ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಗದರ್ 2' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. 22 ವರ್ಷಗಳ ಹಿಂದಿನ ಬ್ಲಾಕ್ಬಸ್ಟರ್ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರವು ಬಿಡುಗಡೆಯಾದ ನಾಲ್ಕನೇ ದಿನ ಚಿತ್ರ ಸುಮಾರು 40 ಕೋಟಿ ರೂಪಾಯಿಗಳನ್ನು ಗಳಿಸಿದೆ. 'ಗದರ್ 2' ಚಲನಚಿತ್ರ 2001ರ ಬ್ಲಾಕ್ ಬಸ್ಟರ್ 'ಗದರ್ : ಏಕ್ ಪ್ರೇಮ್ ಕಥಾ ಸಿನಿಮಾ'ದ ಮುಂದುವರಿದ ಭಾಗ. ಈ ಸಿನಿಮಾಗೆ ಅನಿಲ್ ಶರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈವರೆಗಿನ ಕಲೆಕ್ಷನ್ ಎಷ್ಟು?: ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಗದರ್ 2 ನಾಲ್ಕನೇ ದಿನದಂದು ಭಾರತದಲ್ಲಿ 39 ಕೋಟಿ ರೂಪಾಯಿ ಗಳಿಸಿದೆ. ಬಿಡುಗಡೆಯಾದ ಮೊದಲ ದಿನ 40.1 ಕೋಟಿ ರೂ., ಎರಡನೇ ದಿನ 43.08 ಕೋಟಿ ರೂ., ಮೂರನೇ ದಿನ 51.7 ಕೋಟಿ ರೂ. ಗಳಿಸಿತ್ತು. ಈ ಮೂಲಕ ಒಟ್ಟಾರೆಯಾಗಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ 173.88 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸ್ವಾತಂತ್ರ್ಯ ದಿನವಾದ ಇಂದು ಚಿತ್ರ 200 ಕೋಟಿ ರೂಪಾಯಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
2001 ರಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆ ಆದಾಗ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲದೇ ಅಮೀರ್ ಖಾನ್ ಅವರ ಆಸ್ಕರ್ ನಾಮ ನಿರ್ದೇಶಿತ 'ಲಗಾನ್' ಚಿತ್ರಕ್ಕೆ ಪೈಪೋಟಿ ಕೊಟ್ಟು ದೊಡ್ಡ ಹೆಸರು ಮಾಡಿತ್ತು. ಇದೀಗ ಗದರ್ 2ನಲ್ಲಿ ಸನ್ನಿ ಡಿಯೋಲ್ ಅವರನ್ನು ಆ್ಯಕ್ಷನ್ ಅವತಾರದಲ್ಲಿ ಪರಿಚಯಿಸಲಾಗಿದೆ. ಈ ಸೀಕ್ವೆಲ್ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಾಣುತ್ತಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿವೆ ಬ್ಲಾಕ್ಬಸ್ಟರ್ ಸೀಕ್ವೆಲ್ಗಳು: OMG 2 vs Gadar 2 ಕಲೆಕ್ಷನ್ ಹೀಗಿದೆ ನೋಡಿ..
ಇನ್ನೂ ಥಿಯೇಟರ್ಗಳಲ್ಲಿ ಈಗಾಗಲೇ ಬಹುನಿರೀಕ್ಷಿತ ಸಿನಿಮಾಗಳೇ ಬಿಡುಗಡೆಯಾಗಿವೆ. 'ಗದರ್ 2'ಗೆ ಕಾಂಪಿಟೇಶನ್ ನೀಡಲು ಕಾಲಿವುಡ್ ಸೂಪರ್ಸ್ಟಾರ್ ನಟನೆಯ ಜೈಲರ್, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಓಎಂಜಿ 2 ಸಿನಿಮಾಗಳು ಬಿಡುಗಡೆಗೊಂಡಿವೆ. ಈ ಬಾರಿ ಎಲ್ಲಾ ಸ್ಟಾರ್ ನಟರು ಒಮ್ಮೆಲೆ ತೆರೆ ಮೇಲೆ ಬಂದಿದ್ದು, ಸಿನಿ ಪ್ರೇಮಿಗಳಿಗೆ ಹಬ್ಬದಂತಾಗಿದೆ.
ಗದರ್ ಚಿತ್ರಕಥೆ: 1947ರ ಭಾರತ ಮತ್ತು ಪಾಕ್ ವಿಭಜನೆಯ ಸಂದರ್ಭ ಹಾಗೂ ತಾರಾ ಸಿಂಗ್ ಜೀವನವನ್ನು ಆಧರಿಸಿ ಗದರ್ 1 ಚಿತ್ರ ಮಾಡಲಾಗಿತ್ತು. 400 ಹುಡುಗಿಯರ ಪೈಕಿ ಓರ್ವ ನಾಯಕಿಯನ್ನು ನಿರ್ದೇಶಕ ಅನಿಲ್ ಶರ್ಮಾ ಆಯ್ಕೆ ಮಾಡಿದ್ದು ಚಿತ್ರದ ವಿಶೇಷತೆಗಳಲ್ಲೊಂದು. ಇನ್ನು ಹಿಮಾಚಲ ಪ್ರದೇಶದ ಪರ್ವತಗಳಲ್ಲಿ 'ಗದರ್ 2' ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಝೀ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಸನ್ನಿ ಡಿಯೋಲ್, ಅಮೀಷಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ತೆರೆಕಂಡ ಎರಡೇ ದಿನದಲ್ಲಿ 83 ಕೋಟಿ ರೂ. ಸಂಪಾದಿಸಿದ ಗದರ್ 2: ಓಎಂಜಿ 2 ಕಲೆಕ್ಷನ್?