ETV Bharat / entertainment

ಸಂಗೀತ ಮಾಂತ್ರಿಕ ಇಳಯರಾಜ ಜೀವನಚರಿತ್ರೆಗೆ ಬಣ್ಣ ಹಚ್ಚಲಿದ್ದಾರೆ ಧನುಷ್​

Dhanush to play lead in Illaiyaraaja biopic: ಸಂಗೀತ ಮಾಂತ್ರಿಕ ಇಳಯರಾಜ ಜೀವನಚರಿತ್ರೆಗೆ ಕಾಲಿವುಡ್​ ಸ್ಟಾರ್​ ನಟ ಧನುಷ್​ ಬಣ್ಣ ಹಚ್ಚಲಿದ್ದಾರೆ.

Dhanush to play the lead in the biopic of legendary music maestro Isaignani Illaiyaraaja , deets inside
ಸಂಗೀತ ಮಾಂತ್ರಿಕ ಇಳಯರಾಜ ಜೀವನಚರಿತ್ರೆಗೆ ಬಣ್ಣ ಹಚ್ಚಲಿದ್ದಾರೆ ಕಾಲಿವುಡ್​ ನಟ ಧನುಷ್​
author img

By ETV Bharat Karnataka Team

Published : Oct 31, 2023, 6:11 PM IST

ಕಾಲಿವುಡ್ ನಟ ಧನುಷ್​ ತಮ್ಮ ನಟನಾ ಕೌಶಲ್ಯದಿಂದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣದಿಂದ ಉತ್ತರದವರೆಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಹೊಸ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚಲು ಸಜ್ಜಾಗಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಇಳಯರಾಜ ಜೀವನಚರಿತ್ರೆಗೆ ಇವರು ಬಣ್ಣ ಹಚ್ಚಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.

ಇತ್ತೀಚೆಗಿನ ವರದಿ ಪ್ರಕಾರ, ಇಳಯರಾಜ ಅವರ ಜೀವನಚರಿತ್ರೆ ಪ್ಯಾನ್​ ಇಂಡಿಯಾ ಯೋಜನೆಯಾಗಲಿದೆ. ಮುಂದಿನ ವರ್ಷ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಸೌತ್​ ಸ್ಟಾರ್​ ಮೋಹನ್​ಲಾಲ್​ ಅವರ ವೃಷಭ ಸಿನಿಮಾವನ್ನು ನಿರ್ಮಿಸುತ್ತಿರುವ ಕನೆಕ್ಟ್ ಮೀಡಿಯಾ ಈ ಚಿತ್ರವನ್ನು ನಿರ್ಮಿಸಲಿದೆ ಎನ್ನಲಾಗಿದೆ.

ಇತ್ತೀಚೆಗೆ ಯುವನ್​ ಶಂಕರ್​ ರಾಜಾ ಅವರು ತಮ್ಮ ತಂದೆ ಇಳಯರಾಜ ಅವರ ಜೀವನಚರಿತ್ರೆಯಲ್ಲಿ ಧನುಷ್​ ಅವರನ್ನು ನೋಡಲು ಇಷ್ಟಪಡುವುದಾಗಿ ಹೇಳಿದ್ದರು. ಧನುಷ್​ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಅಲ್ಲದೇ, ಧನುಷ್​ ಸ್ವತಃ ಇಳಯರಾಜ ಅವರ ದೊಡ್ಡ ಅಭಿಮಾನಿ. ಹೀಗಾಗಿ ಅವರ ನಿಜಜೀವನಕ್ಕೆ ಜೀವ ತುಂಬಲು ನಟನಿಗೆ ಅವಕಾಶ ಸಿಕ್ಕಿರುವುದು ಅವರ ಬಹುದೊಡ್ಡ ಕನಸೊಂದು ಈ ಮೂಲಕ ನನಸಾಗಲಿದೆ. ಆದರೆ ಈ ಪ್ಯಾನ್​ ಇಂಡಿಯಾ ಸಿನಿಮಾ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇಳಯರಾಜ ಬಗ್ಗೆ..: ಭಾರತ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮಿಳಿಗ ಈ ಇಳಯರಾಜ. ಇಳಯರಾಜ ಅಂದರೆ ಬರೀ ಸಂಗೀತ ನಿರ್ದೇಶಕ ಮಾತ್ರವಲ್ಲ, ಅವರೊಬ್ಬ ಅದ್ಭುತ ಪ್ರತಿಭೆ. ಸುಮಾರು ಹತ್ತು ಸಾವಿರಕ್ಕಿಂತ ಅಧಿಕ ಗೀತೆಗಳಿಗೆ ಸಂಗೀತ ಸಂಯೋಜಿಸಿದ ಸಂಗೀತ ಮಾಂತ್ರಿಕ. ಲಂಡನ್​ ಮೂಲದ ಪ್ರತಿಷ್ಠಿತ ರಾಯಲ್ ಫಿಲೊಮಾನಿಕ್ ಆರ್ಕೆಸ್ಟ್ರಾಗಾಗಿ ಸ್ವರಮೇಳವನ್ನು ಸಂಯೋಜಿಸಿದ ಪ್ರಥಮ ಭಾರತೀಯ ಸಂಗೀತ ಸಂಯೋಜಕ ಈ ಇಳಯರಾಜ.

ಇಳಯರಾಜ ಹುಟ್ಟಿದ್ದು ತಮಿಳುನಾಡಿನ ಒಂದು ಹಳ್ಳಿಯಲ್ಲಾದರೂ ಅಗಾಧವಾದ ಸಂಗೀತ ಪ್ರತಿಭೆ ಅವರನ್ನು ದೇಶಗಳ ಗಡಿದಾಟಿ ಜಾಗತಿಕ ಮಟ್ಟದಲ್ಲಿ ಗುರುತಿಸಿತು. ಇಳಯರಾಜ ಅವರು ತಮಿಳು, ಕನ್ನಡ, ಮಲಯಾಳಂ, ತೆಲುಗು ಮತ್ತು ಮರಾಠಿ ಸೇರಿದಂತೆ ದಕ್ಷಿಣ ಭಾರತದ ಸುಮಾರು 3 ಸಾವಿರ ಚಲನಚಿತ್ರಗಳು ಮತ್ತು 10 ಸಾವಿರದಷ್ಟು ಗೀತೆಗಗಳಿಗೆ ಸಂಗೀತ ನೀಡಿದ್ದಾರೆ. ಈ ಮೂಲಕ ಅವರು ಸಂಗೀತ ಲೋಕದ ರಾಜ ಎಂದೇ ಖ್ಯಾತಿ ಗಳಿಸಿದ್ದಾರೆ.

ಕನ್ನಡ ಹಾಡುಗಳು: ನನ್ನ ನೀ ಗೆಲ್ಲಲಾರೆ, ಜನ್ಮ ಜನ್ಮದ ಅನುಬಂಧ, ಗೀತಾ, ನಮ್ಮೂರು ಮಂದಾರ ಹೂವೆ, ಪಲ್ಲವಿ ಅನುಪಲ್ಲವಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ಇಳಯರಾಜ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದಿದ್ದಾರೆ. ಇಳಯರಾಜ ಸಂಗೀತ ಸಂಯೋಜಿಸಿದ ಹಾಡುಗಳು ಇಂದಿಗೂ ಜನರ ಬಾಯಲ್ಲಿ ಗುನುಗುತ್ತಿರುತ್ತವೆ. 2010ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಮತ್ತು 2018ರಲ್ಲಿ ಎರಡನೇ ಅತ್ಯುನ್ನತ ಪ್ರಶಸ್ತಿ ಪದ್ಮವಿಭೂಷಣ ಇಳಯರಾಜ ಅವರಿಗೆ ದೊರೆತಿದೆ. ಇದರೊಂದಿಗೆ ಒಟ್ಟು 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಳಯರಾಜ ಅವರ ಮುಡಿಗೇರಿವೆ. ಈ ಪೈಕಿ 3 ಅತ್ಯುತ್ತಮ ಸಂಗೀತ ನಿರ್ದೇಶನ ಮತ್ತು 2 ಉತ್ತಮ ಹಿನ್ನೆಲೆ ಸಂಗೀತಕ್ಕೆ ನೀಡಲಾಗಿದೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಪರಿಕಲ್ಪನೆಯ, ತಮಿಳು ಥ್ರಿಲ್ಲರ್​ ಚಿತ್ರಕ್ಕೆ ಇಳಯರಾಜ ಸಂಗೀತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.