ETV Bharat / entertainment

Box office battle: ಪಠಾಣ್​ ದಾಖಲೆ ಮುರಿಯುವತ್ತ ಗದರ್​ 2: ಓಎಂಜಿ 2 ಸಂಪಾದನೆ ಹೇಗಿದೆ? - ಅಕ್ಷಯ್​ ಕುಮಾರ್

Box office battle: ಬಾಲಿವುಡ್​ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ.

Bollywood movies
ಬಾಲಿವುಡ್​ ಸಿನಿಮಾಗಳು
author img

By ETV Bharat Karnataka Team

Published : Sep 3, 2023, 4:02 PM IST

ಕಳೆದೊಂದು ತಿಂಗಳಲ್ಲಿ ತೆರೆಕಂಡಿರುವ ಸರಣಿ ಸಿನಿಮಾಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿವೆ. ಜೈಲರ್​, ಗದರ್​ 2, ಓಎಂಜಿ 2 ಸದ್ಯ ಸಖತ್​ ಸುದ್ದಿಯಲ್ಲಿರುವ ಸಿನಿಮಾಗಳು. ಚಿತ್ರಗಳು ಬಿಡುಗಡೆ ಆಗಿ ಒಂದು ತಿಂಗಳು ಸಮೀಪಿಸುವುದರಲ್ಲಿದ್ದು, ಇನ್ನೂ ಕೂಡ ಚಿತ್ರತಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿವೆ.

ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್​ ನಟನೆಯ ಗದರ್​ 2 ಸಿನಿಮಾ 500 ಕೋಟಿ ರೂ. ದಾಟಲಿದೆ ಎಂದು ಸಿನಿ ವ್ಯವಹಾರ ಪಂಡಿತರು ಬಹಳ ಹಿಂದೆಯೇ ತಿಳಿಸಿದ್ದರು. ಆದ್ರೆ ಅದು ಯಾವಾಗ ಎಂಬುದೇ ನಮ್ಮ ಮುಂದಿದ್ದ ಪ್ರಶ್ನೆ. ಅಂತಿಮವಾಗಿ, ಸಿನಿಮಾ ತೆರೆಕಂಡ 24ನೇ ದಿನಕ್ಕೆ 500 ಕೋಟಿ ರೂ. (23 ದಿನಗಳ ಒಟ್ಟು ಕಲೆಕ್ಷನ್​) ತಲುಪುವಲ್ಲಿ ಯಶಸ್ವಿ ಆಗಿದೆ.

  • " class="align-text-top noRightClick twitterSection" data="">

ಗದರ್​ 2 ಸಿನಿಮಾ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಅವರ ಓ ಮೈ ಗಾಡ್​ ಚಿತ್ರದೊಂದಿಗೆ ಆಗಸ್ಟ್ 11 ರಂದು ತೆರೆಕಂಡಿತು. ಈ ಎರಡೂ ಕೂಡ ಬಾಲಿವುಡ್​ನ ಬಹುನಿರೀಕ್ಷಿತ ಸೀಕ್ವೆಲ್​ ಆಗಿದ್ದವು. ನಿರೀಕ್ಷೆಯಂತೆ ಓಎಂಜಿ 2 ಉತ್ತಮ ವ್ಯವಹಾರ ನಡೆದಿದ್ದರೆ, ಗದರ್​ 2 ಅಭೂತಪೂರ್ವ ಯಶಸ್ಸು ಕಂಡಿದೆ. ಗದರ್​ 2 ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 500.87 ಕೋಟಿ ರೂ. ಸಂಪಾದನೆ ಮಾಡುವಲ್ಲಿ ಯಶಸ್ವಿ ಆಗಿದೆ.

ಗದರ್ 2 VS ಪಠಾಣ್​ 2: ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಗದರ್​ 2 ಸಿನಿಮಾದ ಬಾಕ್ಸ್​ ಆಫೀಸ್​ ಸಂಖ್ಯೆ ಬಾಲಿವುಡ್​ ಕಿಂಗ್​ ಖಾನ್​ ಅವರ ಬ್ಲಾಕ್​ಬಸ್ಟರ್ ಪಠಾಣ್​ ಸಿನಿಮಾ ಸಂಖ್ಯೆ ಸಮೀಪದಲ್ಲಿದೆ. ಪಠಾಣ್​ 24ನೇ ದಿನಕ್ಕೆ 508.1 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಸದ್ಯ ಗದರ್ 2 ಕಲೆಕ್ಷನ್​ 500.87 ಕೋಟಿ ರೂ. ಆಗಿದೆ. ವಿಶ್ವದಾದ್ಯಂತ ಸಾವಿರ ಕೋಟಿ ರೂ. ಗಳಿಸಿರುವ ಪಠಾಣ್​ ಸಿನಿಮಾ ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ಒಟ್ಟು 543.09 ಕೋಟಿ ರೂ. ಸಂಪಾದನೆ ಮಾಡಿದೆ ಎನ್ನುವ ಮಾಹಿತಿ ಇದೆ. ಪಠಾಣ್​ ದಾಖಲೆಯನ್ನು ಗದರ್​ 2 ಬ್ರೇಕ್​ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 'ಗದರ್-2' ಸಕ್ಸಸ್ ಪಾರ್ಟಿ​: ಶಾರುಖ್​, ಅಮೀರ್​ ಸೇರಿ ತಾರೆಯರ ಸಮಾಗಮ- ವಿಡಿಯೋ ನೋಡಿ

ಬಾಕ್ಸ್​ ಆಫೀಸ್​ನಲ್ಲಿ ಗದರ್​ 2 ವೇಗ ಗಮನಿಸಿದರೆ ಪಠಾಣ್​ ನ ಒಟ್ಟು ಕಲೆಕ್ಷನ್​ ದಾಖಲೆಯನ್ನು ದಾಟಲಿದೆ ಎಂಬ ವಿಶ್ವಾಸವನ್ನು ಸಿನಿ ವ್ಯವಹಾರ ತಜ್ಞರು ವ್ಯಕ್ತಪಡಿಸಿದ್ದಾರೆ. ಓಎಂಜಿ 2 ಮತ್ತು ಡ್ರೀಮ್​ ಗರ್ಲ್ 2 ಚಿತ್ರಗಳ ಉತ್ತಮ ಪ್ರದರ್ಶನಗಳ ನಡುವೆಯೂ ಗದರ್​ 2 ಸಿನಿಮಾದ ಯಶಸ್ಸಿನಲೆ ಜೋರಾಗಿದೆ. ಪಠಾಣ್​ ದಾಖಲೆ ಪುಡಿಗಟ್ಟಲು ಗದರ್​ 2 ಸಿನಿಮಾ ಇನ್ನೂ 43 ಕೋಟಿ ರೂ. ಕಲೆಕ್ಷನ್​ ಮಾಡಬೇಕಿದೆ. ಇನ್ನೂ ಸೆಪ್ಟೆಂಬರ್​ 7 ರಂದು ಪಠಾಣ್​ ಹೀರೋ ಶಾರುಖ್​ ಅಭಿನಯದ ಜವಾನ್​ ತೆರೆಕಾಣಲಿದೆ. ಸಿನಿಮಾ ಕ್ರೇಜ್​ ಗಮನಿಸಿದ್ರೆ ಉಳಿದ ಚಿತ್ರಗಳಿಗೆ ಸವಾಲಿನ ವಾತಾವರಣ ಎಂದೇ ಹೇಳಬಹುದು.

ಇದನ್ನೂ ಓದಿ: ಶಾರುಖ್ 'ಜವಾನ್' ಭರ್ಜರಿ ಓಪನಿಂಗ್​​ ನಿರೀಕ್ಷೆ; ಫಸ್ಟ್‌ ಡೇ ಶೋಗೆ ಮಾರಾಟವಾದ ಟಿಕೆಟ್​​ಗಳೆಷ್ಟು?!

ಓಎಂಜಿ 2 ಕಲೆಕ್ಷನ್​: ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಅಭಿನಯದ ಓ ಮೈ ಗಾಡ್ 2 ಸಿನಿಮಾ ಈವರೆಗೆ ಒಟ್ಟು 146.36 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಸತತ ಹಿನ್ನೆಡೆ ಅನುಭವಿಸಿದ್ದ ಅಕ್ಷಯ್​ ಕುಮಾರ್​ ಗೆಲುವಿನ ನಗೆ ಬೀರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.