ETV Bharat / entertainment

ಬಿಗ್​ ಬಾಸ್ ಮನೆಯಲ್ಲಿ ವರ್ತೂರ್ ಸಂತೋಷ್ ಮದುವೆ ಕಥೆ: ಪ್ರೋಮೋ ನೋಡಿ - Bigg Boss promo

ಬಿಗ್​ ಬಾಸ್ ಮನೆಯಲ್ಲಿ ವರ್ತೂರ್​ ಸಂತೋಷ್ ತಮ್ಮ ಮದುವೆ ವಿಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Bigg Boss contestant varthur santhosh
ಬಿಗ್​ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್
author img

By ETV Bharat Karnataka Team

Published : Nov 30, 2023, 12:31 PM IST

'ಬಿಗ್​ ಬಾಸ್' ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಸೂಪರ್​ ಸ್ಟಾರ್​​ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ ಈ ರಿಯಾಲಿಟಿ ಶೋ ದೊಡ್ಡ ಸಂಖ್ಯೆಯ ಪ್ರೇಕ್ಷಕ ಬಳಗವನ್ನು ಸಂಪಾದಿಸಿದೆ. ದಿನೇ ದಿನೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ, ಆಟ - ಕಿತ್ತಾಟಗಳು ಶೋ ಮೇಲಿನ ಕುತೂಹಲವನ್ನು ಹೆಚ್ಚಿಸುತ್ತಿವೆ. ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದ್ದು, ನೋಡುಗರ ಕುತೂಹಲ ಕೆರಳಿಸಿದೆ.

ಕನ್ನಡ ಬಿಗ್​ ಬಾಸ್ ಸ್ಪರ್ಧಿ ವರ್ತೂರ್​ ಸಂತೋಷ್ ಅವರಿಗೆ ಮದುವೆ ಆಗಿದೆ. ಮಕ್ಕಳೂ ಇದ್ದಾರೆ. ಆದರೆ ಅವರು ಮದುವೆ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ಗುಲ್ಲೆದ್ದಿತ್ತು. ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ವತಃ ವರ್ತೂರ್ ಸಂತೋಷ್​ ಅವರೇ ತಮ್ಮ ಮದುವೆ, ಪತ್ನಿ ಜೊತೆಗಿನ ಭಿನ್ನಾಭಿಪ್ರಾಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ದಾಂಪತ್ಯ ಜೀವನದ ವಿಚಾರಗಳನ್ನು ಇಂದಿನ ಸಂಚಿಕೆಯಲ್ಲಿ ವರ್ತೂರ್ ಸಂತೋಷ್ ಅವರ ಬಾಯಲ್ಲೇ ಕೇಳಿ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್​ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಪ್ರೋಮೋ ನೋಡಿದ ನೆಟ್ಟಿಗರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ''ವರ್ತೂರ್ ಸಂತೋಷ್ ಒಳ್ಳೆಯ ಮನಸ್ಸಿರುವ ಮನುಷ್ಯ'' ಎಂದು ತಿಳಿಸಿದ್ದಾರೆ. 'ರೈತರ ಮಕ್ಕಳು ಬೆಳಿಬೇಕು' ಎಂದು ಮತ್ತೋರ್ವರು ಕಾಮೆಂಟ್​ ಮಾಡಿದ್ದಾರೆ. ಹೀಗೆ ಅಭಿಮಾನಿಗಳು ಪ್ರತಿಕ್ರಿಯೆ ಕೊಡುತ್ತಿದ್ದು, ವರ್ತೂರ್ ಸಂತೋಷ್ ಬಾಳಲ್ಲಿ ಏನಾಗಿದೆ ಎಂಬುದನ್ನು ಅವರಿಂದಲೇ ಕೇಳಿ. ''ವರ್ತೂರ್ ಸಂತೋಷ್ ಬಾಯಲ್ಲೇ ಅವರ ಮದುವೆ ಕಥೆ ಕೇಳಿ'' ಶೀರ್ಷಿಕೆಯಡಿ ಅನಾವರಣಗೊಂಡಿರುವ ಪ್ರೋಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ಬಹುಕಾಲದ ಗೆಳತಿಯ ಕೈ ಹಿಡಿದ ಬಾಲಿವುಡ್ ನಟ ರಣ​​​ದೀಪ್ ಹೂಡಾ: ಫೋಟೋಗಳನ್ನು ನೋಡಿ

ಬಿಗ್​ ಬಾಸ್​ 50 ದಿನಗಳನ್ನು ದಾಟಿದೆ. ವರ್ತೂರ್ ಸಂತೋಷ್ ಉತ್ತಮ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳೂ ಇದ್ದಾರೆ. ಆದ್ರೆ ಇತ್ತೀಚೆಗಷ್ಟೇ ಮನೆಯಿಂದ ಹೊರಹೋಗುತ್ತೇನೆಂದು ಹೇಳಿ ಸಹ ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರಿಗೆ ಶಾಕ್​ ನೀಡಿದ್ರು. ನಿರೂಪಕ ಸುದೀಪ್​ ಕೂಡ ವರ್ತೂರ್ ಸಂತೋಷ್ ನಿರ್ಧಾರಕ್ಕೆ ಬೇಸರಗೊಂಡಿದ್ರು. ಅಂದು ನಾಮಿನೇಟ್​ ಆಗಿದ್ದ ವರ್ತೂರು ಸಂತೋಷ್ 34 ಲಕ್ಷದ 15 ಸಾವಿರ ಮತಗಳನ್ನು ಪಡೆದು ಸೇವ್​ ಆಗಿದ್ರು. ಬಿಗ್ ಬಾಸ್​ ತಂಡ ವರ್ತೂರ್ ಸಂತೋಷ್ ಅವರನ್ನು ಹೊರಗೆ ಕಳುಹಿಸರಿರಲಿಲ್ಲ. ಬಳಿಕ ತಾಯಿಯೇ ಆಗಮಿಸಿ ಮಗನನ್ನು ಸಮಾಧಾನಪಡಿಸಿದ್ರು. ನಂತರ ಆಟ ಮುಂದುವರಿಸೋದಾಗಿ ವರ್ತೂರು ಸಂತೋಷ್ ತಿಳಿಸಿದ್ರು. ನಾಮಿನೇಟ್​ ಆಗಿದ್ದ ವರ್ತೂರು ಸಂತೋಷ್ ಪಡೆದ ಮತಗಳ ಸಂಖ್ಯೆ ಎಲ್ಲರ ಹುಬ್ಬೇರಿಸಿತ್ತು. ಸ್ಟ್ರಾಂಗ್​ ಫ್ಯಾನ್​ ಭೇಸ್ ಹೊಂದಿದ್ದಾರೆಂಬುದನ್ನು ಈ ಅಂಕಿ ಅಂಶಗಳು ಸಾಬೀತುಪಡಿಸಿವೆ.

ಇದನ್ನೂ ಓದಿ: ದರ್ಶನ್​ ಅಭಿನಯದ 'ಕಾಟೇರ' ಬಿಡುಗಡೆಗೆ ಮುಹೂರ್ತ ಫಿಕ್ಸ್: ಶೀಘ್ರದಲ್ಲೇ ಸಿನಿಮಾ ನಿಮ್ಮ ಮುಂದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.