ಪಾಟ್ನಾ: ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ 'ಚೌಸತ್ ಜೋಗಿನೀಯ ಮೈ' ಹಾಡು ಹಾಡಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದು ನವರಾತ್ರಿಯ ವಿಶೇಷ ಹಾಡಾಗಿದೆ.
ನವರಾತ್ರಿಯಂದು ಬಿಡುಗಡೆಯಾದ ಅಕ್ಷರ ಸಿಂಗ್ ಅವರ ಮೊದಲ ದೇವತೆ ಹಾಡು ಇದಾಗಿದೆ. ಅಕ್ಷರ ಸಿಂಗ್ ಅವರ ಈ ಹಾಡು ಭೋಜ್‌ಪುರಿ ಸಂಗೀತ ಉದ್ಯಮದ ಅತ್ಯಂತ ದುಬಾರಿ ಹಾಡು ಎನ್ನಲಾಗಿದೆ. ಈ ಹಾಡಿನಲ್ಲಿ ಅಕ್ಷರಾ ಸಿಂಗ್ ತಮ್ಮ ಹಣೆಯ ಮೇಲೆ ಸಿಂಧೂರ ಹಾಕಿ ತ್ರಿಶೂಲ ಹಿಡಿದಿದ್ದಾರೆ. ಕೆಂಪು ಸೀರೆಯಲ್ಲಿ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಈ ಹಾಡಿನಲ್ಲಿ ಅಕ್ಷರ ಜೊತೆ ಸುಮಾರು 80 ನರ್ತಕಿಯರಿದ್ದು, ಈ ಅಂಶದ ಮೂಲಕ ಈ ಹಾಡಿನ ಹಿರಿಮೆ ಅಳೆಯಬಹುದು. ಈ ಹಾಡಿಗೆ ಮನೋಜ್ ಮಾತಲಿ ಸಾಹಿತ್ಯ ಬರೆದಿದ್ದು, ಶಿಶಿರ್ ಪಾಂಡೆ ಸಂಗೀತ ನೀಡಿದ್ದಾರೆ. ಎಂಕೆ ಗುಪ್ತಾ ಜಾಯ್ (ಮನೋಜ್), ಬಿಪಿನ್ ಸಿಂಗ್ ವಿಡಿಯೋ ನಿರ್ದೇಶಕರು.
ಇದನ್ನೂ ಓದಿ: ರಿಷಬ್ ಪಂತ್ ಜನ್ಮದಿನ... ಯಾರಿಗಂತ ಹೇಳದೇ ಗಾಳಿಯಲ್ಲಿ ಕಿಸ್ ತೇಲಿಬಿಟ್ಟ ನಟಿ ಊರ್ವಶಿ ರೌಟೇಲಾ