ಈ ವಾರ ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭವಾಗಿರುವ ಹಿರಿಯ ಪ್ರಾಥಮಿಕ ಶಾಲೆ ಜೋರಾಗೇ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ, ಅವರ ತುಂಟತನ ಜೋರಾಗೇ ಇದೆ. ಕಿಲಾಡಿತನದಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಜೋರು. ಮೇಷ್ಟ್ರುಗಳನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದು. ಈ ಎಲ್ಲ ತುಂಟಾಟದ ಕ್ಷಣಗಳು ಕಾಣಿಸಿಕೊಂಡಿದ್ದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಇಂದಿನ ಪ್ರೋಮೋದಲ್ಲಿ. ಹೌದು, 'ಟೀಚರ್ಸ್ ಸುಸ್ತೋ ಸುಸ್ತು!' ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.
-
ಟೀಚರ್ಸ್ ಸುಸ್ತೋ ಸುಸ್ತು!
— Colors Kannada (@ColorsKannada) December 13, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ruLY6Wvy8m
">ಟೀಚರ್ಸ್ ಸುಸ್ತೋ ಸುಸ್ತು!
— Colors Kannada (@ColorsKannada) December 13, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ruLY6Wvy8mಟೀಚರ್ಸ್ ಸುಸ್ತೋ ಸುಸ್ತು!
— Colors Kannada (@ColorsKannada) December 13, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ruLY6Wvy8m
ನಮ್ರತಾ ಡಾನ್ಸ್ ಕ್ಲಾಸ್: ನಿನ್ನೆ ತನಿಷಾ ಟೀಚರ್ ಅವರಿಂದ ವ್ಯಕ್ತಿತ್ವ ವಿಕಸನದ ಪಾಠ ಕಲಿತ ವಿದ್ಯಾರ್ಥಿಗಳು, ಮೈಕಲ್ ಮೇಷ್ಟ್ರ ಜೊತೆಗೆ 'ರೋಮಾಂಚನವೀ ಕನ್ನಡ' ಎಂದು ಹಾಡಿದ್ದರು ಕೂಡ. ಪ್ರತಾಪ್ ಸರ್ ಬಳಿಯಿಂದ ಗಣಿತ ಕಲಿತು ಚುರುಕಾಗಿರುವ ಹುಡುಗರಿಗೆ ಇಂದು ನಮ್ರತಾ ಮ್ಯಾಮ್ ಡಾನ್ಸ್ ಹೇಳಿಕೊಟ್ಟಿದ್ದಾರೆ.
ಪಾಠದಲ್ಲಿಲ್ಲದ ಜೋಶ್ ಡಾನ್ಸ್‌ನಲ್ಲಿ.... ವಿನಯ್, ಅವಿನಾಶ್ ಮತ್ತು ಕಾರ್ತಿಕ್ ಬ್ಲ್ಯಾಕ್ ಬೋರ್ಡ್ ಎದುರು ಸಖತ್ ಡಾನ್ಸ್ ಮಾಡಿದ್ದಾರೆ. ಚಂದವಾಗಿ ಸೀರೆ ಉಟ್ಟುಕೊಂಡ ನಮ್ರತಾ ಮೇಡಂ ಸಖತ್ತಾಗಿ ಸ್ಟೆಪ್ ಹಾಕ್ತಿದ್ರೆ, ಇಂಥ ಅವಕಾಶಕ್ಕಾಗೇ ಕಾದು ಕುಳಿತಿರೋ ವಿದ್ಯಾರ್ಥಿಗಳು ಸುಮ್ಮನೆ ಕೂರುತ್ತಾರೆಯೇ?. ಪಾಠದಲ್ಲಿ ಇಲ್ಲದ ಜೋಶ್ ಡಾನ್ಸ್‌ನಲ್ಲಿ ಹೊರಹೊಮ್ಮಿದೆ.
ನಾಟಕದಲ್ಲೂ ಸೈ... ಬರಿ ಡಾನ್ಸ್ ಅಷ್ಟೇ ಅಲ್ಲ, ನಾಟಕದಲ್ಲಿಯೂ ಸೈ ಅನಿಸಿಕೊಂಡಿದ್ದಾರೆ ವಿದ್ಯಾರ್ಥಿಗಳು. ವರ್ತೂರು ಸಂತೋಷ್, ತನಿಷಾ ಕೆನ್ನೆ ಮೇಲೆ ಬೆರಳಾಡಿಸುತ್ತಾ, ಪಟಾಕಿ ಯಾರದಾಗಿದ್ರೇನು ಹಚ್ಚೋರು ಮಾತ್ರ ನಾವಾಗಿರ್ಬೇಕು ಅಂತಾ ಮಾಸ್ ಡೈಲಾಗ್ ಹೊಡೆದಿದ್ದಾರೆ.
ಇದನ್ನೂ ಓದಿ: ಯಶ್ ರಾಧಿಕಾ ಪುತ್ರಿ ಐರಾ ಗ್ರ್ಯಾಂಡ್ ಬರ್ತ್ಡೇ ಸೆಲೆಬ್ರೇಶನ್ - ವಿಡಿಯೋ ನೋಡಿ
ಮೇಷ್ಟ್ರು ಸುಸ್ತೋ ಸುಸ್ತು!... ತುಕಾಲಿ ಮೇಷ್ಟ್ರು ಪಾಠ ಮಾಡೋಕೆ ಬಂದ್ರೆ ಹೇಗಿರುತ್ತೆ? ಅನ್ನೋದು ಪ್ರೋಮೋದಲ್ಲಿ ಬಯಲಾಗಿದೆ. ನಾನು ಹೇಳಿಕೊಟ್ಟದ್ದನ್ನು ಸರಿಯಾಗಿ ಹೇಳಬೇಕು ಎನ್ನುವ ಮೇಷ್ಟ್ರ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ವಿದ್ಯಾರ್ಥಿಗಳು, ಗುರುಗಳು ಥೂ ಎಂದು ಉಗಿದರೆ ಅದನ್ನೂ ರಿಪೀಟ್ ಮಾಡಿರೋ ಮಕ್ಕಳು. ಒಟ್ಟಾರೆ ಮೇಷ್ಟ್ರು ಸುತ್ತಾಗಿರೋದಂತೂ ಪಕ್ಕಾ. ಬಿಗ್ ಬಾಸ್ ಶಾಲೆಯ ಸಣ್ಣ ನೋಟವೇ ಇಷ್ಟು ಮಜವಾಗಿರಬೇಕಾದರೆ, ಪೂರ್ತಿ ಕ್ಲಾಸ್ ಹೇಗಿರಬಹುದು?. ಇದಕ್ಕಾಗಿ ಬಿಗ್ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ..
ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ನಲ್ಲಿ ನನಗೊಂದು ಅವಕಾಶ ಕೊಡಿ: ನಟಿ ಪಾಯಲ್ ರಜಪೂತ್