ETV Bharat / entertainment

ನಾಗ ಚೈತನ್ಯ - ಶೋಭಿತಾ ಫೋಟೋ ವೈರಲ್​...ನಿಜಾಂಶ ಬಯಲಿಗೆಳೆದ ಅಭಿಮಾನಿ

author img

By

Published : Nov 26, 2022, 4:05 PM IST

ಶೋಭಿತಾ ಧುಲಿಪಾಲ ಮತ್ತು ನಾಗ ಚೈತನ್ಯ ಫೋಟೋ ವೈರಲ್​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸುದ್ದಿಯಾಗಿದೆ.

fact of Naga Chaitanya Sobhita Dhulipala viral photo
ನಾಗ ಚೈತನ್ಯ ಶೋಭಿತಾ ಫೋಟೋ ವೈರಲ್

ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ತೆಲುಗು ಸೂಪರ್​ಸ್ಟಾರ್ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಅವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಖತ್​ ಸೌಂಡ್​ ಮಾಡುತ್ತಿವೆ. ಆದರೆ, ಈ ಬಗ್ಗೆ ನಾಗ ಚೈತನ್ಯ ಆಗಲಿ ಅಥವಾ ಶೋಭಿತಾ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೇ ವಿಚಾರವಾಗಿ ಸೌತ್ ನಟ ನಾಗ ಚೈತನ್ಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟ ನವೆಂಬರ್ 23 ರಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನಟನಿಗೆ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಶುಭಕೋರಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಇದೀಗ ನಾಗ ಚೈತನ್ಯ ಮತ್ತು ಶೋಭಿತಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ನಾಗ ಚೈತನ್ಯ ತಮ್ಮ ಹುಟ್ಟುಹಬ್ಬವನ್ನು ವಿದೇಶದಲ್ಲಿ ವದಂತಿಯ ಗೆಳತಿ ಶೋಭಿತಾ ಜೊತೆ ಆಚರಿಸಿಕೊಂಡಿದ್ದಾರೆ ಎಂಬ ಮಾತು ಸೋಷಿಯಲ್​ ಮೀಡಿಯಾ ಬಳಕೆದಾರರಲ್ಲಿ ಕೇಳಿಬರುತ್ತಿದೆ. ಆದರೆ ಈ ಚಿತ್ರದ ಅಸಲಿಯತ್ತೇ ಬೇರೆ.

ಇದನ್ನೂ ಓದಿ: ಸಮಂತಾ ವಿಚ್ಛೇದನದ ನಂತರ ನಾಗ ಚೈತನ್ಯ ಈ ನಟಿ ಜೊತೆ ಡೇಟಿಂಗ್?

ಹೌದು, ಬಳಕೆದಾರರೊಬ್ಬರು ಟ್ವಿಟರ್​ನಲ್ಲಿ ಈ ಚಿತ್ರದ ವಾಸ್ತವಿಕತೆ ತಿಳಿಸಿದ್ದಾರೆ. ಫೋಟೋಶಾಪ್ ಸಹಾಯದಿಂದ ಆ ಫೋಟೋಗಳನ್ನು ಮರ್ಜ್​​ ಮಾಡಲಾಗಿದೆ (ವಿಲೀನಗೊಳಿಸಲಾಗಿದೆ) ಎಂದು ಈ ಬಳಕೆದಾರರು ಚಿತ್ರದ ಬಗ್ಗೆ ಹೇಳಿದ್ದಾರೆ. ಬಳಕೆದಾರರು ಫೋಟೋದಲ್ಲಿ ವಿಲೀನಗೊಂಡ ಪ್ರದೇಶವನ್ನು ಸಹ ತೋರಿಸಿದ್ದಾರೆ. ಅದನ್ನು ನೋಡಿದ ನಂತರ ಈ ಚಿತ್ರವು ನಿಜವಲ್ಲ. ಆದರೆ, ಸಂಪಾದಿಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.