ETV Bharat / entertainment

ಬಾಲಿವುಡ್​ ಸ್ಟಿಲ್​ ಬ್ಯಾಚುಲರ್​ ಸಲ್ಮಾನ್​ ಖಾನ್​ಗೆ ಮದುವೆ ಪ್ರೊಪೋಸಲ್ ಇಟ್ಟ ಅಭಿಮಾನಿ: ಏನಂದ್ರು ಗೊತ್ತಾ ಸಲ್ಲು ಭಾಯ್​..! - ಐಐಎಫ್ಎ

ಐಫಾ ಅಂಗಳದಲ್ಲಿ ಅಭಿಮಾನಿಗೆ ಸಲ್ಮಾನ್​ ಖಾನ್​ ಕೊಟ್ಟ ಉತ್ತರ, ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

Bollywood Actor Salman Khan
ಬಾಲಿವುಡ್​ ನಟ ಸಲ್ಮಾನ್​ ಖಾನ್​
author img

By

Published : May 27, 2023, 5:04 PM IST

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಇಂದಿಗೂ ಅನೇಕರಿಗೆ ಫೇವರಿಟ್​ ಹೀರೋ. ದಬಾಂಗ್​ ಹೀರೋನ ವಯಸ್ಸು ಹೆಚ್ಚಾದಂತೆ ಅಭಿಮಾನಿಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇನ್ನೂ ಮದುವೆಯಾಗದೆ ಬ್ಯಾಚುಲರ್​ ಆಗಿಯೇ ಇರುವ ನಟ ಸಲ್ಮಾನ್​ ಅಬುಧಾಬಿಯಲ್ಲಿ ನಡೆಯುತ್ತಿರುವ 23ನೇ ಆವೃತ್ತಿಯ ಇಂಟರ್​ನ್ಯಾಷನಲ್​ ಇಂಡಿಯನ್​ ಫಿಲ್ಮ್​ ಅಕಾಡೆಮಿ ಪ್ರಶಸ್ತಿ (ಐಫಾ-IIFA) ಸಮಾರಂಭದಲ್ಲಿ ಭಾಗಿಯಾಗಿದ್ದು, ಕಳೆದೆರಡು ದಿನಗಳಿಂದ ಈ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ.

ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ಸ್ಟಿಲ್​ ಬ್ಯಾಚುಲರ್​ ಸಲ್ಮಾನ್​ ಖಾನ್​ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಮದುವೆ ಪ್ರೊಪೋಸ್​ ಮಾಡಿದ್ದಾರೆ. ಮಹಿಳೆಯ ಮ್ಯಾರೇಜ್​ ಪ್ರೊಪೋಸ್​ನಿಂದ ಸಲ್ಮಾನ್​ ಖಾನ್​ ಬೆರಗುಗೊಂಡಿದ್ದು, ಫಿಲ್ಮ್​ ಫೆಸ್ಟಿವಲ್​ ಅಂಗಳದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಇನ್​ಸ್ಟಾಗ್ರಾಂನಲ್ಲಿ ಪಾಪರಾಜಿಯೊಬ್ಬ ತನ್ನ ಖಾತೆಯಲ್ಲಿ ಹಂಚಿಕೊಂಡಿರುವ ಈವೆಂಟ್​ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬರು "ಸಲ್ಮಾನ್ ಖಾನ್, ನಾನು ಹಾಲಿವುಡ್‌ನಿಂದ ಈ ಪ್ರಶ್ನೆಯನ್ನು ಕೇಳಲೆಂದೇ ನಾನಿಲ್ಲಿಗೆ ಬಂದಿದ್ದೇನೆ, ನಾನು ನಿಮ್ಮನ್ನು ನೋಡಿದ ಕ್ಷಣದಿಂದಲೇ ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ." ಎಂದು ಹೇಳಿದ್ದಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ನಟ ಸಲ್ಮಾನ್, "ನೀವು ಶಾರುಖ್ ಖಾನ್ ಬಗ್ಗೆ ಮಾತನಾಡುತ್ತಿದ್ದೀರಿ, ಅಲ್ವಾ?" ಎಂದು ಕೇಳಿದ್ದಾರೆ. ಮಹಿಳೆ ಸಂಭಾಷಣೆಯನ್ನು ಮುಂದುವರಿಸಿ, "ನಾನು ಸಲ್ಮಾನ್ ಖಾನ್ ಬಗ್ಗೆ ಮಾತನಾಡುತ್ತಿದ್ದೇನೆ, ನೀವು ನನ್ನನ್ನು ಮದುವೆಯಾಗುತ್ತೀರಾ?" ಎಂದು ಕೇಳಿದ್ದಾರೆ.

ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲ್ಮಾನ್, "ನನ್ನ ಮದುವೆಯ ದಿನಗಳು ಮುಗಿದು ಹೋಗಿವೆ, ನೀವು ನನ್ನನ್ನು 20 ವರ್ಷಗಳ ಹಿಂದೆ ಭೇಟಿಯಾಗಬೇಕಿತ್ತು" ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ತದನಂತರ ನಟ ಅಲ್ಲಿಂದ ಹೊರಟು ಹೋಗಿದ್ದಾರೆ. ವಿಡಿಯೋವನ್ನು ಪಾಪರಾಜಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣವೇ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗಕ್ಕೆ ಧಾವಿಸಿ ವೀಡಿಯೊಗೆ ತಮ್ಮ ಪ್ರತಿಕ್ರಿಯೆ ಬರೆದಿದ್ದಾರೆ.

ಬಳಕೆದಾರರೊಬ್ಬರು "ಸಲ್ಮಾನ್ ಹೀಗಿರಬೇಕು: ನಾನು ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಆದರೆ, ನಾನು ನನ್ನ ಫಾರ್ಮ್ ಹೌಸ್ ಅನ್ನು ನಿಮಗೆ ತೋರಿಸುತ್ತೇನೆ..!!" ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಅವರ ನೋಟದ ಕುರಿತು ಕಾಮೆಂಟ್ ಮಾಡಿದ್ದಾರೆ. "ಸಲ್ಮಾನ್ ಭಾಯ್ ಕಾ ಯೇ ಲುಕ್ ದೇಖ್ ಕರ್ ಕಿಕ್ ಮೂವಿ ಕಿ ಯಾದ್ ಅಗಿ (ಸಲ್ಮಾನ್ ಸಹೋದರನ ಈ ನೋಟವನ್ನು ನೋಡಿದ ನಂತರ, ನನಗೆ ಕಿಕ್ ಚಲನಚಿತ್ರ ನೆನಪಾಯಿತು)" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು "ಅವರ ಹಾಸ್ಯಪ್ರಜ್ಞೆಗೆ ಯಾರೂ ಸರಿಸಾಟಿ ಇಲ್ಲ, ನೀವು ಶಾರುಖ್ ಖಾನ್ ಬಗ್ಗೆ ಮಾತನಾಡುತ್ತಿದ್ದೀರಾ' ?? ಹಹಾ." ಎಂದು ಕಾಮೆಂಟ್ ಮಾಡಿದ್ದಾರೆ.

ಸಲ್ಮಾನ್​ ಖಾನ್​ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ, ಟೈಗರ್ 3 ರಲ್ಲಿ ಸಲ್ಮಾನ್ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಜೊತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಟೈಗರ್ ಜಿಂದಾ ಹೈ ನ ಮುಂದುವರಿದ ಭಾಗವಾಗಿದ್ದು, YRF ಸ್ಪೈ ಯೂನಿವರ್ಸ್‌ನಲ್ಲಿ ಐದನೇ ಕಂತಾಗಿದೆ. ಮನೀಶ್ ಶರ್ಮಾ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ ಟೈಗರ್ 3 ಸಿನಿಮಾ ಈ ದೀಪಾವಳಿಗೆ ತೆರೆಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: ವಿರಾಟ್​ ಡಕ್​ ಔಟ್​ ಬಗ್ಗೆ ಕಾಲೆಳೆದ ಅನುಷ್ಕಾ: ಸಿನಿಮೀಯ ಡೈಲಾಗ್​ನಲ್ಲಿ ಪ್ರತ್ಯುತ್ತರ ನೀಡಿದ ವಿರಾಟ್​.. ಸಂಭಾಷಣೆ ಇಲ್ಲಿದೆ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.