ವಿಜಯವಾಡ (ಆಂಧ್ರಪ್ರದೇಶ): ಜೂನಿಯರ್ ಎನ್‌ಟಿಆರ್ ನಟಿಸಿದ 2003ರ ತೆಲುಗಿನ ಸೂಪರ್ ಹಿಟ್ ಸಿನಿಮಾ ಸಿಂಹಾದ್ರಿ ಮತ್ತೆ ತೆರೆಕಂಡಿದೆ. ಮೇ 20 ರಿಂದ ಜೂನಿಯರ್ ಎನ್‌ಟಿಆರ್ ಜನ್ಮ ದಿನದ ನಿಮಿತ್ತ ಸಿಂಹಾದ್ರಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗಿತ್ತು. 4ಕೆ ಅಪ್‌ಗ್ರೇಡ್ ಮಾಡಿ ಚಿತ್ರವನ್ನು ತೆರೆಗೆ ತರಲಾಗಿತ್ತು. ಮತ್ತೆ ಬಿಡುಗಡೆಯಾದ ಚಿತ್ರಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್ ಸಹ ಸಿಕ್ಕಿತ್ತು. ಆದರೆ, ಒಂದು ಥಿಯೇಟರ್‌ನಲ್ಲಿ ಅಭಿಮಾನಿಗಳು ಸಂಭ್ರಮಿಸುವ ವೇಳೆ ಬೆಂಕಿ ಬಿದ್ದಿದೆ.
-
Seats thagalettaru entra 🤣🤣🤣
— Mahesh Babu (@MMB_tarakian) May 20, 2023 " class="align-text-top noRightClick twitterSection" data="
Vijayawada Apsara Theatre 6:15 show #HappyBirthdayJrNTR pic.twitter.com/flUe0JtAX4
">Seats thagalettaru entra 🤣🤣🤣
— Mahesh Babu (@MMB_tarakian) May 20, 2023
Vijayawada Apsara Theatre 6:15 show #HappyBirthdayJrNTR pic.twitter.com/flUe0JtAX4Seats thagalettaru entra 🤣🤣🤣
— Mahesh Babu (@MMB_tarakian) May 20, 2023
Vijayawada Apsara Theatre 6:15 show #HappyBirthdayJrNTR pic.twitter.com/flUe0JtAX4
ಚಲನಚಿತ್ರ ನೋಡುತ್ತಿದ್ದ ವೇಳೆ ಅಭಿಮಾನಿಗಳು ಸಂಭ್ರಮಿಸುವ ಬರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಚಿತ್ರ ಮಂದಿರದ ಒಳಗೆ ಪಟಾಕಿ ಸಿಡಿಸಿದ್ದರಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಥಿಯೇಟರ್ನ ಕೆಲ ಆಸನಗಳಿಗೆ ಬೆಂಕಿ ತಗುಲಿದೆ. ಮತ್ತೆ ಬೆಡುಗಡೆಯಾದ ಚಿತ್ರ ಭರ್ಜರಿ ಪ್ರತಿಕ್ರಿಯೆಯನ್ನೂ ಪಡೆಯುತ್ತಿದೆ.
ಚಿತ್ರಕ್ಕೆ ಎಲ್ಲೆಡೆ ಸಂಭ್ರಮದ ಸ್ವಾಗತ ಸಿಕ್ಕಿದ್ದು, ವಿಜಯವಾಡದ ಅಪ್ಸರಾ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಗ್ನಿ ಅವಘಡದ ಕಾರಣ ಚಲನಚಿತ್ರ ಪ್ರದರ್ಶನವನ್ನು ತಾತ್ಕಾಲಿಕವಾಗಿ ಅಪ್ಸರಾ ಚಿತ್ರಮಂಂದಿರದಲ್ಲಿ ನಿಲ್ಲಿಸಲಾಗಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರೇಕ್ಷಕರನ್ನು ಸುರಕ್ಷಿತವಾಗಿ ಸ್ಥಾಳಾಂತರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರೇಕ್ಷಕರಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ, ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಈ ಕೃತ್ಯವನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
-
Couldn’t watch #Simhadri in 2003 but this experience makes up for that. Adrenaline all the way!! 🔥🔥🔥🔥@tarak9999 Anna, THE MASS HERO FOR GENERATIONS…The theatre erupted every 10 minutes. Perfect birthday gift from all the fans. Can’t get better!
— S S Karthikeya (@ssk1122) May 20, 2023 " class="align-text-top noRightClick twitterSection" data="
#HappyBirthdayNTR pic.twitter.com/jxh4CyP1JD
">Couldn’t watch #Simhadri in 2003 but this experience makes up for that. Adrenaline all the way!! 🔥🔥🔥🔥@tarak9999 Anna, THE MASS HERO FOR GENERATIONS…The theatre erupted every 10 minutes. Perfect birthday gift from all the fans. Can’t get better!
— S S Karthikeya (@ssk1122) May 20, 2023
#HappyBirthdayNTR pic.twitter.com/jxh4CyP1JDCouldn’t watch #Simhadri in 2003 but this experience makes up for that. Adrenaline all the way!! 🔥🔥🔥🔥@tarak9999 Anna, THE MASS HERO FOR GENERATIONS…The theatre erupted every 10 minutes. Perfect birthday gift from all the fans. Can’t get better!
— S S Karthikeya (@ssk1122) May 20, 2023
#HappyBirthdayNTR pic.twitter.com/jxh4CyP1JD
ಇದನ್ನೂ ಓದಿ: ಕನ್ನಡದಲ್ಲೂ ಬರ್ತಿದೆ ಜ್ಯೂನಿಯರ್ ಎನ್‌ಟಿಆರ್ ಅಭಿನಯದ 'ದೇವರ' ಸಿನಿಮಾ
ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಜೂನಿಯರ್ ಎನ್‌ಟಿಆರ್ ನಟನೆಯ ಎರಡನೇ ಚಿತ್ರ ಸಿಂಹಾದ್ರಿ. ಇದಕ್ಕೂ ಮೊದಲು ಸ್ಟೂಡೆಂಟ್ ನಂ.1 ನಲ್ಲಿ ಇಬ್ಬರು ಒಟ್ಟಿಗೆ ಕಾರ್ಯನಿರ್ವಹಿಸಿದ್ದರು. ವಾರಾಂತ್ಯದಲ್ಲಿ, ಚಿತ್ರವು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮರು ಬಿಡುಗಡೆಯಾಯಿತು. ಜೂನಿಯರ್ ಎನ್‌ಟಿಆರ್ ಅವರ 40 ನೇ ಹುಟ್ಟುಹಬ್ಬದ ನೆನಪಿಗಾಗಿ ಚಿತ್ರವನ್ನು ರೀ ರಿಲೀಸ್ ಮಾಡಲಾಗಿತ್ತು. 4ಕೆ ಬದಲಾವಣೆಯಿಂದ ಮತ್ತೆ ತೆರೆಕಂಡ ಸಿಂಹಾದ್ರಿ 5.14 ಕೋಟಿ ಆದಾಯವನ್ನು ಗಳಿಸಿತ್ತು.
ಜೂನಿಯರ್ ಎನ್‌ಟಿಆರ್ ಅವರ 30ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ನ್ನು ಅವರ ಜನ್ಮದಿನದ ನಿಮಿತ್ತ ಬಿಡುಗಡೆ ಮಾಡಲಾಗಿತ್ತು. ಅವರ ಮುಂದೆ ತೆಲುಗಿನ ದೇವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಇದು ಅವರ ಎರಡನೇ ಸಹಯೋಗವಾಗಿದೆ. ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ತಾರಕ್ ಜೊತೆ ನತೆರೆ ಹಂಚಿಕೊಳ್ಳಲ್ಲಿದ್ದಾರೆ. ಈ ಮೂಲಕ ಇಬ್ಬರು ನಟರು ತೆಲುಗಿಗೆ ಪದಾರ್ಪಣೆ ಮಾಡುಲಿದ್ದಾರೆ. ಕೆಲವು ದಿನಗಳ ಹಿಂದೆ, ಸೈಫ್ ಅಲಿ ಖಾನ್ ಸೆಟ್‌ಗೆ ಆಗಮಿಸಿದ್ದರು.
ಇದನ್ನೂ ಓದಿ: ಜೂನಿಯರ್ ಎನ್‌ಟಿಆರ್ ಅಭಿಮಾನಿಗಳಿಗಿಂದು ಸಿಹಿ ಸುದ್ದಿ: ಎನ್‌ಟಿಆರ್ 30 ಫಸ್ಟ್ ಲುಕ್ ಬಿಡುಗಡೆಗೆ ಕ್ಷಣಗಣನೆ