ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್‌ನ ಮೊದಲ ವೀಕೆಂಡ್ ಶೋ ನಡೆದಿದೆ. ಕಲರ್ಸ್ ಕನ್ನಡ ಮತ್ತು ಜಿಯೋ ಸಿನಿಮಾಗಳಲ್ಲಿ ಏಕಕಾಲದಲ್ಲಿ ಪ್ರಸಾರವಾದ 'ಕಿಚ್ಚನ ಪಂಚಾಯಿತಿ'ಯಲ್ಲಿ ಹಲವು ವಿಚಾರಗಳ ಚರ್ಚೆ ನಡೆದಿದೆ. ಹ್ಯಾಂಡ್‌ಸಮ್ ಲುಕ್‌ನಲ್ಲಿ ಕಾಣಿಸಿಕೊಂಡ ಸುದೀಪ್ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಸ್ಪರ್ಧಿಗಳಿಗೆ ಕಿವಿಮಾತನ್ನೂ ಹೇಳಿದ್ದಾರೆ. ಸ್ಪರ್ಧಿಗಳ ಸ್ಟ್ರೆಂತ್, ವೀಕ್‌ನೆಸ್, ಮನೆಯಲ್ಲಿ ನಡೆದ ಸರಿ ತಪ್ಪು, ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸಗಳನ್ನು ಸೂಚ್ಯವಾಗಿ ಹೇಳಿದರು. ನಗಿಸಿದರು, ಕಾಲೆಳೆದರು, ಜೊತೆಗೆ ತಪ್ಪುಗಳನ್ನು ಸೂಚ್ಯವಾಗಿಯೇ ತಿದ್ದಿದರು. ಬಿಗ್ ಬಾಸ್ ರೂಲ್ಸ್ ಬಗ್ಗೆಯೂ ಎಚ್ಚರಿಸಿದರು.
ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಮಾತನಾಡಿಸಿ, ಅನುಭಗಳನ್ನು ಕೇಳಿದರು. ಮನೆಯೊಳಗಿನ ಸ್ಪರ್ಧಿಗಳಿಂದಲೇ ಅವರ ವರ್ತನೆಯ ಕುರಿತು ವಿಶ್ಲೇಷಣೆ ನಡೆಸಿದರು. ನಿಮಗೆ ನೀವೇ ಹತ್ತರಲ್ಲಿ ಎಷ್ಟು ಅಂಕಗಳನ್ನು ಕೊಟ್ಟುಕೊಳ್ಳುತ್ತೀರಿ? ಎಂದೂ ಸಹ ಕೇಳಿದರು. ಕ್ಯಾಪ್ಟನ್ಸಿಯ ಕೊರತೆಗಳನ್ನು ಸ್ಪರ್ಧಿಗಳ ಬಾಯಿಂದಲೇ ಹೇಳಿಸಿದರು. ಮನೆಯೊಳಗಿನ ಹುಡುಗಿಯರು ತುಕಾಲಿ ಸಂತೋಷ್ ಅವರಿಗೆ ಬೆಸ್ಟ್ ತಂಗಿಯಾಗುವ ಆಸೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ಇವರಿಂದ ಅಣ್ಣ ಅನ್ನಿಸಿಕೊಳ್ಳೋದಕ್ಕಿಂತ ವಾರಪೂರ್ತಿ ಪಾತ್ರೆ ತೊಳೆಯುತ್ತೇನೆ ಎಂದು ತುಕಾಲಿ ಅವರು ತಮಾಷೆಯಾಗಿ ಹೇಳಿದ ಮಾತಿಗೆ ಕಿಚ್ಚ ಅಸ್ತು ಅಂದುಬಿಟ್ಟರು.
-
ಅಲ್ನೋಡಿ ಪ್ರತಾಪನ ಹೊಸ ಪ್ರತಾಪ!
— Colors Kannada (@ColorsKannada) October 15, 2023 " class="align-text-top noRightClick twitterSection" data="
Super Sunday with ಸುದೀಪ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/gMO0avEPmz
">ಅಲ್ನೋಡಿ ಪ್ರತಾಪನ ಹೊಸ ಪ್ರತಾಪ!
— Colors Kannada (@ColorsKannada) October 15, 2023
Super Sunday with ಸುದೀಪ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/gMO0avEPmzಅಲ್ನೋಡಿ ಪ್ರತಾಪನ ಹೊಸ ಪ್ರತಾಪ!
— Colors Kannada (@ColorsKannada) October 15, 2023
Super Sunday with ಸುದೀಪ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/gMO0avEPmz
ನಂತರ ಕಿಚ್ಚನ ಮಾತು ಸಾಗಿದ್ದು ನಾಮಿನೇಷನ್ ಎಂಬ ಅಗ್ನಿಪರೀಕ್ಷೆಗೆ. ಕಳೆದ ವಾರ ಪ್ರಾರಂಭದ ಎಪಿಸೋಡ್‌ನಲ್ಲಿ ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ತನಿಷಾ, ಸ್ನೇಕ್ ಶ್ಯಾಮ್, ಬುಲೆಟ್ ರಕ್ಷಕ್, ಕಾರ್ತಿಕ್ ಈ ಏಳು ಸ್ಪರ್ಧಿಗಳನ್ನು ಜನರು ಹೋಲ್ಡ್‌ನಲ್ಲಿಟ್ಟಿದ್ರು. ನಿನ್ನೆಯ ಎಪಿಸೋಡ್‌ನಲ್ಲಿ ವರ್ತೂರು ಸಂತೋಷ್ ಅತಿ ಹೆಚ್ಚು ಮತ ಪಡೆದು ಸಮರ್ಥರ ಗುಂಪಿಗೆ ಸೇರಿ ಸೇಫ್ ಆದರು. ನಂತರ ಸೇಫ್ ಆಗಿದ್ದು ತನಿಷಾ. ಉಳಿದ ನಾಲ್ವರು ಅಸಮರ್ಥರು ಟೆನ್ಷನ್‌ನಲ್ಲಿಯೇ ಕೂರುವಂತಾಯ್ತು. ಏಕಂದ್ರೆ ಆ ಸಂದರ್ಭ ಕಿಚ್ಚ ಮಾತನ್ನು ಬೇರೆ ಕಡೆಗೆ ಹೊರಳಿಸಿದರು.
ಮನೆಯೊಳಗಿನ ವಿದ್ಯಮಾನಗಳ ಕುರಿತು ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡರು. ಮನೆಯೊಳಗೆ ಬಂದ ಲಾರ್ಡ್ ಪ್ರಥಮ್ ಅವರಿಗೆ ಪೂರ್ತಿಯಾಗಿ ಸರೆಂಡರ್ ಆದ ಬಗ್ಗೆ ಪ್ರಶ್ನಿಸಿದರು. ಬಿಗ್ ಬಾಸ್ ಯಾವುದೇ ಸೂಚನೆಯನ್ನೂ ಕೊಡದೇ ನೀವೆಲ್ಲ ಏಕೆ ಅವರು ಹೇಳಿದ್ದನ್ನೆಲ್ಲ ಮಾಡಿದಿರಿ?, ಅವರನ್ನು ಒಪ್ಪಿಕೊಂಡಿರಿ?, ಎಂಬ ಕಿಚ್ಚನ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಲ್ಲ.
-
ಮಾತಾಡಲು ತುಂಬಾನೇ ಇದೆ, ನೀವೆಲ್ಲಾ ತಪ್ಪದೆ ಪಂಚಾಯ್ತಿಗೆ ಬರ್ಬೇಕು!
— Colors Kannada (@ColorsKannada) October 14, 2023 " class="align-text-top noRightClick twitterSection" data="
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ngzYNZPOFX
">ಮಾತಾಡಲು ತುಂಬಾನೇ ಇದೆ, ನೀವೆಲ್ಲಾ ತಪ್ಪದೆ ಪಂಚಾಯ್ತಿಗೆ ಬರ್ಬೇಕು!
— Colors Kannada (@ColorsKannada) October 14, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ngzYNZPOFXಮಾತಾಡಲು ತುಂಬಾನೇ ಇದೆ, ನೀವೆಲ್ಲಾ ತಪ್ಪದೆ ಪಂಚಾಯ್ತಿಗೆ ಬರ್ಬೇಕು!
— Colors Kannada (@ColorsKannada) October 14, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ngzYNZPOFX
ಈ ಮನೆಯಲ್ಲಿ ಊಸರವಳ್ಳಿ ಯಾರು? ವಿಷಕಾರಿ ಯಾರು? ಡಿಪ್ಲೊಮ್ಯಾಟಿಕ್ ಯಾರು? ಇನೋಸೆಂಟ್ ಯಾರು? ಎಂಬ ಪ್ರಶ್ನೆಗಳು ಕಿಚ್ಚ ಅವರಿಂದ ತೂರಿಬಂದವು. ಅದಕ್ಕೆ ಗೌರೀಶ್, ತನಿಷಾ, ಸಂಗೀತಾ ಎಲ್ಲರೂ ಬೇರೆ ಬೇರೆ ವ್ಯಕ್ತಿಗಳ ಹೆಸರು ಹೇಳಿದರು. ಈ ಮಧ್ಯೆ ತನಿಷಾ ಮತ್ತು ಭಾಗ್ಯಶ್ರೀ ಅವರ ನಡುವೆ ಸಣ್ಣ ಕಿಡಿಯೂ ಹೊತ್ತಿಕೊಂಡಿತು.
ನಂತರ ಮಾತು ಡ್ರೋನ್ ಪ್ರತಾಪ್ ಅವರ ಬಗ್ಗೆ ಸಾಗಿತು. ಸುದೀಪ್ ಈ ಮಾತುಕತೆ ಶುರುಮಾಡಿದ್ದು ಒಂದು ಕಥೆಯ ಜೊತೆಗೆ. ಒಬ್ಬ ತಪ್ಪಿತಸ್ಥ ತಪ್ಪು ಮಾಡಿದ್ದಾನೆ. ಭಗವಂತ ಅವನಿಗೆ ಶಿಕ್ಷೆ ಕೊಟ್ಟು ನಂತರ ಕ್ಷಮಿಸುತ್ತಾನೆ. ಆದರೆ ತಪ್ಪಿತಸ್ಥ ಹೊರಗೆ ಹೋದಮೇಲೆ ಸಮಾಜ ಅವನನ್ನು ಕಳ್ಳ ಸುಳ್ಳ ಎಂದೇ ಗುರುತಿಸುತ್ತದೆ. ಭಗವಂತ ಕ್ಷಮಿಸಿದವರನ್ನು ಸಮಾಜ ದೂಷಿಸುತ್ತದೆ. ಅದೊಂದು ರೀತಿಯ ವ್ಯಕ್ತಿಯ ಕೊಲೆ ಎಂದರು. ಕಥೆ ಹೇಳಿದ ಸುದೀಪ್ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಈ ಕಥೆಯಲ್ಲಿ ಭಗವಂತ ಯಾರು? ತಪ್ಪಿತಸ್ಥ ಯಾರು? ಸಮಾಜ ಯಾರು?’ ಎಂಬ ಪ್ರಶ್ನೆ ಕಿಚ್ಚನ ಬಾಯಿಯಿಂದ ಹೊರಬೀಳುತ್ತಿದ್ದಂತೆಯೇ ಸ್ಪರ್ಧಿಗಳಿಗೆ ಅವರು ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿದುಬಿಟ್ಟಿತ್ತು. ಕಿಚ್ಚ ಈ ಕಥೆಯನ್ನು ಹೇಳಿದ್ದು ಡ್ರೋನ್ ಪ್ರತಾಪ್ ವಿಷಯಕ್ಕೆ. ಅವರ ಬಗ್ಗೆ ವಾರವಿಡೀ, ಸಮಯ ಸಿಕ್ಕಾಗಲೆಲ್ಲಾ, ಅವಕಾಶವಾದಾಗಲೆಲ್ಲಾ ಆಡಿಕೊಂಡು ನಗುತ್ತಿದ್ದ, ವ್ಯಂಗ್ಯ ಮಾಡುತ್ತಿದ್ದ ತುಕಾಲಿ ಸಂತೋಷ್ ಸುದೀಪ್ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡರು.
-
ಕತೆ ಶುರುವಾಗುವ ಮುನ್ನವೇ ಮುಗಿಯೋದು ಯಾರ ಪಾಲಿಗೆ?
— Colors Kannada (@ColorsKannada) October 14, 2023 " class="align-text-top noRightClick twitterSection" data="
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/sEelgjQ7ag
">ಕತೆ ಶುರುವಾಗುವ ಮುನ್ನವೇ ಮುಗಿಯೋದು ಯಾರ ಪಾಲಿಗೆ?
— Colors Kannada (@ColorsKannada) October 14, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/sEelgjQ7agಕತೆ ಶುರುವಾಗುವ ಮುನ್ನವೇ ಮುಗಿಯೋದು ಯಾರ ಪಾಲಿಗೆ?
— Colors Kannada (@ColorsKannada) October 14, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/sEelgjQ7ag
ಒಬ್ಬ ವ್ಯಕ್ತಿಯನ್ನು ಆಡಿಕೊಂಡು, ಉಳಿದವರನ್ನು ನಗಿಸುವ ವ್ಯಕ್ತಿ ಗುಡ್ ಜೋಕರ್ ಅಲ್ಲ, ಬ್ಯಾಟ್‌ಮನ್ ಜೋಕರ್ ಎಂದು ಎಚ್ಚರಿಸಿದರು. ಪ್ರತಿಯೊಬ್ಬ ವ್ಯಕ್ತಿಯೊಳಗೂ ಅವನ ಸತ್ಯ, ಅವನ ನೋವು ಇರುತ್ತದೆ. ಅದನ್ನು ನಾವು ಒಪ್ಪಿಕೊಳ್ಳಬೇಕು ಅಂತೇನಿಲ್ಲ. ಆದರೆ ಕನಿಷ್ಠ ನಾವು ಸುಮ್ಮನಿರಬಹುದು. ತಪ್ಪು ಮಾಡಿದ ವ್ಯಕ್ತಿ ಶಿಕ್ಷೆ ಅನುಭವಿಸುತ್ತಾನೆ. ಆದರೆ ಆ ಶಿಕ್ಷೆ ನೀಡುವುದಕ್ಕೆ ನೀವ್ಯಾರು?. ಇನ್ನೊಬ್ಬ ವ್ಯಕ್ತಿಯನ್ನು ತಮಾಷೆ ಮಾಡಿ ಬೇರೆಯವರನ್ನು ನಗಿಸುವುದು ಎಷ್ಟು ಸರಿ?. ಒಬ್ಬ ವ್ಯಕ್ತಿಯ ಅಳು ಹೇಗೆ ನಗುವಾಗುತ್ತದೆ?. ಹೀಗೆ ಕಿಚ್ಚ ಒಂದರ ಹಿಂದೊಂದು ಪ್ರಶ್ನೆ ಕೇಳುತ್ತಿದ್ದ ಹಾಗೆ ತುಕಾಲಿ ಸಂತೋಷ್ ಮುಖದಲ್ಲಿ ಪಶ್ಚಾತ್ತಾಪ ಕಾಣಿಸಿಕೊಂಡಿತು. ಡ್ರೋನ್ ಪ್ರತಾಪ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಕಾಲಿ ಅವರು ಸುದೀಪ್ ಎದುರಲ್ಲಿಯೇ ಪ್ರತಾಪ್ ಅವರಿಗೆ ಕ್ಷಮೆಯನ್ನೂ ಕೇಳಿದರು.
ಕೊನೆಯಲ್ಲಿ, ಒಳ್ಳೆಯ ರೀತಿಯಿಂದಲೇ ಎಲ್ಲರನ್ನೂ ನಗಿಸಬಹುದು. ಅದನ್ನು ನೀವು ಚೆನ್ನಾಗಿಯೇ ಮಾಡುತ್ತೀರಿ. ಅದನ್ನು ಮುಂದುವರಿಸಿ. ಆದರೆ ಇನ್ನೊಬ್ಬ ವ್ಯಕ್ತಿಯನ್ನು ಎದುರಿಟ್ಟುಕೊಂಡು, ಅವರನ್ನು ತಮಾಷೆ ಮಾಡಿಕೊಂಡು ಉಳಿದ ಹತ್ತು ವ್ಯಕ್ತಿಗಳನ್ನು ನಗಿಸುವುದರಲ್ಲಿ ಯಾವ ದೊಡ್ಡತನವೂ ಇಲ್ಲ ಎಂಬ ಹಿತವಚನವನ್ನೂ ಹೇಳಿದರು. ನಂತರ ಪ್ರತಾಪ್ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು.
ಇದನ್ನೂ ಓದಿ: ಬಿಗ್ ಬಾಸ್ ಶೋನಲ್ಲಿ ಸ್ನೇಕ್ ಶ್ಯಾಮ್ ತೆರೆದಿಟ್ರು 'ಉರಗ' ಪ್ರಪಂಚದ ಕುತೂಹಲ
ಮೊದಲ ದಿನ ಬಂದಾಗ ನನ್ನ ಮನಸ್ಸಲ್ಲಿ ಏನೂ ಇರಲಿಲ್ಲ. ಆದರೆ ಎಲ್ಲರೂ ಒಟ್ಟಿಗೆ ಸೇರಿದಾಗ, ನನ್ನನ್ನು ನಾನು ನಿರೂಪಿಸಿಕೊಳ್ಳಬೇಕು ಎಂದು ಅನಿಸಿತು ಅಂತಾ ಪ್ರತಾಪ್ ತಿಳಿಸಿದರು. ಅದಕ್ಕೆ ಕಿಚ್ಚ ಪ್ರತಿಕ್ರಿಯಿಸಿ, ನಮ್ಮ ತಪ್ಪುಗಳು ನಮಗೆ ಮಾತ್ರ ಗೊತ್ತಿರುತ್ತದೆ. ನಿಮ್ಮ ಒಳಗಡೆ ಒಂದು ಕಾನ್ಪ್ಲಿಕ್ಟ್ ಇರಬಹುದು ,ಅದನ್ನು ಸರಿಯಾಗಿ ಫೇಸ್ ಮಾಡಿ. ಆ ಧೈರ್ಯ ನಿಮಗೆ ಸಿಗಲಿ. ಅದು ನಿಮಗೆ ಬಿಗ್‌ಬಾಸ್ ಮನೆಯೊಳಗೆ ಸಿಗಲಿ ಎಂದು ಸುದೀಪ್ ಅವರು ಪ್ರತಾಪ್‌ಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: BBK 10: ತುಕಾಲಿ ಸಂತೋಷ್ ಹುಟ್ಟಿದ್ದೇ ಪವಾಡವಂತೆ! ಇಂಟ್ರಸ್ಟಿಂಗ್ ಕಥೆ ನೀವೂ ಕೇಳಿ..
ಸಮರ್ಥರು-ಅಸಮರ್ಥರ ಗುಂಪಿನಿಂದ ಇನ್ನೂ ನಾಮಿನೇಷನ್ ಪಟ್ಟಿಯಲ್ಲಿ ಇದ್ದವರು ಮೈಕಲ್, ಕಾರ್ತಿಕ್ ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್. ಇವರಲ್ಲಿ ಯಾರು ಮೊದಲು ಸೇಫ್ ಆಗಬೇಕು ಎಂಬ ಕಿಚ್ಚನ ಪ್ರಶ್ನೆಗೆ ಸ್ಪರ್ಧಿಗಳು ಉತ್ತರಿಸಿದರು. ಹಲವರು ಪ್ರತಾಪ್ ಸೇಫ್ ಆಗಬೇಕು ಎಂದು ಆಶಿಸಿದರು. ಆದರೆ ಜನರ ನಿರ್ಧಾರ ಬೇರೆಯೇ ಆಗಿತ್ತು. ಕಾರ್ತಿಕ್ ಅವರನ್ನು ಮೊದಲು ಸೇಫ್ ಮಾಡಲಾಯಿತು. ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಲ್ಲಿ ಯಾರೆಲ್ಲಾ ಸೇಫ್? ಯಾರು ಮನೆಯಿಂದ ಹೊರಬೀಳುತ್ತಾರೆ? ಎನ್ನುವುದನ್ನು ನೋಡಲು ನೀವು ಇಂದಿನ ಸಂಚಿಕೆಯವರೆಗೆ ಕಾಯಬೇಕಿದೆ.