ನವದೆಹಲಿ: ಸುಕೇಶ್ ಚಂದ್ರಶೇಖರ್ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇಂದು ನಗರದ ಮಂದಿರ ಮಾರ್ಗದಲ್ಲಿರುವ ಇಒಡಬ್ಲ್ಯು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಮತ್ತೋರ್ವ ಆರೋಪಿ ಪಿಂಕಿ ಇರಾನಿ ಕೂಡ ತನಿಖೆ ಹಿನ್ನೆಲೆ ಇಒಡಬ್ಲ್ಯು ಕಚೇರಿಗೆ ತಲುಪಿದ್ದಾರೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW)ವು ಫರ್ನಾಂಡೀಸ್‌ಗೆ ಸೋಮವಾರದಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 14ರ ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ಸಮನ್ಸ್ ಜಾರಿ ಮಾಡಿತ್ತು. ಆರೋಪಿ ಸುಕೇಶ್ನೊಂದಿಗಿನ ನಟಿ ಜಾಕ್ವೆಲಿನ್ ಹೊಂದಿರುವ ಸಂಬಂಧ, ಅವನಿಂದ ಪಡೆದ ಉಡುಗೊರೆ, ಸುಕೇಶ್‌ನನ್ನು ಎಷ್ಟು ಬಾರಿ ಭೇಟಿಯಾಗಿದ್ದರು, ಫೋನ್‌ನಲ್ಲಿ ಎಷ್ಟು ಬಾರಿ ಸಂಪರ್ಕಿಸಿದ್ದರು ಎಂಬ ಬಗ್ಗೆ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದರು. ಇದೀಗ ನಟಿ ಜಾಕ್ವೆಲಿನ್ ಇಒಡಬ್ಲ್ಯು ಕಚೇರಿ ತಲುಪಿ ವಿಚಾರಣೆ ಎದುರಿಸುತ್ತಿದ್ದಾರೆ.
-
Jacqueline Fernandez arrives at EOW office in Delhi in connection with the conman Sukesh Chandrashekhar money Laundering case https://t.co/XFDrF8xDaB pic.twitter.com/qzkIfe9Tzh
— ANI (@ANI) September 14, 2022 " class="align-text-top noRightClick twitterSection" data="
">Jacqueline Fernandez arrives at EOW office in Delhi in connection with the conman Sukesh Chandrashekhar money Laundering case https://t.co/XFDrF8xDaB pic.twitter.com/qzkIfe9Tzh
— ANI (@ANI) September 14, 2022Jacqueline Fernandez arrives at EOW office in Delhi in connection with the conman Sukesh Chandrashekhar money Laundering case https://t.co/XFDrF8xDaB pic.twitter.com/qzkIfe9Tzh
— ANI (@ANI) September 14, 2022
ಜಾಕ್ವೆಲಿನ್, ಸುಕೇಶ್ ಇಬ್ಬರಿಗೂ ಪರಿಚಯ ಇರುವುದರಿಂದ ಸುಕೇಶ್ ಮತ್ತು ಜಾಕ್ವೆಲಿನ್ ಸಂಪರ್ಕಿಸಲು ಪಿಂಕಿ ಇರಾನಿ ಸಹಾಯ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಹಿನ್ನೆಲೆ ಆರ್ಥಿಕ ಅಪರಾಧಗಳ ವಿಭಾಗವು ಪಿಂಕಿ ಇರಾನಿ ಅವರಿಗೂ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು ಅವರೂ ಕೂಡ ಈಗಾಗಲೇ ಇಒಡಬ್ಲ್ಯು ಕಚೇರಿ ತಲುಪಿದ್ದಾರೆ. ಪಿಂಕಿ ಇರಾನಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಇಬ್ಬರನ್ನೂ ಒಟ್ಟಿಗೆ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇನ್ನೂ ಜಾಕ್ವೆಲಿನ್ ತನಿಖೆಯನ್ನು ಒಂದೆರಡು ದಿನಗಳವರೆಗೆ ನಡೆಯಬಹುದು, ಅದಕ್ಕೆ ಅನುಗುಣವಾಗಿ ದೆಹಲಿಯಲ್ಲಿ ಉಳಿಯಲು ಯೋಜಿಸಲು ತಿಳಿಸಲಾಗಿದೆಯಂತೆ.
-
Sukesh Chandrashekhar's aide Pinky Irani joins Delhi Police probe
— ANI Digital (@ani_digital) September 14, 2022 " class="align-text-top noRightClick twitterSection" data="
Read @ANI Story | https://t.co/UiRiKOWs6G#PinkyIrani #SukeshChandrashekhar #JacquelineFernandez pic.twitter.com/RhaY391ibU
">Sukesh Chandrashekhar's aide Pinky Irani joins Delhi Police probe
— ANI Digital (@ani_digital) September 14, 2022
Read @ANI Story | https://t.co/UiRiKOWs6G#PinkyIrani #SukeshChandrashekhar #JacquelineFernandez pic.twitter.com/RhaY391ibUSukesh Chandrashekhar's aide Pinky Irani joins Delhi Police probe
— ANI Digital (@ani_digital) September 14, 2022
Read @ANI Story | https://t.co/UiRiKOWs6G#PinkyIrani #SukeshChandrashekhar #JacquelineFernandez pic.twitter.com/RhaY391ibU
ಇದನ್ನೂ ಓದಿ: ನಾಳೆ ತನಿಖೆಗೆ ಹಾಜರಾಗಲಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗಾಗಿ ದೊಡ್ಡ ಪ್ರಶ್ನೆ ಪಟ್ಟಿ ಸಿದ್ಧ
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯ (ಇಡಿ) ಆರೋಪಿ ಸುಕೇಶ್ ಅವರನ್ನು ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಕ್ವೆಲಿನ್ ಅವರನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಿತ್ತು.