ETV Bharat / entertainment

'Full enjway' ಲಂಡನ್‌ ಪ್ರವಾಸದ ಖುಷಿಯಲ್ಲಿ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ - ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್​ ಟ್ರಿಪ್‌ ಫೋಟೋ ಶೇರ್ ಮಾಡಿದ್ದಾರೆ.

Anushka Sharma virat Kohli photo from London
ವಿರುಷ್ಕಾ ಸೆಲ್ಫಿ
author img

By

Published : Jul 2, 2023, 12:19 PM IST

ಲಂಡನ್ (ಯುಕೆ): "ವಿರುಷ್ಕಾ" ಎಂದೇ ಜನಪ್ರಿಯರಾಗಿರುವ ಸೆಲೆಬ್ರಿಟಿ ಕಪಲ್​​ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಹಾಗು ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರು ಪ್ರಸ್ತುತ ಲಂಡನ್‌ನಲ್ಲಿ ತಮ್ಮ ರಜಾದಿನವನ್ನು ಆನಂದಿಸುತ್ತಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ವಿರಾಟ್​ ಕೊಹ್ಲಿ ಜೊತೆಗಿನ ಸೆಲ್ಫಿ ಹಂಚಿಕೊಂಡಿದ್ದು, ಅದಕ್ಕೆ ಅವರು ''Full enjway" ಎಂಬ ವಿಭಿನ್ನ ಕ್ಯಾಪ್ಷನ್​ ನೀಡಿದ್ದಾರೆ.

ಲಂಡನ್ ಸೆಲ್ಫಿಗೆ ಫ್ಯಾನ್ಸ್​ ಮೆಚ್ಚುಗೆ: ಸೆಲ್ಫಿಯಲ್ಲಿ, ವಿರಾಟ್ ಕೊಹ್ಲಿ ಬಿಳಿ ಟಿ- ಶರ್ಟ್, ಅದರ ಮೇಲೆ ಬೂದು ಬಣ್ಣದ ಶರ್ಟ್‌, ಗ್ಲಾಸ್​ ಧರಿಸಿ ಕ್ಯಾಶುವಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಅನುಷ್ಕಾ ಶರ್ಮಾ ಸರಳವಾಗಿ ವೈಟ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶರಾಶಿ ಕಟ್ಟದೇ, ಕನಿಷ್ಟ ಮೇಕ್​ಅಪ್​​ನಲ್ಲಿ ಅವರಿದ್ದರು. ಈ ಜೋಡಿಗೆ ದೇಶ- ವಿದೇಶಗಳಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಸಾಧಕರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕೂಡಾ ಹೆಚ್ಚು ಕಾತರರಾಗಿರುತ್ತಾರೆ. ಇವರ ಫೋಟೋ, ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಇದೀಗ ಅನುಷ್ಕಾ ಶರ್ಮಾ ಶೇರ್ ಮಾಡಿರುವ ಈ ಫೋಟೋ ವೈರಲ್​ ಆಗಿ, ಅಭಿಮಾನಿಗಳಿಂದ ಪ್ರೀತಿ ಸ್ವೀಕರಿಸುತ್ತಿದೆ.

Anushka Sharma virat Kohli photo from London
ವಿರುಷ್ಕಾ ಸೆಲ್ಫಿ

ವೆಕೇಶನ್​ ಮೂಡ್​ನಲ್ಲಿ ವಿರುಷ್ಕಾ: ಇಬ್ಬರೂ ಇತ್ತೀಚೆಗೆ ಜನಪ್ರಿಯ ಹಿಂದೂ ಭಕ್ತಿಗೀತೆಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಅಮೆರಿಕನ್ ಗಾಯಕ ಕೃಷ್ಣ ದಾಸ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಕ್ತಿ ಕಾರ್ಯಕ್ರಮದ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದು, ಇದರಲ್ಲಿ ವಿರುಷ್ಕಾ ಇದ್ದರು.

ವಿರುಷ್ಕಾ ಲೈಫ್ ಸ್ಟೋರಿ..: ವಿರಾಟ್ ಕೊಹ್ಲಿ ಮತ್ತು ಮತ್ತು ಅನುಷ್ಕಾ ಶರ್ಮಾ 2017 ರ ಡಿಸೆಂಬರ್ 11 ರಂದು ಇಟಲಿಯಲ್ಲಿ ಹಸೆಮಣೆ ಏರಿದರು. ಅತ್ಯಂತ ಜನಪ್ರಿಯ, ಅಭಿಮಾನಿಗಳಿಂದ ಪ್ರೀತಿಸಲ್ಪಡುವ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದವರು. 2021 ರ ಜನವರಿ 11 ರಂದು ವಾಮಿಕಾ ಎಂಬ ಹೆಣ್ಣು ಮಗುವಿನ ಪೋಷಕರಾಗಿ ಭಡ್ತಿ ಪಡೆದರು.

ಇದನ್ನೂ ಓದಿ: Satyaprem Ki Katha Collection: ತೆರೆಮೇಲಿನ ಕಾರ್ತಿಕ್- ಕಿಯಾರಾ ಪ್ರೇಮಕಥೆಗೆ ಪ್ರೇಕ್ಷಕರ ಸಕಾರಾತ್ಮಕ ಸ್ಪಂದನೆ

ನಟಿ ಅನುಷ್ಕಾ ಶರ್ಮಾ ಸಿನಿಮಾ ಸಾಮಾಚಾರ..: ಚಕ್ಡಾ ಎಕ್ಸ್‌ಪ್ರೆಸ್‌ ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಭಾರತೀಯ ಮಾಜಿ ಮಹಿಳಾ ಕ್ರಿಕೆಟಿಗರಾದ ಜೂಲನ್ ಗೋಸ್ವಾಮಿ ಅವರ ( Jhulan Goswami) ಅವರ ಜೀವನ ಆಧರಿಸಿದ ಮುಂಬರುವ ಕ್ರೀಡಾ ಬಯೋಪಿಕ್ ಚಲನಚಿತ್ರ. ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದ್ದು, ಬಿಡುಗಡೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ.

ಇದನ್ನೂ ಓದಿ: ಸ್ಯಾಂಡಲ್​ವುಡ್​ 'ಗಣಿ' ಜನ್ಮದಿನ: ಕೃಷ್ಣಂ ಪ್ರಣಯ ಸಖಿ ಪೋಸ್ಟರ್ ಅನಾವರಣ ಹೊಸ ಅವತಾರದಲ್ಲಿ 'ಮುಂಗಾರು ಮಳೆ' ಗಣೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.