ETV Bharat / entertainment

Daughters Day: ಪ್ರೀತಿಯ ಪುತ್ರಿಯರೊಂದಿಗಿನ ಫೋಟೋ ಪೋಸ್ಟ್ ಮಾಡಿದ ಸೂಪರ್​​ಸ್ಟಾರ್ಸ್ - ಮಹೇಶ್ ಬಾಬು ಮಗಳು ಸಿತಾರ

ವಿಶ್ವ ಪುತ್ರಿಯರ ದಿನ ಹಿನ್ನೆಲೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಟಾಲಿವುಡ್​ ನಟ ಮಹೇಶ್ ಬಾಬು ಅವರು ತಮ್ಮ ಪ್ರೀತಿಯ ಪುತ್ರಿಯರೊಂದಿಗಿನ ಫೋಟೋ ಶೇರ್ ಮಾಡಿದ್ದಾರೆ.

celebrities post on Daughters Day 2022
ಪ್ರೀತಿಯ ಪುತ್ರಿಯರೊಂದಿಗಿನ ಫೋಟೋ ಪೋಸ್ಟ್ ಮಾಡಿದ ಸೂಪರ್​​ಸ್ಟಾರ್ಸ್
author img

By

Published : Sep 25, 2022, 5:29 PM IST

ಇಂದು ಎಲ್ಲೆಡೆ ವಿಶ್ವ ಪುತ್ರಿಯರ ದಿನ (Daughters Day 2022)ವನ್ನು ಆಚರಿಸಲಾಗುತ್ತಿದೆ. ಪೋಷಕರು, ವಿಶೇಷವಾಗಿ ತಂದೆಯಂದಿರು ತಮ್ಮ ಪುತ್ರಿಯರ ಮೇಲೆ ಪ್ರೀತಿಯ ಹೂಮಳೆ ಸುರಿಸುತ್ತಿದ್ದಾರೆ. ಅದರಂತೆ ಬಾಲಿವುಡ್ ಸೂಪರ್​​ಸ್ಟಾರ್ ಅಕ್ಷಯ್ ಕುಮಾರ್ ಮತ್ತು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ತಮ್ಮ ಪ್ರೀತಿಯ ಪುತ್ರಿಯರೊಂದಿಗಿನ ಫೋಟೋ ಶೇರ್ ಮಾಡಿಕೊಂಡು ಈ ವಿಶೇಷ ದಿನವನ್ನು ಆಚರಿಸಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಎರಡು ವಿಷಯವಾಗಿ ಸಂಭ್ರಮಾಚರಿಸಿದ್ದಾರೆ. ಒಂದು ವಿಶ್ವ ಪುತ್ರಿಯರ ದಿನ ಆದರೆ ಮತ್ತೊಂದು ತಮ್ಮ ಮಗಳು ನಿತಾರಾ ಅವರ 10ನೇ ವರ್ಷದ ಹುಟ್ಟುಹಬ್ಬ. ಅಕ್ಷಯ್ ಇನ್‌ಸ್ಟಾಗ್ರಾಮ್‌ನಲ್ಲಿ ತಂದೆ-ಮಗಳ ಜೋಡಿಯ ನಡುವಿನ ಪ್ರೀತಿಯ ಕ್ಷಣವನ್ನು ಸೆರೆಹಿಡಿದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ''ನನ್ನ ಕೈಬೆರಳು ಹಿಡಿದಾಗಿನಿಂದ ಈಗ ಸ್ವತಃ ತನ್ನ ಬ್ಯಾಗ್​ ಅನ್ನು ತಾನೇ ಹಿಡಿಯುವಷ್ಟರ ಮಟ್ಟಿಗೆ, ನನ್ನ ಮಗು ತುಂಬಾ ವೇಗವಾಗಿ ಬೆಳೆಯುತ್ತಿದೆ, ಇಂದು 10 ವರ್ಷ ತುಂಬಿದೆ, ನಿನ್ನ ಜನ್ಮ ದಿನಕ್ಕೆ ನನ್ನ ಹಾರೈಕೆಯಿದೆ.. ಅಪ್ಪ ನಿನ್ನನ್ನು ಪ್ರೀತಿಸುತ್ತಾರೆ'' ಎಂದು ಸುಂದರ ಬರಹ ಬರೆದು ವಿಡಿಯೋ ಶೇರ್ ಮಾಡಿದ್ದಾರೆ.

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಶಿರೋಡ್ಕರ್ ಅವರು ತಮ್ಮ ಪುತ್ರಿ ಸಿತಾರಾ ಘಟ್ಟಮನೇನಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಬ್ಯೂಟಿಫುಲ್ ಪೋಸ್ಟ್ ಶೇರ್ ಮಾಡಿದ್ದಾರೆ. ತಮ್ಮ ಮಗಳೊಂದಿಗಿನ ಫೋಟೋ ಹಂಚಿಕೊಂಡ ಮಹೇಶ್, "ನನ್ನ ಜಗತ್ತನ್ನು ಯಾವಾಗಲೂ ಬೆಳಗಿಸುತ್ತಿರು, ಮಗಳ ದಿನದ ಶುಭಾಶಯಗಳು ನನ್ನ ಪುಟ್ಟ ಸಿತಾರಾ ಘಟ್ಟಮನೇನಿ" ಎಂದು ಬರೆದಿದ್ದಾರೆ.

ನಮ್ರತಾ ಅವರು ಕೂಡ ಸಿತಾರಾ ಅವರೊಂದಿಗಿನ ತಮ್ಮ ಫೋಟೋವನ್ನು ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ - "ನನ್ನೊಂದಿಗೆ ನಗಲು ನೀನು ಇರುವುದಕ್ಕೆ ನನಗೆ ಖುಷಿಯಾಗಿದೆ, ಜೀವನದ ಎಲ್ಲ ವಿಶೇಷತೆ ಏನು ಎಂಬುದನ್ನು ನನಗೆ ತೋರಿಸಲು ನೀನಿದ್ದೀಯಾ, ಮಗಳ ದಿನದ ಶುಭಾಶಯಗಳು ನನ್ನ ಹೊಳೆಯುವ ನಕ್ಷತ್ರ ಸಿತಾರ ಘಟ್ಟಮನೇನಿ ಎಂದು ಬರೆದಿದ್ದಾರೆ.

ಇದನ್ನೂ ಓದಿ: Daughters Day: ಸುದೀಪ್​​-ಸಾನ್ವಿಗಾಗಿ ಅಭಿಮಾನಿಗಳು ಅರ್ಪಿಸಿದ್ರು ಸುಂದರ ಹಾಡು

ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಚೇತೇಶ್ವರ ಪೂಜಾರ ಕೂಡ ಹೆಣ್ಣು ಮಕ್ಕಳ ದಿನಕ್ಕೆ ಶುಭಾಶಯ ಕೋರಿದ್ದಾರೆ. "ನನ್ನ ದೊಡ್ಡ ಚೀರ್‌ಲೀಡರ್‌ಗೆ ಪುತ್ರಿಯರ ದಿನದ ಶುಭಾಶಯಗಳು. ನಿನಗೆ ನನ್ನ ಬೆಚ್ಚಗಿನ ಅಪ್ಪುಗೆಗಳು, ಅದಿತಿ ನಮ್ಮ ಜೀವನವನ್ನು ತುಂಬಾ ತೃಪ್ತಿ ಮತ್ತು ಸುಂದರವಾಗಿಸಿದ್ದಾಳೆ'' ಎಂದು ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.