ETV Bharat / entertainment

ಪಂಜಾಬ್ ವಿಶ್ವವಿದ್ಯಾಲಯದಿಂದ ಗೌರವ ಸ್ವೀಕರಿಸಲಿರುವ ನಟ ಆಯುಷ್ಮಾನ್​ ಖುರಾನಾ

author img

By

Published : May 8, 2023, 7:38 PM IST

ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಅವರನ್ನು ಅಲ್ಮಾ ಮೇಟರ್ ಪಂಜಾಬ್ ವಿಶ್ವವಿದ್ಯಾಲಯವು ಸನ್ಮಾನಿಸಿ ಗೌರವಿಸಲಿದೆ.

Ayushmann Khurrana
ಆಯುಷ್ಮಾನ್​ ಖುರಾನಾ

ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಸದ್ಯದಲ್ಲೇ ವಿಶೇಷ ಕಾರಣಕ್ಕಾಗಿ ಚಂಡೀಗಢಕ್ಕೆ ಭೇಟಿ ನೀಡಲಿದ್ದಾರೆ. ಹುಟ್ಟಿ ಬೆಳೆದ ಊರಿಗೆ ಆಯುಷ್ಮಾನ್​ ತೆರಳಲಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಅಲ್ಮಾ ಮೇಟರ್ ಪಂಜಾಬ್ ವಿಶ್ವವಿದ್ಯಾಲಯವು ಸನ್ಮಾನಿಸಿ ಗೌರವಿಸಲಿದೆ. ಇದು ನಟನಿಗೆ ಅತ್ಯಂತ ವಿಶೇಷ ಕ್ಷಣವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಆಯುಷ್ಮಾನ್​, "ಟೈಮ್​ ಮ್ಯಾಗಜೀನ್​, ಫೋರ್ಬ್ಸ್​ ಮತ್ತು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ನನಗೆ ಸಿಕ್ಕಿವೆ. ಈವೆರೆಗೂ ಇಂತಹದ್ದೆಷ್ಟೋ ಮಾನ್ಯತೆ ನನಗೆ ಸಿಕ್ಕಿದೆ. ಆದರೆ ಅಲ್ಮಾ ಮೇಟರ್​ ನನ್ನ ಸಾಧನೆಗಳನ್ನು ಗುರುತಿಸಿರುವುದು ಅತ್ಯಂತ ವಿಶೇಷವಾಗಿದೆ. ನಿಜಕ್ಕೂ ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ.

ಮುಂದುವರೆದು, "ನಾನು ಪಂಜಾಬ್​ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಅದೆಷ್ಟೋ ಸಾಧನೆ ಮಾಡಿದವರ ಬಗ್ಗೆ ಆಶ್ಚರ್ಯಪಡುತ್ತಿದೆ. ಆ ಸಂಸ್ಥೆಯಲ್ಲಿ ಅನೇಕರು ರಾಷ್ಟ್ರದ ಐಕಾನ್​ಗಳಾಗಿದ್ದಾರೆ. ರಾಜ್ಯ ಮತ್ತು ದೇಶಕ್ಕೆ ಹೆಮ್ಮೆ ತಂದ ಅನೇಕರು ಇದ್ದಾರೆ. ಅವರನ್ನೆಲ್ಲಾ ನೋಡುವಾಗ ನನಗೆ ಆಶ್ಚರ್ಯವಾಗುತ್ತಿತ್ತು. ಅಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿ. ಅದ್ಭುತ ಶಿಕ್ಷಕರಿಂದ ಮಾರ್ಗದರ್ಶನ ಪಡೆದಿರುವುದು ನಿಜಕ್ಕೂ ದೊಡ್ಡ ಗೌರವ" ಎಂದು ತಮ್ಮ ಕಾಲೇಜಿನ ಬಗ್ಗೆ ಗುಣಗಾನ ಮಾಡಿದ್ದಾರೆ.

"ಇಂದು ನಾನು ಯಾರೆಂಬುದುನ್ನು ತಿಳಿಸಲು ಅಡಿಪಾಯ ಹಾಕಿದ ಸಂಸ್ಥೆ ಅದು. ನನ್ನ ಸ್ವಂತ ನಿಯಮದ ಮೇಲೆ ಜಗತ್ತನ್ನು ರೂಪಿಸಲು ಅಲ್ಲಿಂದ ಕಲಿತುಕೊಂಡೆ. ನನಗೆ ಮಾರ್ಗದರ್ಶನ, ಆಕಾರ, ಅಧಿಕಾರ ಎಲ್ಲವನ್ನೂ ನೀಡಿ ಬೆನ್ನೆಲುಬಾಗಿ ನಿಂತಿದೆ. ನಾನು ನನ್ನ ಹಿರಿಯರ ಸಾಧನೆಯನ್ನು ಅನುಕರಿಸಲು ಪ್ರಯತ್ನಿಸುತ್ತೇನೆ ಮತ್ತು ನನ್ನ ತಾಯಿಯನ್ನು ಒಂದು ದಿನ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದು ಅಂದೇ ರಹಸ್ಯವಾಗಿ ನಿರ್ಧರಿಸಿದ್ದೆ" ಎಂದು ನಟ ನುಡಿದಿದ್ದಾರೆ.

ಚಲನಚಿತ್ರದ ಮುಂಭಾಗದಲ್ಲಿ ಆಯುಷ್ಮಾನ್​ ಖುರಾನಾ ಡ್ರೀಮ್ ಗರ್ಲ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಬ್ಲಾಕ್​ಬಸ್ಟರ್​ ಡ್ರೀಮ್​ ಗರ್ಲ್​ನ ಮುಂದುವರೆದ ಭಾಗವಾಗಿದೆ. ಈ ಸಿನಿಮಾವನ್ನು ರಾಜ್​ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಚಿತ್ರವು ಆಗಸ್ಟ್​ 25 ರಂದು ತೆರೆ ಕಾಣಲಿದೆ. ನಿಜವಾಗಿಯೂ ಜುಲೈನಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಗೆ ಅಗತ್ಯವಿರುವ ವಿಎಫ್‌ಎಕ್ಸ್ ಕೆಲಸದಿಂದಾಗಿ ವಿಳಂಬವಾಯಿತು. ​

ಡ್ರೀಮ್ ಗರ್ಲ್ 2 ಗೆ ವಿಎಫ್​ ಕೆಲಸವು ನಿರ್ಣಾಯಕವಾಗಿದೆ. ಸಿನಿಮಾದ ಕುರಿತು ಮಾತನಾಡಿದ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಏಕ್ತಾ ಆರ್ ಕಪೂರ್, "ಡ್ರೀಮ್ ಗರ್ಲ್ 2 ನಲ್ಲಿ ಆಯುಷ್ಮಾನ್ ಖುರಾನಾ ಅವರ ಪಾತ್ರವು ಪರಿಪೂರ್ಣವಾಗಿ ಕಾಣಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ವಿಎಫ್​ಎಕ್ಸ್​ ಕೆಲಸವನ್ನು ಪರಿಪೂರ್ಣಗೊಳಿಸಲು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ತಿಳಿಸಿದರು.

ಮುಂದುವರೆದು, "ನಮ್ಮ ವೀಕ್ಷಕರು ಚಲನಚಿತ್ರವನ್ನು ವೀಕ್ಷಿಸಿದಾಗ ಅವರು ಅತ್ಯುತ್ತಮವಾದ ಅನುಭವವನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಡ್ರೀಮ್ ಗರ್ಲ್ 2 ಗಾಗಿ ವಿಎಫ್​ಎಕ್ಸ್​ ಕೆಲಸವು ಸಿನಿಮಾದ ಅವಿಭಾಜ್ಯ ಅಂಗವಾಗಿದೆ ಮತ್ತು ನಾವು ನಮ್ಮ ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನವನ್ನು ತಲುಪಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ." ಎಂದು ಹೇಳಿದರು. ಆಯುಷ್ಮಾನ್ ಡ್ರೀಮ್ ಗರ್ಲ್ 2 ನಲ್ಲಿ ಅನನ್ಯಾ ಪಾಂಡೆ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ ರದ್ದು: ಶಾಂತಿ ಕಾಪಾಡಲು ಈ ನಿರ್ಧಾರ ಎಂದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.