ಮುಂಬೈ: 95ನೇ ಅಕಾಡೆಮಿಕ್ ಪ್ರಶಸ್ತಿಗೆ ಪ್ರವೇಶ ಪಡೆದ ಗುಜರಾತಿ ಭಾಷೆಯ 'ಚೆಲ್ಲೊ ಶೋ' ಸಿನಿಮಾ ಇದೇ ಶುಕ್ರವಾರದಿಂದ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಾಗಲಿದೆ. ಕಳೆದ ಅಕ್ಟೋಬರ್ 14ರಂದು ಇಂಗ್ಲಿಷ್ ಸಬ್ಟೈಟಲ್ನೊಂದಿಗೆ ಈ ಗುಜರಾತಿ ಸಿನಿಮಾ ಬಿಡುಗಡೆಗೊಂಡಿತ್ತು.
ನಿರ್ದೇಶಕ ಪಾನ್ ನಳಿನ್ ಅವರ ಈ ಚಿತ್ರದಲ್ಲಿ 9 ವರ್ಷದ ಸಿನಿಮಾ ಪ್ರೇಮಿ ಹುಡುಗ ಸಮಯ್, 35ಎಂಎಂಎ ಕನಸಿನೊಂದಿಗೆ ತನಗೆ ಅರಿವಿಲ್ಲದ ಹೃದಯ ವಿದ್ರಾವಕ ಘಟನೆಯೊಂದಿಗೆ ಸ್ವರ್ಗ ಮತ್ತು ಭೂಮಿಯ ಅನ್ವೇಷಣೆಗೆ ಮುಂದಾಗುತ್ತಾನೆ.
ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆ ಕುರಿತು ಮಾತನಾಡಿರುವ ಚಿತ್ರ ನಿರ್ದೇಶಕರು, ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬರುತ್ತಿರುವುದು ಸಂತಸ ನೀಡಿದೆ. ಇದರಿಂದಾಗಿ ನಾವು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ. ಚಿತ್ರ ನಿರ್ದೆಶಕನಾಗಿ ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ತಲುಪಬೇಕು ಎಂದು ನಾನು ಬಯಸುತ್ತೇನೆ. ಇದೀಗ ನೆಟ್ಫ್ಲಿಕ್ಸ್ಗೆ ಧನ್ಯವಾದ ಅರ್ಪಿಸುತ್ತೇನೆ. ಚಿತ್ರ ಇದೀಗ ನಿಮ್ಮ ಬೆರಳ ತುದಿಯಲ್ಲಿದೆ ಎಂದರು.
- " class="align-text-top noRightClick twitterSection" data="">
ಇನ್ನು, ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಮಾತನಾಡಿ, ಚೆಲ್ಲೊ ಶೋ ಇದೀಗ ಭಾರತೀಯರಿಗೆ ನೆಟ್ಫ್ಲಿಕ್ಸ್ನಲ್ಲಿ ಗುಜರಾತಿ ಜೊತೆಗೆ ಹಿಂದಿ ಡಬ್ಬಿಂಗ್ನಲ್ಲೂ ಸಿಗಲಿದೆ. ನಳಿನ್ ಅವರ ಮ್ಯಾಜಿಕ್ ಬ್ಯೂಟಿ ಮತ್ತು ಸಿನಿಮ್ಯಾಟಿಕ್ ಕ್ರಿಯೇಷನ್ ಜನರನ್ನು ತಲುಪಲಿದೆ ಎಂದು ಹೇಳಿದರು.
ಟ್ರೆಬೆಕಾ, ಬ್ಯೂನಸ್ ಐರಿಸ್ ಇಂಟರ್ನ್ಯಾಷನಲ್ ಫೆಸ್ಟಿವಲ್ ಆಫ್ ಇಂಡಿಪೆಂಡೆಂಟ್ ಸಿನಿಮಾ ಹಾಗೂ ಲಾಸ್ ಏಂಜಲೀಸ್‌ನಲ್ಲಿ ನಡೆದ ಏಷ್ಯನ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಪ್ರಶಸ್ತಿ ಪಡೆಯಿತು. ಗೋವಾದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲೂ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಶ್ಮಿತಾ ಸೇನ್: ಮಾಜಿ ವಿಶ್ವ ಸುಂದರಿಯ ಪ್ರೀತಿ - ಪ್ರೇಮ-ಪ್ರಣಯ ಬಗ್ಗೆ ನಿಮಗೆಷ್ಟು ಗೊತ್ತು?