ನಗುವಿನ ಒಡೆಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಇಂದು ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಸಮಾರಂಭದ ಬಳಿಕ ಅಶ್ವಿನಿ ಪುನೀತ್ ರಾಜ್‍ಕುಮಾರ್ ತಮ್ಮ ಸದಾಶಿವನಗರದ ನಿವಾಸಕ್ಕೆ ಬಂದ ತಕ್ಷಣ ಕರ್ನಾಟಕ ರತ್ನ ಚಿನ್ನದ ಪದಕವನ್ನ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಅರ್ಪಿಸುವ ಮೂಲಕ ಸಂತೋಷಪಟ್ಟರು. ಈ ಸಮಯದಲ್ಲಿ ಅಪ್ಪು ಮುದ್ದಿನ ಮಗಳು ವಂದಿತಾ, ಅಮ್ಮ ಅಶ್ವಿನಿ ಜೊತೆ ಅಪ್ಪನಿಗೆ ಈ ಕರ್ನಾಟಕ ರತ್ನ ಚಿನ್ನದ ಪದಕವನ್ನ ಹಾಕಿದರು. ಒಂದು ವರ್ಷದ ಬಳಿಕ ಅಶ್ವಿನಿ ಪುನೀತ್ ರಾಜಕುಮಾರ್ ಮುಖದಲ್ಲಿ ನಗು ಕಾಣಿಸಿದ್ದು ಖುಷಿಯ ವಿಚಾರ. ಪುನೀತ್ ಭಾವಚಿತ್ರಕ್ಕೆ ಕರ್ನಾಟಕ ರತ್ನ ಹಾಕಿರುವ ಫೋಟೋ ವೈರಲ್ ಆಗಿದೆ.
ಇನ್ನು ವಿಧಾನಸೌಧದ ಮುಂದೆ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸುಧಾಮೂರ್ತಿ ಅವರು ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಜೂನಿಯರ್ ಎನ್ ಟಿ ಆರ್, ನಟ ಶಿವರಾಜ್ ಕುಮಾರ್ ಹಾಗೂ ರಾಜ್ಯ ಸರ್ಕಾರದ ಸಚಿವರ ಸಮ್ಮುಖದಲ್ಲಿ ಕರ್ನಾಟಕ ರತ್ನ ಪ್ರದಾನ ಮಾಡಿ ಗೌರವಿಸಿದರು.
-
ನನ್ನ ಪ್ರೀತಿಯ ಚಿಕ್ಕೆಜಮಾನರ " ಕರ್ನಾಟಕ ರತ್ನ " ಪದಕ ಸ್ಪರ್ಶಿಸಿ ಮನಸ್ಸು ತುಂಬಿಕೊಂಡೆ 🙏🙏🙏 pic.twitter.com/JKFa1N8OJL
— ರವಿಶಂಕರ ಗೌಡ (@RavishankarGow5) November 1, 2022 " class="align-text-top noRightClick twitterSection" data="
">ನನ್ನ ಪ್ರೀತಿಯ ಚಿಕ್ಕೆಜಮಾನರ " ಕರ್ನಾಟಕ ರತ್ನ " ಪದಕ ಸ್ಪರ್ಶಿಸಿ ಮನಸ್ಸು ತುಂಬಿಕೊಂಡೆ 🙏🙏🙏 pic.twitter.com/JKFa1N8OJL
— ರವಿಶಂಕರ ಗೌಡ (@RavishankarGow5) November 1, 2022ನನ್ನ ಪ್ರೀತಿಯ ಚಿಕ್ಕೆಜಮಾನರ " ಕರ್ನಾಟಕ ರತ್ನ " ಪದಕ ಸ್ಪರ್ಶಿಸಿ ಮನಸ್ಸು ತುಂಬಿಕೊಂಡೆ 🙏🙏🙏 pic.twitter.com/JKFa1N8OJL
— ರವಿಶಂಕರ ಗೌಡ (@RavishankarGow5) November 1, 2022
ಈ ವೇಳೆ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಅಭಿಮಾನಿಗಳಿಗೆ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಶಿವರಾಜ್ ಕುಮಾರ್ ಮಾತನಾಡಿ ಅಪ್ಪಾಜಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿ 30 ವರ್ಷದ ಬಳಿಕ ಮತ್ತೆ ಅಪ್ಪುವಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಿರೋದು ಸಂತೋಷ ಆಗಿದೆ ಎಂದರು.
(ಓದಿ: ಮಳೆ ಸಿಂಚನದ ಮಧ್ಯೆ ಪುನೀತ್ ರಾಜಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ)