ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ನಟಿ ಮಲೈಕಾ ಅರೋರಾ ಮುಂದಿನ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ. ಜೂನ್ 26 ನಟ ಅರ್ಜುನ್ ಕಪೂರ್ ಅವರ ಜನ್ಮ ದಿನವಾಗಿದ್ದು, ಬರ್ತ್ ಡೇ ಸೆಲೆಬ್ರೇಷನ್ಗಾಗಿ ಈ ಜೋಡಿ ಪ್ಯಾರಿಸ್‌ಗೆ ಹಾರಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೋ ವಿಡಿಯೋಗಳೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟ ಅರ್ಜುನ್ ಕಪೂರ್ ಅವರ ಆತ್ಮೀಯ ಮೂಲವೊಂದು ಅವರ ಹುಟ್ಟುಹಬ್ಬದ ಆಚರಣೆಯ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದೆ. ಅರ್ಜುನ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಒಂದರ ಹಿಂದೆ ಒಂದರಂತೆ ಶೂಟಿಂಗ್ನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸಬೇಕಿರುವುದರಿಂದ ಇತ್ತೀಚೆಗೆ ಯಾವ ಪಾರ್ಟಿಗಳಲ್ಲೂ ಕಾಣಿಸಿಕೊಂಡಿರಲಿಲ್ಲ.
ಏಕ್ ವಿಲನ್ 2 ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಲಿದ್ದಾರೆ. ಅದಕ್ಕೂ ಮೊದಲು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹಾಗಾಗಿ ಮಲೈಕಾ ಅವರೊಂದಿಗೆ ಪ್ಯಾರಿಸ್‌ಗೆ ತೆರಳಿದ್ದಾರೆ. ಇಬ್ಬರೂ ವಿಶ್ವದ ಅತ್ಯಂತ ರೋಮ್ಯಾಂಟಿಕ್ ನಗರದಲ್ಲಿ ಒಂದು ವಾರ ಒಟ್ಟಿಗೆ ಕಳೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೂ ಏರ್ಪೋರ್ಟ್ನಲ್ಲಿ, ನಾವು ಯಾವುದೇ ಈವೆಂಟ್ಗಾಗಿ ಹೋಗುತ್ತಿಲ್ಲ ಎಂದು ಅರ್ಜುನ್ ಕಪೂರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ಕುಕ್ಕೆಗೆ ಭೇಟಿ, ವಿಶೇಷ ಪೂಜೆ ಸಲ್ಲಿಕೆ
ಇನ್ನೂ ಏಕ್ ವಿಲನ್ ರಿಟರ್ನ್ಸ್‌ನಲ್ಲಿ ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ, ದಿಶಾ ಪಟಾನಿ ಮತ್ತು ತಾರಾ ಸುತಾರಿಯಾ ಸಹ ನಟಿಸಿದ್ದಾರೆ. ಈ ಚಿತ್ರವು 2014ರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಶ್ರದ್ಧಾ ಕಪೂರ್ ಅಭಿನಯದ ಏಕ್ ವಿಲನ್ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರತಂಡ ಕಳೆದ ವರ್ಷ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಜುಲೈ 8ರಂದು ಬಿಡುಗಡೆಯಾಗಬೇಕಿತ್ತು, ಆದರೆ, ಚಿತ್ರ ತಯಾರಕರು ಈ ತಿಂಗಳ ಕೊನೆ ಅಂದರೆ 29ಕ್ಕೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.