ಸ್ಯಾಂಡಲ್ವುಡ್ನ ನಟರಾಕ್ಷಸ ಜನಪ್ರಿಯತೆಯ ಡಾಲಿ ಧನಂಜಯ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ (ಆಗಸ್ಟ್ 23) ಹೊಸ ಸಿನಿಮಾಗಳ ಪೋಸ್ಟರ್, ಟೀಸರ್ಗಳು ಅನಾವರಣಗೊಂಡಿತ್ತು. ಹಿಂದಿನ 'ಬಡವ ರಾಸ್ಕಲ್' ಚಿತ್ರತಂಡದಿಂದ ಹೊಸ ಸಿನಿಮಾ ಘೋಷಣೆಯಾಗಿ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗಿತ್ತು. 'ಅಣ್ಣ From Mexico' ಎಂಬ ಕ್ಯಾಚಿ ಟೈಟಲ್ ಅಪಾರ ಸಂಖ್ಯೆಯ ಸಿನಿಪ್ರಿಯರನ್ನು ರಂಜಿಸಿತ್ತು.
-
ಅಣ್ಣ from ಮೆಕ್ಸಿಕೊ❤️#AnnaFromMexico
— Dhananjaya (@Dhananjayaka) December 15, 2023 " class="align-text-top noRightClick twitterSection" data="
From the team of #BadavaRascal produced by #Rayalastudios pic.twitter.com/sGPZYSfLF4
">ಅಣ್ಣ from ಮೆಕ್ಸಿಕೊ❤️#AnnaFromMexico
— Dhananjaya (@Dhananjayaka) December 15, 2023
From the team of #BadavaRascal produced by #Rayalastudios pic.twitter.com/sGPZYSfLF4ಅಣ್ಣ from ಮೆಕ್ಸಿಕೊ❤️#AnnaFromMexico
— Dhananjaya (@Dhananjayaka) December 15, 2023
From the team of #BadavaRascal produced by #Rayalastudios pic.twitter.com/sGPZYSfLF4
ಡಾಲಿ ಸಿನಿಮಾದ ಮುಹೂರ್ತ: 'ಬಡವ ರಾಸ್ಕಲ್' ಬಳಗ ಈ ಚಿತ್ರದಲ್ಲಿ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಡಾಲಿ ಧನಂಜಯ್ ಜನ್ಮದಿನಕ್ಕೆ ಸಣ್ಣದೊಂದು ಝಲಕ್ ಬಿಟ್ಟು ಥ್ರಿಲ್ ಹೆಚ್ಚಿಸಿದ್ದ 'ಅಣ್ಣ From Mexico' ಚಿತ್ರತಂಡವೀಗ ಸದ್ದಿಲ್ಲದೇ ಮುಹೂರ್ತ ಮುಗಿಸಿ ಶೂಟಿಂಗ್ ಅಖಾಡಕ್ಕೆ ಧುಮುಕಲು ತಯಾರಾಗಿದೆ.
ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ಡಾಲಿ ಹಾಗೂ ಶಂಕರ್ ಗುರು ಜೋಡಿಯ 'ಅಣ್ಣ From Mexico' ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು. ರಾಯಲ್ ಸ್ಟುಡಿಯೋಸ್ನ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮರಾಗೆ ಚಾಲನೆ ನೀಡಿದರು. ಸ್ನೇಹಿತೆ ಹಾಗೂ ಹಿತೈಷಿಗಳಾದ ಮೃಣಾಲ್ ಹೆಬ್ಬಾಳ್ಕರ್ ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.
2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಭಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ನಿರ್ಮಿಸಿ, ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ರೆಡಿ ಮಾಡಿ ಡಾಲಿ ಅಭಿಮಾನಿಗಳನ್ನು ರಂಜಿಸಲು ಅಣಿಯಾಗಿದ್ದಾರೆ.
ಇದನ್ನೂ ಓದಿ: 'ನಾನು ಕುಡಿಯಲು ಬಯಸಿದರೆ..': ವೈರಲ್ ವಿಡಿಯೋಗೆ ಸನ್ನಿ ಡಿಯೋಲ್ ಮತ್ತೊಮ್ಮೆ ಸ್ಪಷ್ಟನೆ
'ಅಣ್ಣ From Mexico' ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಪಕ್ಕಾ ಆ್ಯಕ್ಷನ್ ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿದ್ದು, ದಿ ರಾಯಲ್ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದಾರೆ. ಐರಾ ಫಿಲ್ಮ್ಸ್ ಕೂಡ ಜೊತೆಯಾಗಿ ಕೈ ಜೋಡಿಸಿದೆ. ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಜನವರಿ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: 'ಋತುಚಕ್ರ ರಜೆ ಅಗತ್ಯವಿಲ್ಲ': ಸ್ಮೃತಿ ಇರಾನಿ ಹೇಳಿಕೆ ಬೆಂಬಲಿಸಿದ ಕಂಗನಾ ರಣಾವತ್
ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ, ಪುಷ್ಪ-2, ಝೀಬ್ರಾ ಚಿತ್ರದಲ್ಲಿ ಧನು ನಟಿಸುತ್ತಿದ್ದಾರೆ. ಜೊತೆಗೆ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡೋ ಮುಖೇನ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ.