ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ 'ಬಿಲ್ಲಿ ಬಿಲ್ಲಿ ಆಖ್ ಗೋರಿಯೇ' ಹಾಡು ಇಂದು ಬಿಡುಗಡೆ ಆಗಿದೆ. ನಿನ್ನೆ ಹಾಡಿನ ಟೀಸರ್ ರಿಲೀಸ್ ಆಗಿದ್ದು, ಸಲ್ಲು ಫ್ಯಾನ್ಸ್ ನಿರೀಕ್ಷೆ ದುಪ್ಪಟ್ಟಾಗಿತ್ತು. ಅಭಿಮಾನಿಗಳನ್ನು ಹೆಚ್ಚು ಕಾಯಿಸದ ಸಲ್ಲು ಅಂಡ್ ಟೀಂ ಇಂದು ಹಾಡು ಬಿಡುಗಡೆ ಮಾಡಲಾಗಿದೆ.
- " class="align-text-top noRightClick twitterSection" data="
">
ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಸೇರಿದಂತೆ ಬಹು ತಾರಾಗಣದ ಕೌಟುಂಬಿಕ ಸಿನಿಮಾ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'ನ 'ಬಿಲ್ಲಿ ಬಿಲ್ಲಿ ಆಖ್ ಗೋರಿಯೇ' ಇಂದು ರಿಲೀಸ್ ಆಗಿದೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಹಾಡನ್ನು ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್, ಈ ಬಿಲ್ಲಿ ಬಿಲ್ಲಿ ಹಾಡು ನಿಮ್ಮನ್ನು ನಗಿಸುತ್ತದೆ, ಕುಣಿಸುತ್ತದೆ, ಧನಾತ್ಮಕ ಶಕ್ತಿ ಕೊಡುತ್ತದೆ ಎಂಬ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.
ನಟ ಸಲ್ಮಾನ್ ಖಾನ್ ವೈಟ್ ಆ್ಯಂಡ್ ಬ್ಲ್ಯಾಕ್ ಸೂಟ್ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡರೆ, ನಟಿ ಪೂಜಾ ಹೆಗ್ಡೆ ರೆಡ್ ಲೆಹೆಂಗಾದಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಸಂಖ್ಯೆಯ ಸಹನೃತ್ಯಗಾರರ ನಡುವೆ ಸಲ್ಮಾನ್ ಮತ್ತು ಪೂಜಾ ಡ್ಯಾನ್ಸ್ ಮಾಡಿದ್ದು, ಹಾಡು ಪ್ರೇಕ್ಷಕರ ಮನ ಸೆಳೆದಿದೆ. ನಟ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ರೆಡ್ ಹಾರ್ಟ್ ಮತ್ತು ಫೈಯರ್ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಭಾಂಗ್ರಾ ಪ್ರಿನ್ಸ್ ಎಂದು ಖ್ಯಾತರಾಗಿರುವ ಪಂಜಾಬಿ ಗಾಯಕ ಸುಖ್ಬೀರ್ ಅವರು ಈ ಬಿಲ್ಲಿ ಬಿಲ್ಲಿ ಹಾಡು ಹಾಡಿದ್ದಾರೆ.
ಇತ್ತೀಚೆಗೆ ಚಿತ್ರ ನಿರ್ಮಾಪಕರು ಚಿತ್ರದ ಮೊದಲ ಹಾಡು 'ನೈಯೋ ಲಗ್ದಾ'ವನ್ನು ಅನಾವರಣಗೊಳಿಸಿದ್ದರು. ಈ ಹಾಡು ಕೂಡ ಅಭಿಮಾನಿಗಳಿಂದ ಮೆಚ್ಚುಗೆಯ ಪ್ರತಿಕ್ರಿಯೆ ಸಂಗ್ರಹಿಸಿತ್ತು. ಸದ್ಯ ತೆರೆ ಕಂಡಿರುವ 'ಬಿಲ್ಲಿ ಬಿಲ್ಲಿ ಅಖ್' ಹಾಡು ಹೇಗೆ ಹುಟ್ಟಿಕೊಂಡಿತು ಎಂಬುದರ ಕುರಿತು ಮಾತನಾಡಿರುವ ಪಂಜಾಬಿ ಗಾಯಕ ಸುಖ್ಬೀರ್, ಸಲ್ಮಾನ್ ಮದುವೆಯ ಹಾಡಿನ ಕಲ್ಪನೆಯೊಂದಿಗೆ ನನ್ನೊಂದಿಗೆ ಮಾತನಾಡಿದ್ದರು. ನಾವಿಬ್ಬರೂ ಅಬುಧಾಬಿಯಲ್ಲಿದ್ದಾಗ ಈ ಚರ್ಚೆ ನಡೆದಿತ್ತು. ಕೊನೆಗೆ 'ಬಿಲ್ಲಿ ಬಿಲ್ಲಿ ಆಖ್ ಗೋರಿಯೇ' ಹಾಡು ರೆಡಿ ಆಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫೋಟೋ ಬ್ಲ್ಯಾಕ್ & ವೈಟ್ - ಸಲ್ಮಾನ್ ನೋಟ ಮಾತ್ರ ಕಲರ್ಫುಲ್: 'ಬಿಲ್ಲಿ ಬಿಲ್ಲಿ' ಟೀಸರ್ ರಿಲೀಸ್
ಫರ್ಹಾದ್ ಸಾಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಪೂಜಾ ಹೆಗ್ಡೆ, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್ ಸೇರಿದಂತೆ ದೊಡ್ಡ ತಾರಾಗಣವಿದೆ. ಇನ್ನೂ ಸಲ್ಮಾನ್ ಅವರ ಮುಂಬರುವ ಚಿತ್ರ "ಟೈಗರ್ 3"ನಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಶಾರುಖ್ ಖಾನ್ ಟೈಗರ್ 3ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಜಿಮ್ನಲ್ಲಿ ದೇಹ ದಂಡಿಸುತ್ತಿರುವ ಮಹೇಶ್ ಬಾಬು: ಹ್ಯಾಂಡ್ಸಮ್ ಸ್ಟಾರ್ ಫೋಟೋಗೆ ಫ್ಯಾನ್ಸ್ ಫಿದಾ