ETV Bharat / entertainment

ಕ್ಯಾನ್ಸರ್​ ಜೊತೆ ಹೋರಾಡಿ 26ನೇ ವಯಸ್ಸಿಗೆ ಕೊನೆಯುಸಿರೆಳೆದ ಮಾಜಿ ವಿಶ್ವಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್​

ಶೆರಿಕಾ ಡಿ ಅರ್ಮಾಸ್​ ನಿಧನಕ್ಕೆ ಅನೇಕ ವಿಶ್ವಸುಂದರಿ ವಿಜೇತರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

author img

By ETV Bharat Karnataka Team

Published : Oct 16, 2023, 1:38 PM IST

Sherika De Armas
ಶೆರಿಕಾ ಡಿ ಅರ್ಮಾಸ್​

2015ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಮಾಜಿ ವಿಶ್ವ ಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್​ ಅಕ್ಟೋಬರ್​ 13ರಂದು ತಮ್ಮ 26ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಶೆರಿಕ್​ ಅವರು ಎರಡು ವರ್ಷಗಳ ಕಾಲ ಗರ್ಭಕಂಠದ ಕ್ಯಾನ್ಸರ್​ ಜೊತೆ ಹೋರಾಡಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಶೆರಿಕಾ ಡಿ ಅರ್ಮಾಸ್​ ಕಿಮೋಥೆರಪಿ ಹಾಗೂ ರೇಡಿಯೋಥೆರಪಿ ಚಿಕಿತ್ಸೆಗಳಿಗೆ ಒಳಗಾಗಿದ್ದರು. ಶೆರಿಕಾ ಡಿ ಅರ್ಮಾಸ್​ ಅವರ ನಿಧನ ಉರುಗ್ವೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕರನ್ನು ದುಃಖಕ್ಕೀಡು ಮಾಡಿದೆ.

ಶೆರಿಕಾ ಡಿ ಅರ್ಮಾಸ್​ ಅವರ ಸಹೋದರ ಮೇಕ್​ ಡಿ ಅರ್ಮಾಸ್​ ಅವರು ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದು "ಓ ನನ್ನ ಸಹೋದರಿ ಯಾವಾಗಲೂ ಮತ್ತು ಎಂದೆಂದಿಗೂ ನೀನು ಎತ್ತರಕ್ಕೆ ಹಾರು" ಎಂದು ವಿದಾಯ ಹೇಳಿದ್ದಾರೆ.

ಮಿಸ್​ ಯೂನಿವರ್ಸ್​ ಉರುಗ್ವೆ 2022 ಕಾರ್ಲಾ ರೊಮೆರೊ ಅವರು, "ಶೆರಿಕಾ ಜಗತ್ತಿಗೆ ಪರಿಚಿತರು, ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಅವರು ಒಬ್ಬರು" ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಮಿಸ್​ ಉರುಗ್ವೆ 2021 ಲೋಲಾ ಡಿ ಲಾಸ್​ ಸ್ಯಾಂಟೋಸ್​ ಅವರು ಡಿ ಅರ್ಮಾಸ್​ ಅವರಿಗೆ ಗೌರವ ಸಲ್ಲಿಸಿದ್ದಾರೆ. "ಶೆರಿಕಾ ನನ್ನ ಜೊತೆ ಹಂಚಿಕೊಂಡ ಬೆಂಬಲ, ಪ್ರೀತಿ ಹಾಗೂ ಸ್ನೇಹಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ." ಎಂದು ಬರೆದುಕೊಂಡಿದ್ದಾರೆ.

ಚೀನಾದಲ್ಲಿ ನಡೆದ 2015ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಶೆರಿಕಾ ಡಿ ಅರ್ಮಾಸ್​ ಅಗ್ರ 30ರ ಒಳಗೆ ಸ್ಥಾನ ಪಡೆಯದಿದ್ದರೂ, ಕೇವಲ 18 ವರ್ಷ ವಯಸ್ಸಿನಲ್ಲೇ ಅತ್ಯಂತ ಕಿರಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶೆರಿಕಾ ಡಿ ಅರ್ಮಾಸ್​, ಮಾಡೆಲಿಂಗ್​ನಲ್ಲಿ ತಮಗಿರುವ ಉತ್ಸಾಹ, ಹಾಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಜೊತೆಗೆ ಅದಕ್ಕಾಗಿ ಎದುರಿಸಬೇಕಾಗಿರುವ ಸವಾಲು ಹಾಗೂ ತಮ್ಮಲ್ಲಿರುವ ಉತ್ಸಾಹದ ಕುರಿತು ತಿಳಿಸಿದ್ದರು.

ಸೌಂದರ್ಯ ಸ್ಪರ್ಧೆಗಳಲ್ಲಿ ತಲ್ಲೀನಳಾಗುವುದರ ಜೊತೆಗೆ ಶೆರಿಕಾ ಡಿ ಅರ್ಮಾಸ್​ ತನ್ನ ಸ್ವಂತ ಮೇಕಪ್​ ಲೈನ್​, ಕೂದಲು, ವೈಯಕ್ತಿಕ ಆರೈಕೆ ಉತ್ಪನ್ನಗಳ ಬ್ರ್ಯಾಂಡ್​ ಶೇಯ್​ ಡಿ ಅರ್ಮಾಸ್​ ಸ್ಟುಡಿಯೋವನ್ನು ಪ್ರಾರಂಭಿಸುವ ಮೂಲಕ ಸೌಂದರ್ಯ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಳು. ಅದಲ್ಲದೆ ಶೆರಿಕಾ ಡಿ ಅರ್ಮಾಸ್​ ಕ್ಯಾನ್ಸರ್​ನಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ಕೆಲಸ ಮಾಡುವ ಪೆರೆಜ್​ ಸ್ಕ್ರೆಮಿನಿ ಫೌಂಡೇಶನ್​ಗೂ ತಮ್ಮ ಸಮಯ ಮೀಸಲಿಟ್ಟಿದ್ದರು.

ಇದನ್ನೂ ಓದಿ : ಕ್ಯಾನ್ಸರ್ ವಿರುದ್ಧ ಹೋರಾಟ: ಚೋರಿ ಚೋರಿ ಚುಪ್ಕೆ ಚುಪ್ಕೆ ನಟಿ ವಿಧಿವಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.