ETV Bharat / entertainment

ಡೀಪ್​ಫೇಕ್ ವಿವಾದ: ಸೋಷಿಯಲ್​ ಮೀಡಿಯಾ ಸಂಸ್ಥೆಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ ಕೇಂದ್ರ ಸರ್ಕಾರ - Centre summons social media giants

Deepfake-centre summons social media giants: ನಕಲಿ ವಿಷಯಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳಿಗೆ ಸಮನ್ಸ್‌ ಜಾರಿ ಮಾಡಿದ್ದು, ಮಹತ್ವದ ಸಭೆಗೆ ಕರೆದಿದೆ.

Rashmika Mandanna
ರಶ್ಮಿಕಾ ಮಂದಣ್ಣ
author img

By ETV Bharat Karnataka Team

Published : Nov 17, 2023, 12:27 PM IST

Updated : Nov 17, 2023, 12:48 PM IST

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್​​ ಆದ ಬಳಿಕ ಸಾಮಾಜಿಕ ಜಾಲತಾಣ ವೇದಿಕೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದ್ದು, ಸಮಸ್ಯೆ ಪರಿಹರಿಸಲು ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳ ಸಭೆಗೆ ಕರೆದಿದೆ. ಕೆಲವು ದಿನಗಳ ಹಿಂದಷ್ಟೇ ಎಐ ಜನರೇಟೆಡ್​ ವಿಡಿಯೋವೊಂದು ವೈರಲ್​ ಆಗಿತ್ತು. ಖ್ಯಾತನಾಮರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರವೂ ಭರವಸೆ ನೀಡಿತ್ತು.

ಇದೀಗ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ (ಈ ಹಿಂದಿನ ಟ್ವಿಟರ್), ಯೂಟ್ಯೂಬ್‌ಗೆ ಸಭೆಗೆ ಹಾಜರಾಗಲು ಮತ್ತು ಈ ವಿಷಯದ ಬಗ್ಗೆ ತಮ್ಮ ದೃಷ್ಟಿಕೋನ, ಸಂಭಾವ್ಯ ಸಮಸ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂಬೆಲ್ಲ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ವಿನಂತಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹಾಗು ಸಂಬಂಧಿತ ಸಚಿವಾಲಯಗಳೊಂದಿಗೆ ಈ ಪ್ರಕರಣದ ಕುರಿತು ಕೂಲಂಕಷವಾಗಿ ಪರಿಶೀಲಿಸಲಿದೆ. ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು ಮುಂದಿನ ವರ್ಷಗಳ ರಾಷ್ಟ್ರೀಯ ಚುನಾವಣೆಗಳನ್ನು ಗಮನದಲ್ಲಿರಿಸಿ, ಡೀಪ್‌ಫೇಕ್‌ ಕಂಟೆಂಟ್​ಗಳು ಉಲ್ಬಣಗೊಳ್ಳುವುದರ ಪರಿಣಾಮಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋದಿಂದ ಸಾಕಷ್ಟು ವಿವಾದಗಳು ಉಂಟಾಗಿರುವುದರಿಂದ ಡೀಪ್‌ಫೇಕ್‌ ಕಂಟೆಂಟ್ ಸಮಸ್ಯೆಗಳನ್ನು ಪರಿಹರಿಸುವುದು ಇಂದಿತ ತುರ್ತು ಎಂಬುದು ಸರ್ಕಾರಕ್ಕೆ ಮನದಟ್ಟಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: 2ನೇ ವಾರವೂ ಬೇಡಿಕೆ ಹೆಚ್ಚಿಸಿಕೊಂಡ ಯೋಗರಾಜ್ ಭಟ್ಟರ 'ಗರಡಿ'

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಈಗಾಗಲೇ ಈ ವಿಷಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಿವೆ. ಅಭಿಪ್ರಾಯಗಳು ಮತ್ತು ಐಟಿ ಕಾಯ್ದೆಯಲ್ಲಿನ ನಿಬಂಧನೆಗಳ ಬಗ್ಗೆ ಚರ್ಚಗೆ ಸರ್ಕಾರ ಅವು ಪ್ರೇರೇಪಿಸಿದೆ. ಐಟಿ ಕಾಯ್ದೆ 2000ರ ಸೆಕ್ಷನ್ 66D ಪ್ರಕಾರ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸುವ ಮೂಲಕ ತಪ್ಪು ಮಾಡುವ ವ್ಯಕ್ತಿಗಳಿಗೆ 3 ವರ್ಷಗಳವರೆಗೆ ಸಂಭಾವ್ಯ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗಿನ ದಂಡ ಹಾಕಲಾಗುತ್ತದೆ. ಸಾಮಾಜಿಕ ಜಾಲತಾಣ ಬಳಕೆ ನಿಯಮಗಳು, ಗೌಪ್ಯತೆ ನೀತಿಗಳು, ಬಳಕೆದಾರ ಒಪ್ಪಂದಗಳು ಮತ್ತು ಯಾರನ್ನೋ ತಪ್ಪಾಗಿ ಪ್ರತಿನಿಧಿಸುವ ಯಾವುದೇ ವಿಷಯವನ್ನು ಪ್ರಸ್ತಾಪ ಮಾಡದಂತೆ ಬಳಕೆದಾರರಿಗೆ ತಿಳಿಸುವುದೂ ಸೇರಿದಂತೆ ಸೂಕ್ತ ನಿಯಮಗಳನ್ನು ಅನುಸರಿಸುವ ಮೂಲಕ ಎಚ್ಚರಿಕೆ ವಹಿಸುವಂತೆ ಸರ್ಕಾರವು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಲ್ಲಿ ವಿನಂತಿಸಿದೆ.

ಇದನ್ನೂ ಓದಿ: ಡೇವಿಡ್ ಬೆಕ್‌ಹ್ಯಾಮ್​ಗೆ ಅದ್ಧೂರಿ ಸ್ವಾಗತ: ಫುಟ್‌ಬಾಲ್ ಐಕಾನ್ ಜೊತೆ ಬಾಲಿವುಡ್​ ತಾರೆಯರು

ವೈರಲ್ ವಿಡಿಯೋದಲ್ಲೇನಿದೆ?: ಯುವತಿ ಓರ್ವರು ಲಿಫ್ಟ್​ನೊಳಗೆ ಬರುವ ದೃಶ್ಯ ಈ ವೈರಲ್​ ವಿಡಿಯೋದಲ್ಲಿದೆ. ಬ್ಲ್ಯಾಕ್​ ಹಾಟ್ ಡ್ರೆಸ್​ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಅಸಲಿಗೆ ಈ ವಿಡಿಯೋದಲ್ಲಿರುವವರು ಆಂಗ್ಲೋ ಇಂಡಿಯನ್​ ಯುವತಿ ಝರಾ ಪಟೇಲ್. ಕೃತಕ ಬುದ್ಧಿಮತ್ತೆ ಬಳಸಿ ರಶ್ಮಿಕಾ ಮಂದಣ್ಣರಂತೆ ಕಾಣುವಂತೆ ಮಾಡಿದ್ದರು. ಕಳೆದ ತಿಂಗಳು ವೈರಲ್​ ಹೊರಬಂತಾದರೂ ಇತ್ತೀಚೆಗೆ ಈ ಸುದ್ದಿ ಹೆಚ್ಚು ಮಹತ್ವ ಪಡೆದುಕೊಂಡಿತು. ರಶ್ಮಿಕಾ ಮಂದಣ್ಣ, ಯುವತಿ ಝರಾ ಪಟೇಲ್ ಸೇರಿದಂತೆ ಗಣ್ಯರು ಪ್ರತಿಕ್ರಿಯಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.

Last Updated : Nov 17, 2023, 12:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.