ETV Bharat / entertainment

ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್​ನಲ್ಲಿ ನಟರಾಕ್ಷಸ.. ವೇದಿಕೆಯಲ್ಲಿ ಕಣ್ಣೀರಿಟ್ಟ ಡಾಲಿ - weekend with Ramesh 5

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಐದನೇ ಅತಿಥಿಯಾಗಿ ನಟ ಡಾಲಿ ಧನಂಜಯ್ ಆಗಮಿಸಲಿದ್ದಾರೆ.

dolly dhananjay
ಡಾಲಿ ಧನಂಜಯ್
author img

By

Published : Apr 12, 2023, 12:35 PM IST

ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಳೆದ ಮಾರ್ಚ್​ 25ರಂದು ಆರಂಭಗೊಂಡಿದೆ. ಅಪಾರ ಸಂಖ್ಯೆ ವೀಕ್ಷಕರನ್ನು ಸಂಪಾದಿಸಿರುವ ಈ ಕನ್ನಡದ ಜನಪ್ರಿಯ ಕಾರ್ಯಕ್ರಮಕ್ಕೆ ಈಗಾಗಲೇ ನಾಲ್ಕು ಮಂದಿ ಸಾಧಕರು ಬಂದು ಹೋಗಿದ್ದಾರೆ. ಸಾಧಕರ ಸೀಟ್​ನಲ್ಲಿ ಕುಳಿತು ತಮ್ಮ ಸಾಧನೆಯ ಕಥೆಯನ್ನು ಅನಾವರಣಗೊಳಿಸಿದ್ದಾರೆ. ಈ ಸಾಧನೆಯ ಕಥೆ ಅದೆಷ್ಟೋ ಮಂದಿಗೆ ಸ್ಫೂರ್ತಿ ಆಗಿದೆ.

ಕನ್ನಡದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಆರಂಭಗೊಂಡು ಮೂರು ವಾರಗಳು ಕಳೆದಿವೆ. ನಾಲ್ಕು ಅತಿಥಿಗಳು ಸಾಧಕರ ಸೀಟ್​ಗೆ ಮೆರುಗು ತಂದುಕೊಟ್ಟಿದ್ದಾರೆ. ಸ್ಯಾಂಡಲ್​ವುಡ್​​ ಮೋಹಕ ತಾರೆ ಈ ಜನಪ್ರಿಯ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಎರಡನೇ ವಾರದಲ್ಲಿ ನಟ, ನೃತ್ಯ ನಿರ್ದೇಶಕ ಪ್ರಭುದೇವ ಉಪಸ್ಥಿತರಿದ್ದರು. ಅದಾದ ಬಳಿಕ ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್, ಹಿರಿಯ ಕಲಾವಿದ ದತ್ತಣ್ಣ ಆಗಮಿಸಿದ್ದರು. ಮೂರನೇ ವಾರ ಇಬ್ಬರು ಅತಿಥಿಗಳಿಂದ ಕಾರ್ಯಕ್ರಮ ಮುಕ್ತಾಯಗೊಂಡಿತು.

ಸಾಧಕರ ಸೀಟ್​ನಲ್ಲಿ ನಟರಾಕ್ಷಸ: ಇದೀಗ ನಾಲ್ಕನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಡಾಲಿ ಧನಂಜಯ್ ಆಗಮಿಸಲಿದ್ದಾರೆ. ಸಿನಿ ಜಗತ್ತಿನ ಒಂದೊಂದೆ ಮೆಟ್ಟಿಲುಗಳನ್ನೇರಿ ಸಾಧನೆಗೈದಿರುವ ಪ್ರತಿಭಾವಂತ ಕಲಾವಿದ. ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​​​ ​​ವೀಕೆಂಡ್ ವಿತ್ ರಮೇಶ್ ಸೀಸನ್ 5ಗೆ ಮೆರುಗು ತರಲಿದ್ದು, ಜೀ ವಾಹಿನಿ ಈ ಎಪಿಸೋಡ್​ನ ಪ್ರೋಮೋ ರಿಲೀಸ್​ ಮಾಡಿದೆ. ನೆನಪುಗಳ ಜಾತ್ರೆಯಲ್ಲಿ ಅದ್ಧೂರಿಯಾಗಿ ಸಂಭ್ರಮಿಸಿದ ನಟರಾಕ್ಷಸ ಡಾಲಿ ಧನಂಜಯ! ಎಂಬ ಕ್ಯಾಪ್ಷನ್​ ಕೊಟ್ಟು ಪ್ರೋಮೋ ಬಿಡುಗಡೆಗೊಂಡಿದ್ದು, ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಡಾಲಿ ಧನಂಜಯ್​ ಅವರ ವೈಯಕ್ತಿಕ ಜೀವನದ ಪ್ರಮುಖ ವ್ಯಕ್ತಗಳು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಡೊಳ್ಳು ಹಿಡಿದು ಕುಣಿದು ಕುಪ್ಪಳಿಸಲಿದ್ದಾರೆ. ಜೊತೆಗೆ ವೇದಿಕೆಯಲ್ಲೇ ಡಾಲಿ ಧನಂಜಯ್​​ ಕಣ್ಣೀರಿಡಲಿದ್ದಾರೆ. ಈ ಎಪಿಸೋಡ್​ನ ಸಣ್ಣ ತುಣುಕು ಪ್ರೋಮೋ ಮೂಲಕ ಅನಾವರಣಗೊಂಡಿದ್ದು, ವೀಕ್ಷಕರ ಕುತೂಹಲ ಹೆಚ್ಚಿದೆ.

ನಟ ಡಾಲಿ ಧನಂಜಯ್ ಈಗಾಗಲೇ ಕೆಲ ಯಶಸ್ವಿ ಚಿತ್ರಗಳನ್ನು ಮನೋರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿನ್ನೆಲೆ ಸಹಜವಾಗಿ ಈ ಕಾರ್ಯಕ್ರಮದ ಮೇಲೆ ವೀಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ. ಅಲ್ಲದೇ ಡಾಲಿ ಧನಂಜಯ್​ ಬಗ್ಗೆ ತಿಳಿಯದಿರದ ಕೆಲ ವೈಯಕ್ತಿಕ ವಿಷಯಗಳು ಈ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: ಡಾ ರಾಜ್ ಕುಮಾರ್ 17ನೇ ಪುಣ್ಮ ಸ್ಮರಣೆ.. ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

ಅಭಿಮಾನಿಗಳು ಹೀಗಂದ್ರು: 'ನಿಜವಾಗಲೂ ಬಹಳ ಖುಷಿಯಾಗುತ್ತದೆ ಆ ಸೀಟಿನಲ್ಲಿ ಇಂತಹ ಸಾಧಕರನ್ನು ನೋಡಲು' ಎಂದು ಓರ್ವರು ಕಾಮೆಂಟ್​ ಮಾಡಿದ್ದಾರೆ. 'ಬಡವರ ಮಕ್ಕಳು ಬೆಳೆಯಬೇಕು, ಇದರಲ್ಲಿ ಏನು ತಪ್ಪಿಲ್ಲಾ. ಆದರೆ ಈ ಸಾಧಕರ ವೇದಿಕೆ ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಮತ್ತೋರ್ವರು' ಕಾಮೆಂಟ್ ಮಾಡಿದ್ದಾರೆ. 'ಅಂತೂ ಇದು ನಿಜವಾಗುತ್ತಿದೆ, ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ಅಭಿಮಾನಿಯೋರ್ವರು' ತಿಳಿಸಿದ್ದಾರೆ. 'ಇದು ಬೇಕಾಗಿರೋದು' ಎಂದು ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಬರೆದಿದ್ದಾರೆ.

ಇದನ್ನೂ ಓದಿ: OTTಗೆ ಬರ್ತಿದೆ ಕಬ್ಜ! ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.