ETV Bharat / entertainment

'ಕೌಸಲ್ಯಾ ಸುಪ್ರಜಾ ರಾಮ'ನ ನಾಯಕಿಯಾಗಿ ಬೃಂದಾ ಆಚಾರ್ಯ!

ಶಶಾಂಕ್​ ನಿರ್ದೇಶನದ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದ ನಾಯಕಿಯಾಗಿ ಬೃಂದಾ ಆಚಾರ್ಯ ಆಯ್ಕೆಯಾಗಿದ್ದಾರೆ.

author img

By

Published : Mar 22, 2023, 3:57 PM IST

brinda
ಬೃಂದಾ ಆಚಾರ್ಯ

ಸ್ಯಾಂಡಲ್​ವುಡ್​ನ ಸ್ವ-ಮೇಕ್ ನಿರ್ದೇಶಕರಾದ ಶಶಾಂಕ್​ ವಿಭಿನ್ನ ಕಂಟೆಂಟ್​ ಸಿನಿಮಾಗಳನ್ನು ಮಾಡುತ್ತ ಫೇಮಸ್​ ಆಗಿದ್ದಾರೆ. ಮೊಗ್ಗಿನ ಮನಸು, ಬಚ್ಚನ್​, ಮುಂಗಾರು ಮಳೆ 2, ಕೃಷ್ಣನ್ ಲವ್​ ಸ್ಟೋರಿ ಇಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಕನ್ನಡಿಗರ ಮನಗೆದ್ದಿರುವ ಶಶಾಂಕ್​ ಇದೀಗ ಲವ್​ ಮಾಕ್ಟೇಲ್​ ಖ್ಯಾತಿಯ ಡಾರ್ಲಿಂಗ್​ ಕೃಷ್ಣಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವುದು ಗೊತ್ತೇ ಇದೆ. ಅವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.

ಹೌದು. 'ಕೌಸಲ್ಯಾ ಸುಪ್ರಜಾ ರಾಮ' ಎಂಬ ಶೀರ್ಷಿಕೆ ಇಟ್ಟುಕೊಂಡಿರುವ ಈ ಸಿನಿಮಾಗೆ ನಾಯಕಿ ಆಯ್ಕೆಯಾಗಿರಲಿಲ್ಲ. ಇದೀಗ ಕೊನೆಗೂ ಹೀರೋಯಿನ್​ ಸೆಲೆಕ್ಟ್​ ಆಗಿದ್ದು, ಕೃಷ್ಣನ ಜೊತೆ ಪ್ರೇಮಂ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಅಭಿನಯಿಸುತ್ತಿದ್ದಾರೆ ಎಂದು ಶಶಾಂಕ್​ ಮೊದಲೇ ಹೇಳಿದ್ದರು. ಈ ಪೈಕಿ ಬೃಂದಾ ಫೈನಲ್​ ಆಗಿದ್ದು, ಇನ್ನೋರ್ವ ನಾಯಕಿಯಾಗಿ ಮಿಲನಾ ನಾಗರಾಜ್​ ನಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಜೂಲಿಯಟ್​ 2 ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೃಂದಾ ಆಚಾರ್ಯ 'ಕೌಸಲ್ಯಾ ಸುಪ್ರಜಾ ರಾಮ'ದಲ್ಲಿ ಶಿವಾನಿ ಪಾತ್ರ ನಿರ್ವಹಿಸಲಿದ್ದಾರೆ. ಇದೊಂದು ತಾಯಿ, ಮಗನ ನಡುವಿನ ಭಾವನಾತ್ಮಕ ಚಿತ್ರವಾಗಿದ್ದು, ನಾಯಕನಾಗಿ ಡಾರ್ಲಿಂಗ್​ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಜೊತೆಗೆ ಅಚ್ಯುತ್​ ಕುಮಾರ್​, ಗಿರಿರಾಜ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ದೃಶ್ಯ 2 ಸಿನಿಮಾ ಬಳಿಕ ಮತ್ತೊಂದು ಕೌಟುಂಬಿಕ ಚಿತ್ರದಲ್ಲಿ ಕ್ರೇಜಿಸ್ಟಾರ್

ಈಗಾಗಲೇ 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು. ಶಶಾಂಕ್ ಸಿನಿಮಾಸ್ ಹಾಗೂ ಬಿಸಿ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಡಾರ್ಲಿಂಗ್​ ಕೃಷ್ಣ ಸಿನಿಮಾ ಬಗ್ಗೆ.. ಕೃಷ್ಣ-ರುಕ್ಮಿಣಿ ಧಾರವಾಹಿ ಮೂಲಕ ಮೊದಲು ಬಣ್ಣ ಹಚ್ಚಿದ ಡಾರ್ಲಿಂಗ್​ ಕೃಷ್ಣ ನಂತರದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಾನೇ ಕಥೆಗಳನ್ನು ಬರೆದು ನಿರ್ದೇಶಿಸಿ, ನಟಿಸಿ ಸಿನಿಮಾವನ್ನು ಮಾಡಿದ್ದಾರೆ. ಕೆಲವೇ ವರ್ಷಗಳಲ್ಲಿ ಸೂಪರ್​ಸ್ಟಾರ್​ ನಟರ ಸಾಲಿಗೆ ಅವರು ಕೂಡ ಸೇರಿದ್ದಾರೆ. ಕೊರೊನಾ ಸಮಯದಲ್ಲಿ ತೆರೆ ಕಂಡಿದ್ದ ಲವ್​ ಮಾಕ್ಟೇಲ್​ ಸಿನಿಮಾ ಅದೆಷ್ಟೋ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅದಾದ ನಂತರ ಲವ್​ ಮಾಕ್ಟೇಲ್​-2 ಕೂಡ ಸೂಪರ್​​ ಹಿಟ್​ ಕಂಡಿದೆ. ಇವರು ಹೆಚ್ಚಾಗಿ ತಮ್ಮ ಸಿನಿಮಾಗಳಲ್ಲಿ ಎರಡು ಹೀರೋಯಿನ್​ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜೊತೆಗೆ ಅವರ ಸೀದಾ ನಟನೆಯ ಸ್ಟೈಲ್​ ಎಲ್ಲರಿಗೂ ಬಹಳ ಬೇಗನೆ ಇಷ್ಟವಾಗುತ್ತದೆ. ಇತ್ತೀಚೆಗೆ ತೆರೆ ಕಂಡ ಲವ್​ ಬರ್ಡ್ಸ್​ ಕೂಡ ಒಳ್ಳೆಯ ರೀತಿಯಲ್ಲೇ ಪ್ರದರ್ಶನ ಕಂಡಿದೆ. ಇನ್ನು 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರೀಕರಣ ನಡೆಯುತ್ತಿದ್ದು, ಬಿಡುಗಡೆ ದಿನಾಂಕ ಅಂತಿಮವಾಗಿಲ್ಲ.

ಇದನ್ನೂ ಓದಿ: RRR ನಾಟು ನಾಟು ಕ್ರೇಜ್​​: ಮಸ್ಕ್ ಮೆಚ್ಚುಗೆ, ನೂರಾರು ಟೆಸ್ಲಾ ಕಾರುಗಳಲ್ಲಿ ಲೈಟ್​ ಶೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.