ETV Bharat / entertainment

ಟಾಲಿವುಡ್​ನಲ್ಲಿ ದೀಪಾವಳಿ ಸಂಭ್ರಮ: ಒಂದೇ ಫ್ರೇಮ್​ನಲ್ಲಿ ಸೆರೆಯಾದ ಸ್ಟಾರ್​ ನಟರು - etv bharat kannada

Tollywood actors Diwali celebration: ದೀಪಾವಳಿ ಪಾರ್ಟಿಯಲ್ಲಿ ರಾಮ್​ಚರಣ್​, ಮಹೇಶ್​ ಬಾಬು, ಜೂನಿಯರ್​ ಎನ್​​ಟಿಆರ್​ ಮತ್ತು ವೆಂಕಟೇಶ್​ ಒಂದೇ ಫ್ರೇಮ್​ನಲ್ಲಿ ಸೆರೆಯಾದ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.

Four legends in one frame: Ram Charan, Jr NTR reunite for a photo with Mahesh Babu and Venkatesh
ಟಾಲಿವುಡ್​ನಲ್ಲಿ ದೀಪಾವಳಿ ಸಂಭ್ರಮ: ಒಂದೇ ಫ್ರೇಮ್​ನಲ್ಲಿ ಸೆರೆಯಾದ ಸ್ಟಾರ್​ ನಟರು
author img

By ETV Bharat Karnataka Team

Published : Nov 12, 2023, 8:27 PM IST

ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿದೆ. ಭಾರತೀಯ ಚಿತ್ರರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ಕೆಲ ವರ್ಷಗಳಿಂದ ತಾರೆಯರು ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸುವ ಹಬ್ಬಕ್ಕೆ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತಾರೆ. ಈ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಒಂದೇ ವೇದಿಕೆಯಲ್ಲಿ ಬಂದು ಸೇರುತ್ತಾರೆ. ಇದೀಗ ಟಾಲಿವುಡ್​ ಸೂಪರ್​ಸ್ಟಾರ್​​ ನಟ ರಾಮ್​ಚರಣ್ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು.

ತೆಲುಗು ಚಿತ್ರರಂಗದ ಹಲವಾರು ಹೆಸರಾಂತ ವ್ಯಕ್ತಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅದರಲ್ಲೂ ಟಾಲಿವುಡ್​ನ ನಾಲ್ಕು ಪ್ರಮುಖ ರತ್ನಗಳಾದ ರಾಮ್​ಚರಣ್​, ಮಹೇಶ್​ ಬಾಬು, ಜೂನಿಯರ್​ ಎನ್​​ಟಿಆರ್​ ಮತ್ತು ವೆಂಕಟೇಶ್​ ಜೊತೆಯಾಗಿ ಕಾಣಿಸಿಕೊಂಡಿದ್ದು, ಹಬ್ಬಕ್ಕೆ ವಿಶೇಷ ಮೆರುಗು ನೀಡಿತು. ಈ ನಾಲ್ವರು ಖ್ಯಾತ ನಟರು ಒಂದೇ ಫ್ರೇಮ್​ನಲ್ಲಿ ಸೆರೆಯಾದರು. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಈ ಫೋಟೋ ಹೆಚ್ಚು ಸದ್ದು ಮಾಡುತ್ತಿದೆ. ಅಭಿಮಾನಿಗಳಿಗಂತೂ ದೀಪಾವಳಿಗೆ ಉಡುಗೊರೆ ಸಿಕ್ಕಂತಾಗಿದೆ.

ದೀಪಾವಳಿ ಅನ್ನೋದು ಬಾಂಧವ್ಯಗಳನ್ನು ಬೆಸೆಯುವ ಹಬ್ಬ. ಎಲ್ಲರೂ ಜೊತೆಯಾಗಿ ಸೇರಿ ಸಂಭ್ರಮಿಸುವ ಹಬ್ಬ. ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಯಾವಾಗಲೂ ಬ್ಯುಸಿಯಾಗಿರುವ ನಟರು ರಾಮ್​ಚರಣ್​ ಮನೆಯಲ್ಲಿ ಜೊತೆಯಾಗಿ ಸೇರಿ ತೆಲುಗು ಚಿತ್ರರಂಗದ ಒಗ್ಗಟ್ಟನ್ನು ಪ್ರದರ್ಶಿಸಿದರು. ಆಕರ್ಷಿಕ ದಿರಿಸಿನಲ್ಲಿ ತಾರೆಯರು ಕಂಗೊಳಿಸಿದರು. ರಾಮ್​ಚರಣ್​, ಮಹೇಶ್​ ಬಾಬು, ಜೂನಿಯರ್​ ಎನ್​​ಟಿಆರ್​ ಮತ್ತು ವೆಂಕಟೇಶ್​ ಒಂದೇ ಫ್ರೇಮ್​ನಲ್ಲಿ ಸೆರೆಯಾದ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ಮಹೇಶ್​ ಬಾಬು ಪತ್ನಿ ನಮ್ರತಾ ಶಿರೋಡ್ಕರ್​ ಇನ್​ಸ್ಟಾಗ್ರಾಮ್​ನಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲನೆಯ ಫೋಟೋದಲ್ಲಿ ರಾಮ್​ಚರಣ್​, ಮಹೇಶ್​ ಬಾಬು, ಜೂನಿಯರ್​ ಎನ್​​ಟಿಆರ್​ ಮತ್ತು ವೆಂಕಟೇಶ್​ ಜೊತೆಯಾಗಿ ನಿಂತಿರುವುದನ್ನು ನೋಡಬಹುದು. ಉಳಿದ ಫೋಟೋಗಳಲ್ಲಿ ನಮ್ರತಾ ಜೊತೆ ಉಪಾಸನಾ ಕೊನಿಡೇಲಾ (ರಾಮ್​ಚರಣ್​ ಪತ್ನಿ), ಎಸ್​.ಪೂಜಾ ಪ್ರಸಾದ್​ (ಕಾರ್ತಿಕೇಯ ಪತ್ನಿ), ಸ್ನೇಹಾ ರೆಡ್ಡಿ (ಅಲ್ಲು ಅರ್ಜುನ್​ ಪತ್ನಿ) ಮತ್ತು ಲಕ್ಷ್ಮಿ ಪ್ರಣತಿ (ಜೂ.ಎನ್​ಟಿಆರ್​ ಪತ್ನಿ) ಸಂತೋಷಕರ ಕ್ಷಣಗಳನ್ನು ಕಾಣಬಹುದು.

ಇದನ್ನೂ ಓದಿ: ಪ್ರಭಾಸ್​ ಪೋಸ್ಟರ್ ರಿಲೀಸ್: ಡಿ. 1ರಂದು 'ಸಲಾರ್​' ಟ್ರೇಲರ್​ ಅನಾವರಣ

ಪೋಸ್ಟ್​ ಹಂಚಿಕೊಂಡಿರುವ ನಮ್ರತಾ ಶೀರ್ಷಿಕೆಯಲ್ಲಿ, "ಕಳೆದ ರಾತ್ರಿ.. ದೀಪಾವಳಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಇಂತಹ ಸುಂದರ ಕ್ಷಣವನ್ನು ನೀಡಿದ್ದಕ್ಕಾಗಿ ರಾಮ್​ಚರಣ್​ ಮತ್ತು ಉಪಾಸನಾ ಕೊನಿಡೇಲಾ ಅವರಿಗೆ ಹೃದಯಸ್ಪರ್ಶಿ ಧನ್ಯವಾದಗಳು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ನಿಮ್ಮ ಜೀವನವು ಅಪಾರ ಪ್ರೀತಿ ಮತ್ತು ಪ್ರಕಾಶದಿಂದ ತುಂಬಿರಲಿ" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಬೆಳಕಿನ ಹಬ್ಬಕ್ಕೆ ಶುಭ ಕೋರಿದ್ದಾರೆ.

ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಉಪಾಸನಾ, 'ದೀಪಾವಳಿ ಶುಭಾಶಯಗಳು ಸಂತೋಷದಿಂದ ತುಂಬಿವೆ' ಎಂದು ಬರೆದಿದ್ದಾರೆ. ಅಭಿಮಾನಿಗಳು ನಾಲ್ವರು ಸ್ಟಾರ್​ ನಟರು ಜೊತೆಯಾಗಿ ನಿಂತಿರುವ ಫೋಟೋಗೆ ಆಶ್ಚರ್ಯದ ಜೊತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 'ಒಂದು ಚೌಕಟ್ಟಿನಲ್ಲಿ ನಾಲ್ಕು ದಂತಕಥೆಗಳು' ಎಂದು ಕಮೆಂಟ್​ ಮಾಡಿದ್ದಾರೆ. ಅಭಿಮಾನಿಗಳು ಲೈಕ್ಸ್​ಗಳನ್ನು ನೀಡುವುದರ ಜೊತೆಗೆ ಫೋಟೋವನ್ನು ಹೆಚ್ಚು ವೈರಲ್​ ಮಾಡುತ್ತಿದ್ದಾರೆ.

ಸಿನಿಮಾ ವಿಚಾರವಾಗಿ ನೋಡುವುದಾದರೆ, ಮಹೇಶ್​ ಬಾಬು ಪ್ರಸ್ತುತ ಗುಂಟೂರು ಖಾರಂ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ನಂತರದಲ್ಲಿ ಎಸ್​ಎಸ್​ ರಾಜಮೌಳಿ ಜೊತೆಗೆ ಸಿನಿಮಾ ಮಾಡಲಿದ್ದಾರೆ. ರಾಮ್​ಚರಣ್​ ಅವರು ಶಂಕರ್​ ನಿರ್ದೇಶನದ ಗೇಮ್​ ಚೇಂಜರ್​ನಲ್ಲಿ ನಟಿಸುತ್ತಿದ್ದಾರೆ. ಜೂನಿಯರ್​ ಎನ್​ಟಿಆರ್​ ಮುಂದಿನ ವರ್ಷ ದೇವರ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಹೃತಿಕ್​ ರೋಷನ್​ ಜೊತೆ ವಾರ್​ 2ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ವೆಂಕಟೇಶ್​ ಅವರು ಮುಂದಿನ ತಿಂಗಳು ತೆರೆ ಕಾಣಲಿರುವ ಸೈಂಧವ ಚಿತ್ರದ ಪ್ರೀಮಿಯರ್​ಗೆ ಸಿದ್ಧರಾಗುತ್ತಿದ್ದಾರೆ.

ಇದನ್ನೂ ಓದಿ: 'ಲಾಲ್​ ಸಲಾಂ' ಟೀಸರ್​ ಔಟ್​; ಮೊಯ್ದೀನ್ ಭಾಯ್ ಪಾತ್ರದಲ್ಲಿ ರಜನಿಕಾಂತ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.