ಇತ್ತೀಚೆಗೆ ಅತ್ಯುತ್ತಮ ಹಾಡು ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಇದೀಗ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಅಲ್ಲದೇ ಈ ಚಿತ್ರದ ನಾಟು ನಾಟು ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿಯೂ ಲಭಿಸಿದೆ. ಆರ್ಆರ್ಆರ್ ಸಿನಿಮಾಗೆ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಸಿಕ್ಕಿರುವುದು ಮಾತ್ರವಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಾಲಿವುಡ್ನ ಹೆಸರಾಂತ ನಿರ್ದೇಶಕ, ಅವತಾರ್ ಸರಣಿ ಸಿನಿಮಾಗಳ ಖ್ಯಾತಿಯ ಜೇಮ್ಸ್ ಕ್ಯಾಮೆರಾನ್ ಅವರ ಹೊಗಳಿಕೆಯ ಮಾತುಗಳನ್ನೂ ತನ್ನದಾಗಿಸಿಕೊಂಡಿದೆ.
-
A glimpse into the conversation between @JimCameron and @SSRajamouli💥💥💥#RRRMovie pic.twitter.com/fKVi38FXtz
— RRR Movie (@RRRMovie) January 16, 2023 " class="align-text-top noRightClick twitterSection" data="
">A glimpse into the conversation between @JimCameron and @SSRajamouli💥💥💥#RRRMovie pic.twitter.com/fKVi38FXtz
— RRR Movie (@RRRMovie) January 16, 2023A glimpse into the conversation between @JimCameron and @SSRajamouli💥💥💥#RRRMovie pic.twitter.com/fKVi38FXtz
— RRR Movie (@RRRMovie) January 16, 2023
ಅಮೆರಿಕ ನೆಲದಲ್ಲಿ ನಡೆದ 28ನೇ ವಾರ್ಷಿಕ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಪ್ರದಾನ ಕಾರ್ಯಕ್ರಮದಲ್ಲಿ ಆರ್ಆರ್ಆರ್ ಚಿತ್ರತಂಡ ಭಾಗವಹಿಸಿದ್ದು, ಅಲ್ಲಿ ಹಾಲಿವುಡ್ನ ಅದೆಷ್ಟೋ ಸಿನಿದಿಗ್ಗಜರೂ ಭಾಗಿಯಾಗಿದ್ದರು. ಅದರಲ್ಲಿ ಇತ್ತೀಚೆಗಷ್ಟೇ ಅವತಾರ್ ಸೀಕ್ವೆಲ್ ಬಿಡುಗಡೆ ಮಾಡಿದ್ದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ತಮ್ಮ ಪತ್ನಿ ಸಮೇತರಾಗಿ ಭಾಗವಹಿಸಿದ್ದರು. ಆರ್ಆರ್ಆರ್ ಸಿನಿಮಾಗೆ ಕ್ರಿಟಿಕ್ಸ್ ಪ್ರಶಸ್ತಿ ದೊರೆತಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಜೇಮ್ಸ್ ಕ್ಯಾಮೆರಾನ್, ಸಿನಿಮಾದ ಕುರಿತು 10 ನಿಮಿಷಗಳ ಕಾಲ ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜೇಮ್ಸ್ ಕ್ಯಾಮೆರಾನ್ ಒಂದು ಬಾರಿ ಸಿನಿಮಾ ನೋಡಿರುವುದು ಮಾತ್ರವಲ್ಲದೆ ತಮ್ಮ ಹೆಂಡತಿ ಸೂಝಿ ಅವರಿಗೂ ಆರ್ಆರ್ಆರ್ ಸಿನಿಮಾ ನೋಡುವಂತೆ ಸಜೆಸ್ಟ್ ಮಾಡಿದ್ದಾರೆ. ಅವರೊಂದಿಗೆ ಕೂತು ಮತ್ತೊಂದು ಬಾರಿ ಆರ್ಆರ್ಆರ್ ಸಿನಿಮಾ ನೋಡಿದ್ದಾರೆ. ಕಾರ್ಯಕ್ರಮದಲ್ಲಿ ರಾಜಮೌಳಿ ಅವರನ್ನು ನೋಡಿದವರೆ ಹೆಂಡತಿ ಜೊತೆ ಸೇರಿ ಸಿನಿಮಾದ ಬಗ್ಗೆ ಚರ್ಚಿಸಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ಪ್ರಶಸ್ತಿ ಸ್ವೀಕರಿಸಿ ತಾಯ್ನಾಡಿಗೆ ಮರಳಿರುವ ನಿರ್ದೇಶಕ ರಾಜಮೌಳಿ ಹಾಗೂ ಹಿರಿಯ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆರ್ಆರ್ಆರ್ ಟ್ವಿಟರ್ ಪೇಜ್ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ ನಟಿ ಆಲಿಯಾ ಭಟ್ ಅದನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ.
-
The great James Cameron watched RRR.. He liked it so much that he recommended to his wife Suzy and watched it again with her.🙏🏻🙏🏻
— rajamouli ss (@ssrajamouli) January 16, 2023 " class="align-text-top noRightClick twitterSection" data="
Sir I still cannot believe you spent a whole 10 minutes with us analyzing our movie. As you said I AM ON TOP OF THE WORLD... Thank you both 🥰🥰🤗🤗 pic.twitter.com/0EvZeoVrVa
">The great James Cameron watched RRR.. He liked it so much that he recommended to his wife Suzy and watched it again with her.🙏🏻🙏🏻
— rajamouli ss (@ssrajamouli) January 16, 2023
Sir I still cannot believe you spent a whole 10 minutes with us analyzing our movie. As you said I AM ON TOP OF THE WORLD... Thank you both 🥰🥰🤗🤗 pic.twitter.com/0EvZeoVrVaThe great James Cameron watched RRR.. He liked it so much that he recommended to his wife Suzy and watched it again with her.🙏🏻🙏🏻
— rajamouli ss (@ssrajamouli) January 16, 2023
Sir I still cannot believe you spent a whole 10 minutes with us analyzing our movie. As you said I AM ON TOP OF THE WORLD... Thank you both 🥰🥰🤗🤗 pic.twitter.com/0EvZeoVrVa
ಜೇಮ್ಸ್ ಕ್ಯಾಮೆರಾನ್ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ರಾಜಮೌಳಿ, 'ಹಾಲಿವುಡ್ ಮಹಾನ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಆರ್ಆರ್ಆರ್ ಸಿನಿಮಾವನ್ನು ನೋಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾವನ್ನು ಇಷ್ಟ ಪಟ್ಟಿರುವ ಅವರು ತಮ್ಮ ಹೆಂಡತಿಗೂ ಸಿನಿಮಾ ನೋಡುವಂತೆ ಹೇಳಿದ್ದಾರೆ. ಅವರೊಂದಿಗೆ ಮತ್ತೊಮ್ಮೆ ಸಿನಿಮಾವನ್ನು ನೋಡಿದ್ದಾರೆ. ಸರ್ ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ, ನಮ್ಮ ಸಿನಿಮಾದ ಬಗ್ಗೆ ನಮ್ಮ ಜೊತೆ 10 ನಿಮಿಷಗಳ ಮಾತನಾಡಿದ್ದೀರಿ ಎಂದರೆ... ನಾನು ಪ್ರಪಂಚದ ಉತ್ತಂಗುದಲ್ಲಿದ್ದೇನೆ... ಇಬ್ಬರಿಗೂ ಧನ್ಯವಾದಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಆರ್ಆರ್ಆರ್ ಸಿನಿಮಾ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ನ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ(ರಾಜಮೌಳಿ), ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ, ಅತ್ಯುತ್ತಮ ವಿಶ್ವಲ್ ಎಫೆಕ್ಟ್, (ವಿ ಶ್ರೀನಿವಾಸ್ ಮೋಹನ್) ಮತ್ತು ಅತ್ಯುತ್ತಮ ಹಾಡು (ನಾಟು ನಾಟು) ಎಂಬ ಐದು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು. ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದ 'ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್', 'ಅರ್ಜೆಂಟೀನಾ 1985', 'ಬಾರ್ಡೋ', 'ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್', 'ಕ್ಲೋಸ್' ಮತ್ತು 'ಡಿಸಿಷನ್' ನಂತಹ ಚಲನಚಿತ್ರಗಳ ವಿರುದ್ಧ ಸ್ಪರ್ಧಿಸಿ ತೆಲುಗು ಭಾಷೆಯ ಆರ್ ಆರ್ ಆರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
'ನಾಟು ನಾಟು' ಹಾಡು ಸಿಸಿಎ ಯಲ್ಲಿ ನಾಮಿನೇಟ್ ಆಗಿದ್ದ 'ಕ್ಯಾರೊಲಿನಾ' (ವೇರ್ ದಿ ಕ್ರಾಡಾಡ್ಸ್ ಸಿಂಗ್), 'ಸಿಯಾವೋ ಪಾಪಾ (ಗಿಲ್ಲೆರ್ಮೊ ಡೆಲ್ ಟೊರೊಸ್ ಪಿನೋಚ್ಚಿಯೋ), 'ಹೋಲ್ಡ್ ಮೈ ಹ್ಯಾಂಡ್' (ಟಾಪ್ ಗನ್: ಮೇವರಿಕ್), 'ಲಿಫ್ಟ್ ಮಿಅಪ್' (ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್) ಮತ್ತು 'ನ್ಯೂ ಬಾಡಿ ರುಂಬಾ' (ವೈಟ್ ನಾಯ್ಸ್) ಹಾಡುಗಳೊಂದಿಗೆ ಸ್ಪರ್ಧಿಸಿ ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ರಾಮೋಜಿ ರಾವ್ ಅವರಿಗೆ ಕೃತಜ್ಞತೆ ಅರ್ಪಿಸಿದ 'ಆರ್ಆರ್ಆರ್' ಸಂಗೀತ ನಿರ್ದೇಶಕ ಕೀರವಾಣಿ