ETV Bharat / entertainment

ತಪ್ಪೇ ಮಾಡದೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಭಾರತದ ನಟಿ: ದೋಷಮುಕ್ತರಾಗಿ ದುಬೈ ಜೈಲಿನಿಂದ ಬಿಡುಗಡೆ - ದುಬೈನಲ್ಲಿ ಕ್ರಿಸನ್ನ್​​ ಪೆರೇರಾ ಅರೆಸ್ಟ್

ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿ ಶಾರ್ಜಾ ಜೈಲಿನಲ್ಲಿದ್ದ ನಟಿ ಕ್ರಿಸನ್ನ್​​ ಪೆರೇರಾ ಬಿಡುಗಡೆ ಆಗಿದ್ದಾರೆ.

Chrisann Pereira
ನಟಿ ಕ್ರಿಸನ್ನ್​​ ಪೆರೇರಾ
author img

By

Published : Apr 27, 2023, 12:39 PM IST

ತಪ್ಪೇ ಮಾಡದೇ 'ಡ್ರಗ್ಸ್' ಪ್ರಕರಣದಲ್ಲಿ ಸಿಲುಕಿ ಶಾರ್ಜಾ (ಯುಎಇ)ದ ಜೈಲಿನಲ್ಲಿದ್ದ ನಟಿ ಕ್ರಿಸನ್ನ್​​ ಪೆರೇರಾ ( Chrisann Pereira) ಬಿಡುಗಡೆ ಆಗಿದ್ದಾರೆ ಎಂದು ಅವರ ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ತಡರಾತ್ರಿ ತಿಳಿಸಿದೆ. ನಟಿಯ ಕುಟುಂಬವು ಖುಷಿಯಿಂದ ನೃತ್ಯ ಮಾಡುವ ಮತ್ತು ಭಾವುಕರಾಗಿ ನಟಿ ಅಳುತ್ತಿರುವ ವಿಡಿಯೋವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ವಿಡಿಯೋ ಕಾಲ್​ ಮೂಲಕ ನಟಿ ಕುಟುಂಬಸ್ಥರೊಂದಿಗೆ ಮಾತನಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹದು. ಎಲ್ಲರೂ ಆದಷ್ಟು ಬೇಗ ಹಿಂತಿರುಗುವಂತೆ ನಟಿಯಲ್ಲಿ ಮನವಿ ಮಾಡಿಕೊಂಡರು. 27ರ ಹರೆಯದ ಕ್ರಿಸನ್ನ್​​ ಪೆರೇರಾ ಕಳೆದ ತಿಂಗಳು 'ಡ್ರಗ್ಸ್ ಪ್ಲಾಂಟ್' ಪ್ರಕರಣದಲ್ಲಿ ಸಿಲುಕಿದ್ದರು. ಆರೋಪಿಗಳು ನಟಿಯನ್ನು ಈ ಪ್ರಕರಣದಲ್ಲಿ ಸಿಲುಕುವಂತೆ ಮಾಡಿದ್ದರು. ಮುಂಬೈನ ಇಬ್ಬರು ಆರೋಪಿಗಳು ಸಿಕ್ಕಿಬಿದ್ದು, ತಮ್ಮ ಸಂಚು ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ನಟಿ ದೋಷಮುಕ್ತರಾಗಿ ಹೊರ ಬಂದಿದ್ದಾರೆ.

ಆರೋಪಿಗಳಿಬ್ಬರು ಟ್ರೋಫಿಯಲ್ಲಿ ಡ್ರಗ್ಸ್ ಅಡಗಿಸಿಟ್ಟಿದ್ದು, ಶಾರ್ಜಾದಲ್ಲಿ ಸ್ಥಳೀಯ ಪೊಲೀಸರು ನಟಿ ಕ್ರಿಸನ್ನ್​​ ಪೆರೇರಾ ಅವರನ್ನು ಬಂಧಿಸಿದ್ದರು. ಅವರು ಏಪ್ರಿಲ್ 1ರಿಂದ ಜೈಲಿನಲ್ಲಿದ್ದರು. ಮಂಗಳವಾರದಂದು ಮುಂಬೈನಲ್ಲಿರುವ ಆಕೆಯ ಕುಟುಂಬವು ಕ್ರಿಸನ್ನ್​​ ಪೆರೇರಾ ನಿರಪರಾಧಿ ಎಂದು ಮಾಹಿತಿ ಹಂಚಿಕೊಂಡಿತ್ತು. ಮತ್ತು ಮಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಹಾಯಕ್ಕಾಗಿ ಪಿಎಂ ಮತ್ತು ಮಿನಿಸ್ಟರಿ ಆಫ್​ ಎಕ್ಸ್​ಟ್ರನಲ್​ ಆಫೀಸ್​​ಗೆ ಮನವಿ ಮಾಡಲು ಯೋಜಿಸಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್, ಪ್ರಮುಖ ಆರೋಪಿ ಆ್ಯಂಥೋನಿ ಪೌಲ್ (35)​ ಮತ್ತು ಆತನ ಸಹಚರ ರಾಜೇಶ್ ಬೊಭಾಟೆ (34) ಅಲಿಯಾಸ್ ರವಿ ಅನ್ನು ಬಂಧಿಸಿದ್ದಾರೆ. ಪೆರೇರಾ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ನಟಿ ಮತ್ತು ಅವರೊಟ್ಟಿಗೆ ದುಬೈಗೆ ಹೊರಟವರ ಬ್ಯಾಗ್​ನಲ್ಲಿ ನಾವೇ ಡ್ರಗ್ಸ್​ ಅಡಗಿಸಿಟ್ಟೆವು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಕ್ರಿಸನ್ನ್​​ ಪೆರೇರಾ ಸೇರಿದಂತೆ ಇಬ್ಬರು ಈ ವಿಷಯ ತಿಳಿಯದೇ ಸಂಚಿನ ಬಲೆಗೆ ಬಿದ್ದರು. ಇದೀಗ ಮೂವರು ಶಾರ್ಜಾದಲ್ಲಿ ಪ್ರಕರಣದದಿಂದ ಹೊರಬರುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಹಾಲಿವುಡ್​​ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ ನಟಿಗೆ ವಂಚನೆ ಆರೋಪ: ಇಬ್ಬರು ಅರೆಸ್ಟ್!

ಪೆರೇರಾ ಕುಟುಂಬದ ವಿರುದ್ಧ, ವಿಶೇಷವಾಗಿ ಪ್ರಮೀಳಾ (ಕ್ರಿಸನ್ನ್​​​ ತಾಯಿ) ವಿರುದ್ಧ ಹಳೇ ದ್ವೇಷ ಸಾಧಿಸಲು ಹೀಗೆ ಮಾಡಲಾಗಿದೆ ಎಂಬ ವಿಚಾರವನ್ನು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ನಟಿ ಕ್ರಿಸನ್ನ್​​ ಪೆರೇರಾ ಅವರಿಗೆ ಹಾಲಿವುಡ್​​ನಲ್ಲಿ ಅವಕಾಶ, ತಾಯಿ ಪ್ರಮೀಳಾ ಪೆರೇರಾ ಅವರಿಗೆ ಹೈದರಾಬಾದ್​ನಲ್ಲಿ ಆಸ್ತಿ ವಿಚಾರವಾಗಿ ಮಾತನಾಡಿ ಆರೋಪಿಗಳು ತಮ್ಮತ್ತ ಸೆಳೆದುಕೊಂಡಿದ್ದರು. ಅವಕಾಶಕ್ಕಾಗಿ ನಟಿ ಕ್ರಿಸನ್ನ್​​ ಪೆರೇರಾ ದುಬೈಗೆ ಹಾರಿದ್ದರೆ, ತಾಯಿ ಹೈದರಾಬಾದ್​ಗೆ ಆಗಮಿಸಿದ್ದರು. ಇದೆಲ್ಲವೂ ಆರೋಪಿಗಳ ಪೂರ್ವ ನಿಯೋಜಿತ. ಇದೀಗ ಕ್ರಿಸನ್ನ್​​ ಪೆರೇರಾ ಅವರು ಡ್ರಗ್ಸ್​ ಪ್ರಕರಣದಿಂದ ಹೊರಬಂದಿದ್ದಾರೆ. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್​ನೊಂದಿಗೆ ಬಂದ ವಿಕ್ರಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.