ಬಹು ನಿರೀಕ್ಷಿತ ಹೆಡ್ ಬುಷ್ ಸಿನಿಮಾ ಇದೇ ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಅಬ್ಬರಿಸಲಿದ್ದು, ಇಂದು ಹೆಡ್ ಬುಷ್ ಸಾಂಗ್ ರಿಲೀಸ್ ಆಗಿದೆ. ಎಲ್ಲಾ ಪೇಟೇಲು ನಿಮ್ಮದೇ ಖದರ್! ನಿಮ್ಮ ಅಭಿನಯಕ್ಕೆ ನಾವು ಸನ್ನಾರ್! headbush ಇಂದ ಆಗಲಿ ಎಲ್ಲಾ ರೆಕಾರ್ಡ್ ಪಂಕ್ಚರ್ ಎಂದು ಆನಂದ್ ಆಡಿಯೋ ಸಂಸ್ಥೆ ವಿಶೇಷವಾಗಿ ಶುಭಾಶಯ ಕೋರಿದೆ.
- " class="align-text-top noRightClick twitterSection" data="">
ಭರ್ಜರಿ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆನಂದ್ ಆಡಿಯೋ ಸಂಸ್ಥೆ ಹೆಡ್ ಬುಷ್ ಸಾಂಗ್ ಹಂಚಿಕೊಂಡು ಶುಭಕೋರಿದೆ. 'ನಾವು ರೌಡಿಗಳು' ಎಂದು ಶುರುವಾಗುವ 'ರೌಡೀಸ್ ಆ್ಯಂಥಮ್'ನಲ್ಲಿ ಬೆಂಗಳೂರು ಭೂಗತ ಲೋಕದ ಆ ದಿನಗಳ ದರ್ಶನ ಮಾಡಿಸುವ ಪ್ರಯತ್ನ ನಡೆದಿದೆ.
ಹೆಡ್ ಬುಷ್ ಸಿನಿಮಾ ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್ ಎಂ.ಪಿ ಜಯರಾಜ್ ಅವರ ಜೀವನಾಧಾರಿತ ಸಿನಿಮಾ. ಚಿತ್ರೀಕರಣ ಮುಗಿದಿರುವ ಹೆಡ್ ಬುಷ್ ಸಿನಿಮಾವನ್ನು ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದೆಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಡಾಲಿ ಧನಂಜಯ್ ಎಂ.ಪಿ ಜಯರಾಜ್ ಸ್ಟೈಲ್ನಲ್ಲಿ ಸಿಗರೇಟ್ ಸೇದುವ ಪೋಸ್ಟರ್, ಟೀಸರ್ ಸಖತ್ ಸೌಂಡ್ ಮಾಡಿದೆ.
-
ಎಲ್ಲಾ ಪೇಟೇಲು ನಿಮ್ಮದೇ ಖದರ್!!
— aanandaaudio (@aanandaaudio) August 23, 2022 " class="align-text-top noRightClick twitterSection" data="
ನಿಮ್ಮ ಅಭಿನಯಕ್ಕೆ ನಾವು ಸನ್ನಾರ್!!#HeadBush ಇಂದ ಆಗಲಿ ಎಲ್ಲ ರೆಕಾರ್ಡ್ಸ್ ಪಂಕ್ಚರ್!!💥
HAPPY BIRTHDAY to our rowdy boy DAALI @Dhananjayaka alias JAYARAJ🔥#HeadBushFirstSingle, 'THE ROWDIES ANTHEM' #RowdigaluNaavuRowdigalu OUT NOW!
🔗https://t.co/KBf7acrTWI
">ಎಲ್ಲಾ ಪೇಟೇಲು ನಿಮ್ಮದೇ ಖದರ್!!
— aanandaaudio (@aanandaaudio) August 23, 2022
ನಿಮ್ಮ ಅಭಿನಯಕ್ಕೆ ನಾವು ಸನ್ನಾರ್!!#HeadBush ಇಂದ ಆಗಲಿ ಎಲ್ಲ ರೆಕಾರ್ಡ್ಸ್ ಪಂಕ್ಚರ್!!💥
HAPPY BIRTHDAY to our rowdy boy DAALI @Dhananjayaka alias JAYARAJ🔥#HeadBushFirstSingle, 'THE ROWDIES ANTHEM' #RowdigaluNaavuRowdigalu OUT NOW!
🔗https://t.co/KBf7acrTWIಎಲ್ಲಾ ಪೇಟೇಲು ನಿಮ್ಮದೇ ಖದರ್!!
— aanandaaudio (@aanandaaudio) August 23, 2022
ನಿಮ್ಮ ಅಭಿನಯಕ್ಕೆ ನಾವು ಸನ್ನಾರ್!!#HeadBush ಇಂದ ಆಗಲಿ ಎಲ್ಲ ರೆಕಾರ್ಡ್ಸ್ ಪಂಕ್ಚರ್!!💥
HAPPY BIRTHDAY to our rowdy boy DAALI @Dhananjayaka alias JAYARAJ🔥#HeadBushFirstSingle, 'THE ROWDIES ANTHEM' #RowdigaluNaavuRowdigalu OUT NOW!
🔗https://t.co/KBf7acrTWI
ಬರಹಗಾರ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸಿದ್ದಾರೆ. 1970ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಅವರು ಈ ಚಿತ್ರದಲ್ಲಿ ತೋರಿಸಲಿದ್ದಾರೆ. ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್. ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ.
ಅದ್ಭುತ ಹಾಡುಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೋಜ್ ವೇಲಾಯಧನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಕಲಾ ನಿರ್ದೇಶಕರು ಬಾದಲ್ ನಂಜುಂಡಸ್ವಾಮಿ. ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ್ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ಡಾಲಿ ಧನಂಜಯ್: ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ