ನಟ ಮತ್ತು ನಿರ್ದೇಶಕ ಪ್ರತಾಪ್ ಪೋಥೆನ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಅವರಿಗೆ 69 ವರ್ಷ ವಯಸ್ಸಾಗಿತ್ತು. ನಟ ಮತ್ತು ನಿರ್ದೇಶಕ ಪ್ರತಾಪ್ ಪೋಥೆನ್ ಅವರು ಆಗಸ್ಟ್ 13, 1952 ರಂದು ಜನಿಸಿದ್ದರು. ಅವರ ಸೇವಕನು ಕಾಫಿಗಾಗಿ ಅವರನ್ನು ಎಬ್ಬಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇವರು ಮಲಯಾಳಂ, ತಮಿಳು ಮತ್ತು ತೆಲುಗು ಹಾಗೂ ಹಿಂದಿಯಲ್ಲಿ ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
'ಮೂಡುಪಣಿ', 'ವರುಮಯಿನ್ ನೀರು ಸಿವಪ್ಪು', 'ಪನೀರ್ ಪುಷ್ಪಂಗಳು', 'ನೆಂಜತೈ ಕಿಲ್ಲಾತೆ', 'ಬೆಂಗಳೂರು ಡೇಸ್', ಮತ್ತು 'ಪೂಜೈ' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಜೀವ’, ‘ವೆಟ್ರಿ ವಿಜ’, ‘ಸಿವಲಪ್ಪೇರಿ ಪಾಂಡಿ’ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.
ಅವರ ನಿರ್ದೇಶನದ ಚಿತ್ರ 'ಮೀಂದುಮ್ ಒರು ಕಾದಲ್ ಕಥೈ'ಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಸ್ಥಿರ ಕ್ಯಾಮರಾವನ್ನು ತಮ್ಮ 'ವೆಟ್ರಿ ವಿಝಾ' ಚಿತ್ರದಲ್ಲಿ ಬಳಕೆ ಮಾಡಿದ್ದ ಕೀರ್ತಿ ಇವರದ್ದು.
ಇದನ್ನೂ ಓದಿ: ಮಳೆ ಹಾನಿ ಪ್ರದೇಶಗಳ ಮೂಲ ಸೌಕರ್ಯ ಮರು ಸ್ಥಾಪನೆಗೆ 500 ಕೋಟಿ ರೂ. ಬಿಡುಗಡೆ: ಸಿಎಂ ಆದೇಶ