ETV Bharat / entertainment

ಸಿದ್ಧಾರ್ಥ್ ಕಿಯಾರಾ ಮದುವೆ: ರಾಮ್​ಚರಣ್​, ಕತ್ರಿನಾ ಸೇರಿ ಸೂಪರ್ ಸ್ಟಾರ್​ಗಳಿಂದ ಶುಭಾಶಯ - ಸಿದ್ಧಾರ್ಥ್ ಕಿಯಾರಾ ಮದುವೆ ಫೋಟೋ

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆಗೆ ಸೆಲೆಬ್ರಿಟಿಗಳು ವಿಶೇಷವಾಗಿ ಶುಭ ಕೋರಿದ್ದಾರೆ.

celebrities wishes to Sidharth Kiara wedding
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ
author img

By

Published : Feb 8, 2023, 2:03 PM IST

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೆಸ್ ಹೋಟೆಲ್‌ನಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆ ಶಾಸ್ತ್ರಗಳು ಸಂಪೂರ್ಣವಾಗುವವರೆಗೂ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಮಾತನಾಡಿರದ ಈ ನವದಂಪತಿ ನಿನ್ನೆ ಸಂಜೆ ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಧು ವರ ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನವದಂಪತಿಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಸೆಲೆಬ್ರಿಟಿಗಳು ಸಹ ವಿಶೇಷವಾಗಿ ಶುಭ ಕೋರಿದ್ದಾರೆ.

ಶಂಕರ್ ಅವರ ಮುಂಬರುವ ಚಿತ್ರದಲ್ಲಿ ಕಿಯಾರಾ ಜೊತೆ ತೆರೆ ಹಂಚಿಕೊಳ್ಳಲಿರುವ ಆರ್​ಆರ್​ಆರ್​ ನಟ ರಾಮ್ ಚರಣ್, "ಮ್ಯಾಚ್ ಮೇಡ್ ಇನ್ ಹೆವೆನ್, ಅಭಿನಂದನೆಗಳು" ಎಂದು ಬರೆದಿದ್ದಾರೆ. ಬಾಲಿವುಡ್​ ತಾರಾ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಅಭಿನಂದನೆ ತಿಳಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ದೊಡ್ಡ ಬರಹದ ಮೂಲಕ ನವದಂಪತಿಗೆ ವಿಶೇಷವಾಗಿ ಶುಭಕೋರಿದ್ದಾರೆ. "ನಾನು ಅವರನ್ನು (ಸಿದ್ಧಾರ್ಥ್) ಒಂದೂವರೆ ದಶಕದ ಹಿಂದೆ ಭೇಟಿಯಾಗಿದ್ದೆ. ಮೌನಿ, ಬಲಶಾಲಿ, ಸೂಕ್ಷ್ಮ ಸ್ವಭಾವ ಎನಿಸಿತ್ತು. ಹಲವು ವರ್ಷಗಳ ನಂತರ ಕಿಯಾರಾ ಅವರನ್ನು ಭೇಟಿಯಾದೆ. ಅವರೂ ಕೂಡ ಮೌನಿ, ಬಲಶಾಲಿ ಮತ್ತು ಬಹಳ ಸಂವೇದನಾಶೀಲರು. ನಂತರ ಅವರು ಒಬ್ಬರನ್ನೊಬ್ಬರು ಭೇಟಿಯಾದರು. ಶಕ್ತಿ ಮತ್ತು ಘನತೆಯ ಈ ಎರಡು ಸ್ತಂಭಗಳು ಉತ್ತಮ ಬಂಧನವನ್ನು ಉಂಟುಮಾಡಬಹುದು, ಸುಂದರ ಪ್ರೇಮಕಥೆಯನ್ನು ರಚಿಸಬಹುದು ಎಂದು ನಾನು ಆ ಕ್ಷಣದಲ್ಲಿ ಅರಿತುಕೊಂಡೆ. ಪ್ರೀತಿಯ ಮಂಟಪದಲ್ಲಿ ಒಬ್ಬರನ್ನೊಬ್ಬರ ಕೈ ಹಿಡಿಯುವ ವೇಳೆ ಸುತ್ತಲಿದ್ದವರೆಲ್ಲ ಒಂದು ಅದ್ಭುತ ಶಕ್ತಿಯನ್ನು ಅನುಭವಿಸಿದರು. ಐ ಲವ್ ಯೂ ಸಿದ್, ಐ ಲವ್ ಯೂ ಕಿ ಎಂದು ಬರೆದುಕೊಂಡಿದ್ದಾರೆ.

ಶುಭಕೋರಿದ ಆಲಿಯಾ ಭಟ್:​​​​​​ ಸಿದ್ಧಾರ್ಥ್ ಮತ್ತು ಕಿಯಾರಾ ಹೊಸ ಪ್ರಯಾಣವನ್ನು ನಟಿ ಆಲಿಯಾ ಭಟ್ ಕೂಡ ಶುಭ ಹಾರೈಸಿದ್ದಾರೆ. ಇನ್ನೂ ಸಿದ್ಧಾರ್ಥ್ ಮತ್ತು ಆಲಿಯಾ ಅವರು 2017ರಲ್ಲಿ ಬೇರ್ಪಡುವ ಮೊದಲು ಒಂದು ವರ್ಷ ಡೇಟಿಂಗ್ ನಡೆಸಿದ್ದರು ಎನ್ನಲಾಗಿದೆ. ಐಯಾರಿ, ಮರ್ಜಾವಾನ್ ಮತ್ತು ಥ್ಯಾಂಕ್ ಗಾಡ್ ಚಿತ್ರಗಳಲ್ಲಿ ಸಿದ್ಧಾರ್ಥ್ ಅವರೊಂದಿಗೆ ಕೆಲಸ ಮಾಡಿರುವ ರಾಕುಲ್ ಪ್ರೀತ್ ಸಿಂಗ್ ನಿಮ್ಮಿಬ್ಬರಿಗೆ ಅಭಿನಂದನೆಗಳು, ದೇವರ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ. ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ವಿಶ್ ಮಾಡಿದ್ದು, ಶ್ರೀ ಮತ್ತು ಶ್ರೀಮತಿ ಮಲ್ಹೋತ್ರಾ ಅವರಿಗೆ ಪ್ರೀತಿ ಮತ್ತು ಆಶೀರ್ವಾದಗಳು ಎಂದು ಬರೆದಿದ್ದಾರೆ. ಪುಲ್ಕಿತ್ ಸಾಮ್ರಾಟ್ ಕೂಡ ವಿಶ್ ಮಾಡಿದ್ದು, "ನಿಮ್ಮಿಬ್ಬರಿಗೂ ಪ್ರೀತಿಯ ಶುಭಾಶಯಗಳು" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸಪ್ತಪದಿ ತುಳಿದ ಸಿದ್ಧಾರ್ಥ್-ಕಿಯಾರಾ: ಬಾಲಿವುಡ್​ ತಾರಾ ಜೋಡಿ ಮದುವೆಯ ಸುಂದರ ಕ್ಷಣಗಳು ಇಲ್ಲಿವೆ

ನನ್ನ ಸಿದ್ದೋ ಮತ್ತು ಮಿಸಸ್ ಕೆ ಅವರಿಗೆ ಅಭಿನಂದನೆಗಳು. ಆಶೀರ್ವಾದ, ಪ್ರೀತಿ, ಅಪ್ಪುಗೆ ಕಳುಹಿಸುತ್ತಿದ್ದೇನೆ ಎಂದು ನಟಿ ಪರಿಣಿತಿ ಚೋಪ್ರಾ ಬರೆದಿದ್ದಾರೆ. ಮರ್ಜಾವಾನ್ ನಿರ್ದೇಶಕ ಮಿಲಪ್ ಝವೇರಿ ಅವರು ಕೂಡ ಸಿದ್ಧಾರ್ಥ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. "ನನ್ನ ಮರ್ಜಾವಾನ್, ನಿಮ್ಮಿಬ್ಬರಿಗೂ ನನ್ನ ಪ್ರೀತಿ ಇದೆ ಎಂದು ಬರೆದಿದ್ದಾರೆ. ಸಿದ್ ಅವರೇ ನಿಮಗೆ 'ರಾತನಲಂಬಿಯಾನ್‌'ನ (ಸಿದ್ ನಟನೆಯ ಹಾಡು) ನಿಜವಾದ ಅರ್ಥ ತಿಳಿಯುತ್ತದೆ. ಡಿಂಪಲ್ ಮತ್ತು ಶೇರ್ಷಾ ಅವರಿಗೆ ಅಭಿನಂದನೆಗಳು ಎಂದು ನಟ ಅಂಗದ್ ಬೇಡಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಲಿರ ಧರಿಸಿ ಪತಿ ಸಿದ್ಧಾರ್ಥ್ ಮೇಲೆ ಪ್ರೀತಿ ವ್ಯಕ್ತಪಡಿಸಿದ ನಟಿ ಕಿಯಾರಾ ಅಡ್ವಾಣಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.