ETV Bharat / entertainment

ಅನಿರುದ್ಧ್ 'chef ಚಿದಂಬರ' ಚಿತ್ರಕ್ಕೆ ಸಿಕ್ತು ಭಾರತಿ ವಿಷ್ಣುವರ್ಧನ್, ಉಪ್ಪಿ ಸಾಥ್ - anirudh jatkar

ನಟ ಅನಿರುದ್ಧ್‌ ಜತ್ಕರ್ ಅವರ ''chef ಚಿದಂಬರ'' ಸಿನಿಮಾ ಸೆಟ್ಟೇರಿದೆ.

Chef Chidambara
ಶೆಫ್ ಚಿದಂಬರ
author img

By

Published : Aug 10, 2023, 7:58 PM IST

ಚಿತ್ರ ಹಾಗು ತುಂಟಾಟ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಟ ಅನಿರುದ್ಧ್‌ ಜತ್ಕರ್. ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ತಮ್ಮದೇ ಐಡೆಂಟಿಟಿ ಹೊಂದಿರುವ ಇವರು ಬಹಳ ದಿನಗಳ ನಂತರ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆನಂದರಾಜ್ ನಿರ್ದೇಶನದ 'ಶೆಫ್ ಚಿದಂಬರ' ಮುಹೂರ್ತ ಸಮಾರಂಭ ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಹಿರಿಯ ನಟಿ‌ ಭಾರತಿ ವಿಷ್ಣುವರ್ಧನ್ ಕ್ಯಾಮರಾ ಚಾಲನೆ ಕೊಟ್ಟರು. ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿ ಎಂದು ಅವರು ಶುಭ ಹಾರೈಸಿದರು.

ಭಾರತಿ ವಿಷ್ಣುವರ್ಧನ್ ಮಾತನಾಡಿ, "ಈ ಸ್ಥಳಕ್ಕೆ ಬಂದಾಗ ನಮ್ಮ ಯಜಮಾನರ 'ಯಜಮಾನ' ಚಿತ್ರ ನೆನಪಾಯಿತು. ಆ ಚಿತ್ರದ ಮುಹೂರ್ತ ಸಮಾರಂಭ ಕೂಡ ಇಲ್ಲೇ ನಡೆದಿತ್ತು. 'ಶೆಫ್ ಚಿದಂಬರ'ಕ್ಕೂ ಒಳ್ಳೆಯದಾಗಲಿ" ಎಂದು ಹರಸಿದರು.

"ಇದೊಂದು ಡಾರ್ಕ್ ಕಾಮಿಡಿ ಜಾನರ್​ನ ಚಿತ್ರ. ಅನಿರುದ್ಧ್ ಅವರು ಐದು ವರ್ಷಗಳ ಬಿಡುವಿನ ನಂತರ ನಟಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್​ ನಡೆಯಲಿದೆ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್.ಶ್ರೀಧರ್, ರಘು ರಮಣಕೊಪ್ಪ, ಶಿವಮಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ" ಎಂದು ನಿರ್ದೇಶಕ ಆನಂದರಾಜ್ ಹೇಳಿದರು.

Chef Chidambara
ಶೆಫ್ ಚಿದಂಬರ ಮುಹೂರ್ತ

ನಟ ಅನಿರುದ್ಧ್ ಪ್ರತಿಕ್ರಿಯಿಸಿ, "ನಿರ್ದೇಶಕರು ಹೇಳಿದ ಹಾಗೆ ಇದೊಂದು ಹಾಸ್ಯಭರಿತ ಚಿತ್ರ. ಕಾಮಿಡಿಯೊಂದಿಗೆ ಕೌತುಕವೂ ಇಲ್ಲಿದೆ. ಒಂದು ಕೊಲೆಯ ಸುತ್ತ ಕಥೆ ನಡೆಯುತ್ತದೆ. ನಾನು ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ.‌ ಕಳೆದ ತಿಂಗಳು ಮೈಸೂರಿನ ಡಾ. ವಿಷ್ಣುವರ್ಧನ್ ಸಮಾಧಿ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಅಂದು ಕೂಡ ಭಾರತಿ ಅಮ್ಮ ಆಗಮಿಸಿದ್ದರು. ಚಿತ್ರದ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ನಿಮ್ಮ ಜೊತೆ ನಾನೀದ್ದೀನಿ ಎಂದು ಭರವಸೆ ನೀಡಿದರು. ಮುಹೂರ್ತ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಮಿಸಿ ಶುಭ ಕೋರಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದ.‌ ನಿರ್ಮಾಪಕಿ ರೂಪ ಅವರ ಪತಿ ಸರ್ವೋತ್ತಮ ನನ್ನ ಸ್ನೇಹಿತರು. ಅವರಿಗೆ ಕಥೆ ಇಷ್ಟವಾಗಿ, ನಿರ್ಮಾಣ‌ ಮಾಡುತ್ತಿದ್ದಾರೆ" ಎಂದರು.

ಇದನ್ನೂ ಓದಿ: ಬಹುಭಾಷಾ ಸುಂದರಿ ಜೊತೆ ಡಾಲಿ ಧನಂಜಯ್ ಲಾಂಗ್ ಡ್ರೈವ್​​.. ತೋತಾಪುರಿ 2 ಮೇಕಿಂಗ್ ವಿಡಿಯೋ ರಿವೀಲ್

ಚಿತ್ರದ ಕ್ಯಾರೆಕ್ಟರ್ ಟೀಸರ್ ಅನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಅನಿರುದ್ಧ್ ಪತ್ನಿ ಕೀರ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಬಿ.ಆರ್.ನವೀನ್ ಕುಮಾರ್ ಸೌಂಡ್ ಡಿಸೈನ್ ಹಾಗೂ ವಿಜೇತ್ ಚಂದ್ರ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ: ರಾಣಿಯಂತೆ ರೆಡಿಯಾದ ರಾಗಿಣಿ! ಝೀರೋ ಫಿಗರ್ ಫೋಟೋಶೂಟ್ ನೋಡಿದ್ರಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.