ಸೌತ್ ಸ್ಟಾರ್ ಡೈರೆಕ್ಟರ್ ಅಟ್ಲೀ ಮತ್ತು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಕಾಂಬೋದಲ್ಲಿ ಮೂಡಿಬರುತ್ತಿರುವ ಚಿತ್ರ 'ಜವಾನ್'. ಈ ಬಹುನಿರೀಕ್ಷಿತ ಸಿನಿಮಾದ ಚಲೇಯಾ ಹಾಡು ಇಂದು ಬಿಡುಗಡೆಗೊಂಡಿದೆ. ಎಸ್ಆರ್ಕೆ ಕಿಂಗ್ ಆಫ್ ರೊಮ್ಯಾನ್ಸ್ ಅನ್ನೋದು ನಿಮಗೆ ಗೊತ್ತಿರುವ ಸಂಗತಿ. ಇದೀಗ ಸೌತ್ ಸ್ಟಾರ್ ಹೀರೋಯಿನ್ ನಯನತಾರಾ ಜೊತೆ ರೊಮ್ಯಾಂಟಿಕ್ ಹಾಡಿನಲ್ಲಿ ಮಿಂಚಿದ್ದಾರೆ. ಈ ಸುಂದರ ಪ್ರಣಯದ ಹಾಡು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
- " class="align-text-top noRightClick twitterSection" data="">
'ಜವಾನ್' ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲು ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಪ್ರಾರಂಭಿಸಿದೆ. ಪೋಸ್ಟರ್ಗಳಿಂದ ಕುತೂಹಲ ಮೂಡಿಸಿರುವ ಚಿತ್ರ, ಇಂದು ಹಾಡನ್ನು ಬಿಡುಗಡೆ ಮಾಡುವುದರೊಂದಿಗೆ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.
ಶಾರುಖ್ ಖಾನ್ ಮತ್ತು ನಯನತಾರಾ ರೊಮ್ಯಾಂಟಿಕ್ ಹಾಡು ಸುಂದರವಾಗಿ ಮೂಡಿಬಂದಿದೆ. ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಈ ಟ್ರ್ಯಾಕ್ನಲ್ಲಿ ಕೆಲಸ ಮಾಡಿದ್ದಾರೆ. ಶಿಲ್ಪಾ ರಾವ್ ಸಾಥ್ ನೀಡಿದ್ದಾರೆ. ರೊಮ್ಯಾಂಟಿಕ್ ಸಾಂಗ್ನ ಶೂಟಿಂಗ್ ಅನ್ನು ಕೆಲ ತಿಂಗಳ ಹಿಂದೆಯೇ ನಡೆಸಲಾಗಿದೆ. ಫರಾ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಜವಾನ್ ಪ್ರಮೋಶನ್: ಜುಲೈ 31 ರಂದು ಮೊದಲ ಟ್ರ್ಯಾಕ್ ಜಿಂದಾ ಬಂದಾವನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಕುರಿತ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ: ಜಿಂದಾ ಬಂದಾ ಮೇಕಿಂಗ್ ವಿಡಿಯೋ: ಎಸ್ಆರ್ಕೆ ಅಪ್ಪಿಕೊಂಡ ಅಟ್ಲೀ - ಸೌತ್, ಬಾಲಿವುಡ್ ಕಾಂಬೋದಲ್ಲಿ 'ಜವಾನ್' ರೆಡಿ
ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಮೂರೂ ಭಾಷೆಗಳಲ್ಲೂ ಟೀಸರ್ ಬಿಡುಗಡೆಯಾಗಿದೆ. ಶಾರುಖ್ - ಗೌರಿ ಅವರ ರೆಡ್ ಚಿಲ್ಲೀಸ್ ಬ್ಯಾನರ್ ಸಿನಿಮಾ ನಿರ್ಮಿಸಿದೆ. ಸೌತ್ ಸ್ಟಾರ್ ನಟ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಉಳಿದಂತೆ, ಪ್ರಿಯಾಮಣಿ, ರಿಧಿ ಡೋಗ್ರಾ, ಸಾನ್ಯಾ ಮಲ್ಹೋತ್ರಾ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರಗೀತೆ 'ಜನಗಣಮನ'ಕ್ಕೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್