ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಮುಂದುವರಿಸಿದೆ. ಥಿಯೇಟರ್‌ಗಳಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬಾಕ್ಸ್ ಆಫೀಸ್ ಸಕ್ಸಸ್ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಸಂಭ್ರಮ ಹಂಚಿಕೊಳ್ಳಲು ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮತ್ತು ಪ್ರಮುಖ ನಾಯಕ ನಟರಾದ ಆಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಸೇರಿದಂತೆ ಇಡೀ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ತಂಡ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೇರಿತ್ತು. ಸಿನಿಮಾದ ಪಾತ್ರವರ್ಗ ಮತ್ತು ಸಿಬ್ಬಂದಿ ಚಿತ್ರದ ಅನುಭವಗಳು ಅದರಲ್ಲೂ ವಿಶೇಷವಾಗಿ ಮರೆಯಲಾಗದ ಕೆಲ ಕ್ಷಣಗಳನ್ನು ಹಂಚಿಕೊಂಡಿತು.
-
Glad his most important critic has approved it😭❤️❤️ #RanveerSingh #Deepveer
— . (@alooveerstan) August 3, 2023 " class="align-text-top noRightClick twitterSection" data="
pic.twitter.com/55fyGZONk2
">Glad his most important critic has approved it😭❤️❤️ #RanveerSingh #Deepveer
— . (@alooveerstan) August 3, 2023
pic.twitter.com/55fyGZONk2Glad his most important critic has approved it😭❤️❤️ #RanveerSingh #Deepveer
— . (@alooveerstan) August 3, 2023
pic.twitter.com/55fyGZONk2
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸುತ್ತಿದ್ದು, ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದೆ. ರಣ್ವೀರ್ ಸಿಂಗ್ ಅವರು ಪತ್ನಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪ್ರತಿಕ್ರಿಯೆಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರ ಮತ್ತು ಒತ್ತಡಗಳನ್ನು ಹೇಗೆ ಎದುರಿಸಿದರು ಎಂಬುದರ ಬಗ್ಗೆಯೂ ಚರ್ಚಿಸಿದರು.
ತಮ್ಮ ಸಿನಿಮಾ ಸಂಬಂಧ ದೀಪಿಕಾ ಪಡುಕೋಣೆ ಅವರ ಪ್ರತಿಕ್ರಿಯೆ ಹಂಚಿಕೊಂಡ ನಾಯಕ ನಟ ರಣ್ವೀರ್ ಸಿಂಗ್, "ನಾವಿಬ್ಬರು ಒಟ್ಟಿಗೆ ಸಿನಿಮಾ ನೋಡಿದೆವು. ಅವರು ನನ್ನ ಸಿನಿಮಾವನ್ನು ಬಹಳ ಇಷ್ಟಪಟ್ಟರು. ಅದು ಗಮನಾರ್ಹ ಘಟನೆ. ಕೊನೆಯ ಸಾಲಿನ ಸೀಟ್ನಲ್ಲಿ ನಾವಿಬ್ಬರು ಮಾತ್ರ ಕುಳಿತಿದ್ದೆವು. ಅವರು ನಗುತ್ತಿದ್ದರು, ಅಳುತ್ತಿದ್ದರು ಮತ್ತು ಚಪ್ಪಾಳೆ ತಟ್ಟುತ್ತಿದ್ದರು, ನಾನು ಅತ್ಯಂತ ಅದ್ಭುತ ಅನುಭವ ಹೊಂದಿದ್ದೆ. ಅದೊಂದು ಪುರಸ್ಕಾರದ ಅನುಭವ. ಅವರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಯಾವುದು ಗೊತ್ತಾ?
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾಗೂ ಮೊದಲು, ರಣ್ವೀರ್ ಅವರ 83 ಮತ್ತು ಸರ್ಕಸ್ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಈ ಹಿನ್ನೆಲೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಬಿಡುಗಡೆಗೂ ಮೊದಲು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರವಾಗಿ ಒತ್ತಡ ಎದುರಿಸಿದ್ರಾ ಎಂದು ನಟನಲ್ಲಿ ಪ್ರಶ್ನಿಸಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿ "ಸೋಲು ಅಥವಾ ಯಶಸ್ಸು ವಿಚಾರವೊಂದರಲ್ಲೇ ಮುಳುಗಲ್ಲ" ಎಂದು ತಿಳಿಸಿದರು. ಜೊತೆಗೆ, ಇಂತಹ ಅದ್ಭುತ ನಟರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದು, ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನನ್ನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ನಂಬಿದ್ದೇನೆ ಎಂದು ತಿಳಿಸಿದರು. ಇನ್ನೂ ಈ ಸಿನಿಮಾ ತೆರೆಕಂಡು ಒಂದು ವಾರದೊಳಗೆ 100 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಅನಂತ್ ನಾಗ್ ಸಿನಿ ಪಯಣಕ್ಕೆ 50ರ ಸಂಭ್ರಮ.. ಎವರ್ ಗ್ರೀನ್ ಹೀರೋನ ಅಪರೂಪದ ಫೋಟೋಗಳು ನಿಮಗಾಗಿ