ ಸಿಂಗ್​ ತಮ್ಮ ಮಗ ಚರಂಜಿತ್​ನನ್ನು ಕರೆ ತರುವ ಕಥೆ ಹೊಂದಿದೆ. ಗದಾರ್​ ಸಿನಿಮಾ ನಿರ್ದೇಶಕ ಅನಿಲ್​ ಶರ್ಮಾ ಅವರ ಮಗ ಉತ್ಕರ್ಷ್​ ಶರ್ಮಾ ಇದರಲ್ಲಿ ತಾರಾ ಸಿಂಗ್​ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗದಾರ್​ ಕೂಡ ಸಂದೀಪ್​ ರೆಡ್ಡಿ ವಾಂಘ ನಿರ್ದೇಶದಕ ಅನಿಮಲ್​ ಮತ್ತು ಅಕ್ಷಯ್​​ ಕುಮಾರ್​ ಅಭಿನಯದ ಒಎಂಜಿ 2 ಜೊತೆ ಬಿಡುಗಡೆಯಾಗಲಿದೆ. ಆಗಸ್ಟ್​ 11ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಈ ಎರಡು ಚಿತ್ರಗಳ ವಿರುದ್ಧ ಫೈಟ್​ ಮಾಡಲು ಸಿದ್ಧವಾಗಿದೆ.

ಇದನ್ನೂ ಓದಿ: Animal pre-teaser: ರಣಬೀರ್​- ರಶ್ಮಿಕಾ ಅಭಿನಯದ 'ಅನಿಮಲ್' ಚಿತ್ರದ​ ಪ್ರಿ-ಟೀಸರ್ ಔಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.