ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ದಾಂಪತ್ಯ ಜೀವನಕ್ಕೆ ಕಾಲಿರಿಸಿ 37 ವರ್ಷಗಳಾಗಿದ್ದು, ಅನುಪಮ್ ಖೇರ್ ಮದುವೆ ಫೋಟೋ ಶೇರ್ ಮಾಡಿ ಪತ್ನಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿರುವ ಖೇರ್, ''ಆತ್ಮೀಯ ಕಿರಣ್ ಖೇರ್, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಇತ್ತೀಚೆಗೆ ಶಿಮ್ಲಾಗೆ ಭೇಟಿ ನೀಡಿದ್ದಾಗ ತಂದೆಯ ಟ್ರಂಕ್ನಲ್ಲಿದ್ದ ನಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದೇನೆ. ಭಗವಂತ ನಿಮಗೆ ಖುಷಿ, ಆರೋಗ್ಯಕರ ದೀರ್ಘ ಆಯಸ್ಸು ಕೊಡಲಿ'' ಎಂದು ಬರೆದಿದ್ದಾರೆ.
ಚಿತ್ರದಲ್ಲಿ ಕಿರಣ್ ಮತ್ತು ಅನುಪಮ್ ಖೇರ್ ಸಾಂಪ್ರದಾಯಿಕ ಮದುವೆಯುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಶೇರ್ ಆಗುತ್ತಿದ್ದಂತೆ ಚಿತ್ರರಂಗದವರು ಸೇರಿದಂತೆ ನೆಟಿಜನ್ಸ್ ಶುಭಾಶಯ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ಕನ್ನಡದ ರಾಕಿ ಭಾಯ್ ಯಶ್ ನಂಬರ್ ಒನ್ ನಟ: ಶಾಹಿದ್ ಕಪೂರ್