ETV Bharat / entertainment

ಇಂದು ಸಂಜೆ ಡೊಳ್ಳು ಸಿನಿಮಾ ನೋಡಲಿರುವ ಸಿದ್ದರಾಮಯ್ಯ: ಚಿತ್ರತಂಡದಿಂದ ವಿಶೇಷ ಆಹ್ವಾನ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜಾಜಿನಗರದ ಒರಾಯನ್ ಮಾಲ್​ನಲ್ಲಿ ಡೊಳ್ಳು ಸಿನಿಮಾ ನೋಡಲಿದ್ದಾರೆ‌. ನಿರ್ಮಾಪಕ ಪವನ್ ಒಡೆಯರ್ ಹಾಗೂ ಆಪೇಕ್ಷಾ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಿನಿಮಾ ನೋಡುವಂತೆ ಆಹ್ವಾನಿಸಿದ್ದಾರೆ.

Former CM Siddaramaiah will watch Dollu movie this evening
ಇಂದು ಸಂಜೆ ಡೊಳ್ಳು ಸಿನಿಮಾ ನೋಡಲಿರುವ ಸಿದ್ದರಾಮಯ್ಯ
author img

By

Published : Aug 23, 2022, 1:13 PM IST

ಕನ್ನಡ ಚಿತ್ರರಂಗದಲ್ಲಿ ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಡೊಳ್ಳು ಸಿನಿಮಾ ಮೂಲಕ ನಿರ್ಮಾಣಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಒಡೆಯರ್ ಮೂವೀಸ್ ನಿರ್ಮಾಣ ಸಂಸ್ಥೆಯಡಿ ಸಿದ್ಧಗೊಂಡಿದುರ ಡೊಳ್ಳು ಚಿತ್ರ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಇಂದು ಸಂಜೆ ರಾಜಾಜಿ ನಗರದ ಒರಾಯನ್ ಮಾಲ್​ನಲ್ಲಿ ಈ ಸಿನಿಮಾವನ್ನು ಸಿದ್ದರಾಮಯ್ಯ ನೋಡಲಿದ್ದಾರೆ‌. ಈಗಾಗಲೇ ನಿರ್ಮಾಪಕ ಪವನ್ ಒಡೆಯರ್ ಹಾಗು ಆಪೇಕ್ಷಾ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಿನಿಮಾ ನೋಡುವಂತೆ ಆಹ್ವಾನ ನೀಡಿದ್ದಾರೆ.

ಚಿತ್ರಕ್ಕೆ ನಿರ್ದೇಶಕ ಸಾಗರ್ ಪುರಾಣಿಕ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಡೊಳ್ಳು ಪ್ರದರ್ಶನ ಕಂಡಿದೆ. ಹೆಸರೇ ಹೇಳುವಂತೆ ಇದೊಂದು ಜಾನಪದ ನೃತ್ಯದ ಬಗೆಗಿನ ಸಿನಿಮಾ. ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕ, ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಯಥಾ ರಾಜ ತಥಾ ಪ್ರಜಾ ಸಿನಿಮಾಗೆ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ಹೀರೋ

ಉಳಿದಂತೆ ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಎಂ ಅನಂತ್ ಕಾಮತ್ ಸಂಗೀತ ಸಂಯೋಜನೆ, ಬಿ.ಎಸ್ ಕೆಂಪರಾಜು ಸಂಕಲನ, ಶ್ರೀನಿಧಿ ಡಿ.ಎಸ್ ಚಿತ್ರಕಥೆ ಮತ್ತು ಸಂಭಾಷಣೆ, ದೇವಿ ಪ್ರಕಾಶ್ ಕಲೆ, ನಿತಿನ್ ಲೂಕೋಸ್ ಶಬ್ದ ವಿನ್ಯಾಸ ಮಾಡಿದ್ದಾರೆ. ಇದೇ 26ರಿಂದ‌‌ ಡೊಳ್ಳು ಪ್ರೇಕ್ಷಕರ ಮುಂದೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.