ETV Bharat / entertainment

ಸ್ಕ್ರಿಪ್ಟ್​ ರೆಡಿ, ಮತ್ತೊಬ್ಬ ಸ್ಟಾರ್​ ನಟನ ಜೊತೆ ನಿರ್ದೇಶಕ ಅಟ್ಲೀ ಸಿನಿಮಾ! - ಈಟಿವಿ ಭಾರತ ಕನ್ನಡ

Atlee next movie: ನಿರ್ದೇಶಕ ಅಟ್ಲೀ ಮತ್ತೊಬ್ಬ ಸ್ಟಾರ್​ ನಟ ಅಜಿತ್​ ಕುಮಾರ್​ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

Director Atlee next movie with Ajith Kumar
ಸ್ಕ್ರಿಪ್ಟ್​ ರೆಡಿ, ಮತ್ತೊಬ್ಬ ಸ್ಟಾರ್​ ನಟನೊಂದಿಗೆ ನಿರ್ದೇಶಕ ಅಟ್ಲೀ ಸಿನಿಮಾ!
author img

By ETV Bharat Karnataka Team

Published : Nov 16, 2023, 10:54 PM IST

ಭಾರತೀಯ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರ ಸಾಲಿನಲ್ಲಿ ಅಟ್ಲೀ ಕೂಡ ಒಬ್ಬರು. ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಇವರು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಜೊತೆ 'ಜವಾನ್'​ ಸಿನಿಮಾ ಮಾಡಿ ವಿಶ್ವಾದ್ಯಂತ ಕ್ರೇಜ್​ ಗಳಿಸಿದ್ದಾರೆ. ನಯನತಾರಾ, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಸೆಪ್ಟೆಂಬರ್​ 7ರಂದು ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

ಈ ಸಿನಿಮಾ ನಂತರ ಅಟ್ಲೀ ಅವರ ಮುಂದಿನ ನಿರ್ದೇಶನದ ಮೇಲೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ. ಸಿನಿ ಪ್ರೇಮಿಗಳು ಅವರ ಮುಂದಿನ ಪ್ರಾಜೆಕ್ಟ್​ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ತಮ್ಮ ಹೊಸ ಯೋಜನೆಗಳ ಕುರಿತಾಗಿ ಅಟ್ಲೀ ಮಾತನಾಡಿದ್ದಾರೆ. ಇತ್ತೀಚೆಗೆ ಶಾರುಖ್​ ಖಾನ್​ ಮತ್ತು ವಿಜಯ್​ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದ ಅಟ್ಲೀ ಇದೀಗ ಮತ್ತೊಬ್ಬ ಸ್ಟಾರ್​ ತಮಿಳು ನಟ ಅಜಿತ್​ ಕುಮಾರ್​ ಜೊತೆ ಕೆಲಸ ಮಾಡಲು ರೆಡಿಯಾಗಿದ್ದಾರೆ.

'ನಾನು ಅಜಿತ್​ ಕುಮಾರ್​ ಜೊತೆ ಶೀಘ್ರದಲ್ಲೇ ಸಿನಿಮಾ ಮಾಡುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಅವರಿಗೆ ಕಥೆಯೂ ಸಿದ್ಧವಾಗಿದೆ' ಎಂದು ಅಟ್ಲೀ ಹೇಳಿದ್ದಾರೆ. "ಅಜಿತ್​ ಕುಮಾರ್​ ಅವರಿಗೆ ಸೂಕ್ತವಾದ ಕಥೆ ನನ್ನ ಬಳಿ ಇದೆ. ಅದರ ಮೇಲೆ ಇನ್ನೂ ಕೆಲಸ ಮಾಡಬೇಕಾಗಿದೆ. ಅವರಲ್ಲಿ ಕಥೆಯ ಬಗ್ಗೆ ಹೇಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಅಜಿತ್​ ನನ್ನ ಕಥೆಯನ್ನು ಒಪ್ಪಿಕೊಂಡರೆ, ಸೂಪರ್​ ಹಿಟ್​ ಚಿತ್ರವೊಂದು ಮೂಡಿ ಬರಲಿದೆ. ಅವರು ನನ್ನನ್ನು ಕರೆಯುವುದಕ್ಕೆ ಕಾಯುತ್ತಿದ್ದೇನೆ. ಕರೆದ ಕೂಡಲೇ ಹೋಗಿ ಕಥೆ ಹೇಳುತ್ತೇನೆ. ಅವರು ತುಂಬಾ ಒಳ್ಳೆಯ ಮನುಷ್ಯ. ನಾನು ಕಷ್ಟದಲ್ಲಿದ್ದಾಗ ಕರೆದು ಸಾಂತ್ವನ ಹೇಳಿದ್ದರು" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಆಯ್ತು, ಟಾಲಿವುಡ್​ಗೂ ಅಟ್ಲೀ ಜಂಪ್​; 'ದೇವರ ಆಶೀರ್ವಾದ'ದ ಜೊತೆ ಅಲ್ಲುಗೆ ಆ್ಯಕ್ಷನ್​ ಕಟ್​

ನಿರ್ದೇಶಕ ಅಟ್ಲೀ ಇತ್ತೀಚೆಗಷ್ಟೇ ಬಹುತಾರಾಗಣದ ಸಿನಿಮಾ ಘೋಷಣೆ ಮಾಡಿರುವುದು ಗೊತ್ತೇ ಇದೆ. ಶಾರುಖ್​ ಖಾನ್​ ಮತ್ತು ವಿಜಯ್​ ಜೊತೆಗಿನ ಈ ಚಿತ್ರ ಖಂಡಿತ 3,000 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ಕಮಲ್​ ಹಾಸನ್​ ನಿರ್ಮಾಣ ಮಾಡಲಿದ್ದಾರೆ ಎಂದು ವರದಿಗಳಿವೆ. ಇದರ ಜೊತೆಗೆ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್​ ಜೊತೆಯೂ ಅಟ್ಲೀ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಈಗಾಗಲೇ ಅಲ್ಲು ಅರ್ಜುನ್​ ಜೊತೆ ಅಟ್ಲೀ ಚಿತ್ರ ಕಥೆಯ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ. ಇವರಿಬ್ಬರು ಮುಂಬೈನಲ್ಲಿ ಭೇಟಿಯಾದ ವಿಡಿಯೋಗಳು ಇತ್ತೀಚೆಗೆ ವೈರಲ್​ ಆಗುತ್ತಿದೆ. ಇದರೊಂದಿಗೆ ಈ ಸಿನಿಮಾವು ಬಹುತೇಕ ಖಚಿತಗೊಂಡಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಸದ್ಯದಲ್ಲೇ ಅಧಿಕೃತ ಘೋಷಣೆಯೂ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಅಟ್ಲೀ ಮುಂದಿನ ಸಿನಿಮಾಗಳನ್ನು ಸ್ಟಾರ್​ ನಟರ ಜೊತೆಯೇ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಅಟ್ಲೀ - ಅಲ್ಲು ಅರ್ಜುನ್​ ಭೇಟಿ: ಇವರಿಬ್ಬರ ಕಾಂಬೋದಲ್ಲಿ ಬರಲಿದೆಯಾ ಸಿನಿಮಾ?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.