ETV Bharat / entertainment

ಸೆಬಿ ನಿರ್ಬಂಧ ಕುರಿತು ಬಾಲಿವುಡ್​ ನಟನ ಸ್ಪಷ್ಟನೆ: ಷೇರು ಬಗ್ಗೆ ಕಿಂಚಿತ್ತು ಜ್ಞಾನವಿಲ್ಲ ಎಂದ ಅರ್ಷದ್​ ವಾರ್ಸಿ - ಏನಿದು ಪ್ರಕರಣ

ತಮ್ಮ ಷೇರುಗಳಿಗೆ ಹೂಡಿಕೆದಾರರನ್ನು ಸೆಳೆಯುವ ಸಂಬಂಧ ಅವರು ಯೂಟ್ಯೂಬ್ ಮೂಲಕ ತಪ್ಪು ದಾರಿಗೆ ಎಳೆಯುವ ಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

bollywood-actor-banned-by-sebi-arshad-warsi-said-that-he-has-no-knowledge-about-the-stock

author img

By

Published : Mar 3, 2023, 3:16 PM IST

ಮುಂಬೈ: ಮುನ್ನಾ ಬಾಯ್​ ಎಂಬಿಬಿಎಸ್​ ಮೂಲಕ ಅಭಿಮಾನಿಗಳನ್ನು ಸೆಳೆದ ಬಾಲಿವುಡ್​ನ ಖ್ಯಾತ ಪೋಷಕ ನಟರಲ್ಲಿ ಒಬ್ಬರಾಗಿರುವ ಅರ್ಷದ್​ ವಾರ್ಸಿ ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅರ್ಷದ್​ ವಾರ್ಸಿ ಮತ್ತು ಅವರ ಹೆಂಡತಿ ಮಾರಿಯಾ ಗೊರೆಟ್ಟಿಗೆ ಸೆಬಿ ನಿರ್ಬಂಧ ವಿಧಿಸಿದೆ. ಅರ್ಷದ್​ ವಾರ್ಸಿ, ಮರಿಯಾ ಜೊತೆಗೆ ಯೂಟ್ಯೂಬರ್​​ ಮನೀಶ್​ ಮಿಶ್ರಾ ಮತ್ತು ಸಾಧಾನ ಬ್ರಾಡ್​ಕಾಸ್ಟ್​​ನ ಪ್ರೊಮೋಟರ್​ ಶ್ರೇಯಾ ಗುಪ್ತಾ, ಗೌರವ್​ ಗುಪ್ತಾ, ಸೌರಬ್​ ಗುಪ್ತಾ, ಪೂಜಾ ಅಗರ್​ವಾಲ್​ ಮತ್ತು ವರಣ್​ ಮೀಡಿಯಾಗೂ ಕೂಡ ಈ ನಿರ್ಬಂಧ ವಿಧಿಸಲಾಗಿದೆ.

ಯೂಟ್ಯೂಬ್​ ಮೂಲಕ ಹೂಡಿಕೆದಾರರಿಗೆ ತಪ್ಪು ಮಾಹಿತಿ ಆರೋಫ: ತಮ್ಮ ಷೇರುಗಳನ್ನು ಖರೀದಿಸುವಂತೆ ಹೂಡಿಕೆದಾರರಿಗೆ ಇವರು ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ಸೆಳೆಯುತ್ತಿದ್ದರು. ಅಲ್ಲದೇ ಈ ಸಂಬಂಧ ತಪ್ಪು ದಾರಿಗೆ ಎಳೆಯುವ ವಿಡಿಯೋವನ್ನು ಅವರು ಅಪ್​ಲೋಡ್​ ಮಾಡುತ್ತಿದ್ದರು ಎಂದು ದೂರಲಾಗಿದೆ. ಮಧ್ಯಂತರ ಆದೇಶದ ಅನುಸಾರ, ಅರ್ಷದ್​ ವಾರ್ಸಿ 29.34 ಲಕ್ಷ ಮತ್ತು ಮರಿಯಾ 37.56 ಲಕ್ಷ ಆದಾಯವನ್ನು ಗಳಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಘಟನೆ ಸಂಬಂಧ ನಟನ ಸ್ಪಷ್ಟನೆ: ಇನ್ನು ಈ ಬೆಳವಣಿಗೆ ಬೆನ್ನಲ್ಲೇ ಟ್ವಿಟರ್​​ನಲ್ಲಿ ಈ ಕುರಿತು ಸ್ಪಷ್ಟನೆ ನೀಡಲು ಮುಂದಾಗಿರುವ ನಟ, ಇಂತಹ ಸುದ್ದಿಗಳನ್ನು ನಂಬದಂತೆ ತಿಳಿಸಿದ್ದಾರೆ. ಅಲ್ಲದೇ, ಷೇರು ಮಾರುಕಟ್ಟೆ ಬಗ್ಗೆ ತಮಗೂ ಹಾಗೂ ತಮ್ಮ ಹೆಂಡತಿಗೆ ಯಾವುದೇ ಜ್ಞಾನವಿಲ್ಲ ಎಂದಿದ್ದಾರೆ. ನೀವು ಓದುತ್ತಿರುವ ಸುದ್ದಿಗಳ ಬಗ್ಗೆ ನೀವು ನಂಬಬೇಡಿ. ಮರಿಯಾ ಮತ್ತು ನನಗೆ ಷೇರಿನಲ್ಲಿ ಕಿಂಚಿತ್ತು ಜ್ಞಾನವಿಲ್ಲ. ಶಾರ್ದಾ ಮತ್ತು ಇತರ ಷೇರುಗಳ ಹೂಡಿಕೆ ಮಾಡುವ ಮುನ್ನ ಸಲಹೆ ಪಡೆಯಿರಿ. ಕಷ್ಟಪಟ್ಟು ಗಳಿಸಿದ ಹಣವನ್ನು ನಷ್ಟ ಮಾಡಬೇಡಿ ಎಂದು ಟ್ವೀಟ್​​ ಮಾಡಿ ಮನವಿ ಮಾಡಿದ್ದಾರೆ.

  • Please do not believe everything you read in the news. Maria and my knowledge about stocks is zero, took advice and invested in Sharda, and like many other, lost all our hard earned money.

    — Arshad Warsi (@ArshadWarsi) March 2, 2023 " class="align-text-top noRightClick twitterSection" data=" ">

ತನಿಖೆಯಲ್ಲಿ ಅಂಕಿ ಅಂಶ ಬಹಿರಂಗ: ಸಾಧನಾ ಬ್ರಾಡ್‌ಕಾಸ್ಟ್ ಲಿಮಿಟೆಡ್ ಮತ್ತು ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್‌ನ ಷೇರುಗಳನ್ನು ಕೆಲವು ಘಟಕಗಳು ಬೆಲೆ ತಿರುಚುವಿಕೆ ಮತ್ತು ಆಫ್‌ಲೋಡ್ ಮಾಡುತ್ತಿವೆ ಎಂದು ಆರೋಪಿಸಿ ಸೆಬಿ ದೂರುಗಳನ್ನು ಸ್ವೀಕರಿಸಿದ ನಂತರ ತನಿಖೆ ಕೈಗೊಳ್ಳಲಾಗಿತ್ತು. 2022 ಏಪ್ರಿಲ್​- ಸೆಪ್ಟೆಂಬರ್​ ದಾಖಲಾತಿಗಳನ್ನು ಸೆಬಿ ಪರೀಕ್ಷೆ ನಡೆಸಿದ್ದು, ಎರಡು ಕಂಒನಿಗಳ ಷೇರಿನ ಬೆಲೆ ಮತ್ತು ಮೌಲ್ಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬಂದಿದೆ. ತಪ್ಪು ಮತ್ತು ತಪ್ಪು ದಾರಿಗೆ ಎಳೆಯುವ ವಿಡಿಯೋಗಳನ್ನು ಸಾಧನಾ ಬ್ರಾಡ್​ಕಾಸ್ಟ್​ ಲಿಮಿಟೆಡ್​ ಯುಟೂಬ್​ನಲ್ಲಿ ಅಪ್ಲೋಡ್​ ಮಾಡಿರುವುದು ಕಂಡು ಬಂದಿದೆ.

ಏನಿದು ಪ್ರಕರಣ?: ಸಾಧನ ಬ್ರಾಡ್​​ಕಾಸ್ಟ್​ಗೆ ಸಂಬಂಧಿಸಿದಂತೆ ಬೆಲೆಗಳನ್ನು ತಿರುಚುವುದು ಸೇರಿದಂತೆ ಮಿಡ್​ ಕ್ಯಾಪ್​ ಮತ್ತು ಸ್ಮಾಲ್​ ಕ್ಯಾಪ್​​ ಷೇರುಗಳ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿತ್ತು. ಈ ಮೂಲಕ ಹೂಡಿಕೆದಾರರನ್ನು ತಪ್ಪು ದಾರಿಗೆ ಎಳೆಯಲು ಪ್ರಭಾವ ಬೀರಲಾಗುತ್ತಿದೆ ಎಂಬ ಬಗ್ಗೆ ಸೆಬಿಗೆ ದೂರು ನೀಡಲಾಗಿತ್ತು. ಅದರ ಅನುಸಾರ ಸೆಬಿ ಇದೀಗ ಕ್ರಮಕ್ಕೆ ಮುಂದಾಗಿದ್ದು, ಕೆಲವು ವರ್ಷಗಳ ಕಾಲ ಅವರನ್ನು ಷೇರು ವ್ಯವಹಾರದಲ್ಲಿ ತೊಡಗಿಸಿಕೊಳ್ಳದಂತೆ ದೂರವಿರಿಸಿದೆ.

ಇದನ್ನೂ ಓದಿ: ಆಸ್ಕರ್ ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ: ಹೆಮ್ಮೆ ವ್ಯಕ್ತಪಡಿಸಿದ ಪತಿ ರಣ್​​ವೀರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.