ETV Bharat / entertainment

'ಮ್ಯೂಟ್' ಟ್ರೈಲರ್ ಅನಾವರಣ ಮಾಡಲಿರುವ ಬಾಲಿವುಡ್ ನಟಿ ರವೀನಾ ಟಂಡನ್ - Archana Joyce

ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಅರ್ಚನಾ ಜೋಯಿಸ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಮ್ಯೂಟ್' ಸಿನಿಮಾದ ಟ್ರೈಲರ್ ಅನ್ನು ನಟಿ ರವೀನಾ ಟಂಡನ್ ಸದ್ಯದಲ್ಲೇ ಲಾಂಚ್ ಮಾಡಲಿದ್ದಾರೆ..

ರವೀನಾ ಟಂಡನ್
ರವೀನಾ ಟಂಡನ್
author img

By

Published : Apr 8, 2022, 11:46 AM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟೈಟಲ್ ಹಾಗೂ ಫಸ್ಟ್‌ಲುಕ್‌ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಮ್ಯೂಟ್' ಬಹುತೇಕ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಸದ್ಯಕ್ಕೆ ಚಿತ್ರದ ಟ್ರೈಲರ್ ಲಾಂಚ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಬಾಲಿವುಡ್ ಬೆಡಗಿ ರವೀನಾ ಟಂಡನ್ ಏಕ ಕಾಲದಲ್ಲಿ ಕನ್ನಡ, ತೆಲುಗು, ಮಾಲಯಾಳಂ, ತಮಿಳು ಮತ್ತು ಹಿಂದಿ ಐದೂ ಭಾಷೆಗಳಲ್ಲೂ 'ಮ್ಯೂಟ್'ನ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಇದೇ ಮೊದಲ ಬಾರಿ ರವೀನಾ ಟಂಡನ್ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್ ಲಾಂಚ್ ಮಾಡುತ್ತಿರುವುದು.

ಮ್ಯೂಟ್ ಸಿನಿಮಾದ ಪೋಸ್ಟರ್​
ಮ್ಯೂಟ್ ಸಿನಿಮಾದ ಪೋಸ್ಟರ್​

ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಅರ್ಚನಾ ಜೋಯಿಸ್ ಮುಖ್ಯಭೂಮಿಕೆಯಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರವೀನಾ ಟಂಡನ್ ಕೂಡ 'ಕೆಜಿಎಫ್ ಚಾಪ್ಟರ್ 2' ಸಿನಿಮಾದಲ್ಲಿ ನಟಿಸಿದ್ದು, ಅರ್ಚನಾ ಜೋಯಿಸ್ ಗೆಳತನಕ್ಕಾಗಿ 'ಮ್ಯೂಟ್' ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ತಮಿಳಿನ ಪ್ರಖ್ಯಾತ ನಟ ಆಡುಕಲಂ ನರೇನ್ ಕೂಡ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಸಹ ಮುಖ್ಯಪಾತ್ರ ನಿರ್ವಹಿಸಿದ್ದಾರೆ.

ರವೀನಾ ಟಂಡನ್
ರವೀನಾ ಟಂಡನ್

ಇ.ಕೆ. ಪಿಚ್ಚರ್ ಬ್ಯಾನರ್‌ನಲ್ಲಿ 'ಮುಂಗಾರು ಮಳೆ 2' ಸಿನಿಮಾ ನಿರ್ಮಾಣ ಮಾಡಿದ್ದ ಜಿ.ಗಂಗಾಧರ್ 'ಮ್ಯೂಟ್' ಚಿತ್ರದ ನಿರ್ಮಾಪಕರಾಗಿದ್ದಾರೆ. ಜಿ.ಗಂಗಾಧರ್ 'ಮುಂಗಾರು ಮಳೆ' ಮತ್ತು 'ಮೊಗ್ಗಿನ ಮನಸು' ಚಿತ್ರಗಳಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದಾರೆ. 'ಮೊಗ್ಗಿನ ಮನಸು' ಖ್ಯಾತಿಯ ನಿರ್ದೇಶಕ ಶಶಾಂಕ್ ಅವರೊಂದಿಗೆ ಕೆಲಸ ಮಾಡಿರುವ ಪ್ರಶಾಂತ್ ಚಂದ್ರ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ತೇಜಸ್ ಪಬ್ಲಿಕೇಷನ್ ಡಿಜಿಟಲ್ ತಂತ್ರಗಳನ್ನು ರೂಪಿಸಿದ್ದಾರೆ.

ಅರ್ಚನಾ ಜೋಯಿಸ್
ಅರ್ಚನಾ ಜೋಯಿಸ್

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ನಟ ರಿಷಿ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದರೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆಗೊಳ್ಳಲಿದೆ. ಕನ್ನಡ ಸಿನಿಮಾಗೆ ಬಾಲಿವುಡ್ ನಟಿ‌ ರವೀನಾ ಟಂಡನ್ ಸಾಥ್ ನೀಡಿರೋದು ಚಿತ್ರತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ.

ಅರ್ಚನಾ ಜೋಯಿಸ್
ಅರ್ಚನಾ ಜೋಯಿಸ್

ಇದನ್ನೂ ಓದಿ: ಕೂಡಿಬಂದ ಕಂಕಣ ಭಾಗ್ಯ ; ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾದ ರಣಬೀರ್ ಕಪೂರ್ - ಆಲಿಯಾ ಭಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.