ETV Bharat / entertainment

ಅರ್ಜುನ್ ಯೋಗಿ-ಸಾರಿಕಾ ರಾವ್ ಜೋಡಿಯ 'ರೀ ದೇವರೇ ಪತಿದೇವರೇ' ಹಾಡು ನೋಡಿದ್ರಾ? - Arjun Yogi

'ಅನಾವರಣ' ಸಿನಿಮಾದ 'ರೀ ದೇವರೇ' ಎಂಬ ಮತ್ತೊಂದು ಹಾಡು ಬಿಡುಗಡೆಯಾಗಿದೆ.

Anavarana movie song release
ಅನಾವರಣ ಚಿತ್ರದ ಹಾಡು ಬಿಡುಗಡೆ
author img

By ETV Bharat Karnataka Team

Published : Nov 9, 2023, 12:01 PM IST

ಕಿರುತೆರೆ ಕಲಾವಿದರು ಬಿಗ್ ಸ್ಕ್ರೀನ್​​ಗೆ ಎಂಟ್ರಿ ಕೊಡೋದು ಹೊಸ ವಿಚಾರವಲ್ಲ. ನಟ ಅರ್ಜುನ್ ಯೋಗಿ ಈಗಾಗಲೇ ಕಿರುತೆರೆಯಲ್ಲಿ ಗಮನ ಸೆಳೆದವರು. ಕೆಲವು ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ, ಉತ್ತಮ ನಟನೆಯ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಬೆಳ್ಳಿತೆರೆಯಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಅಭಿನಯ ಕಲೆ ಪ್ರದರ್ಶಿಸಿದ್ದಾರೆ. ಧಾರಾವಾಹಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲಿಯೂ ಗುರುತಿಸಿಕೊಂಡವರು. ಇದೀಗ ಬೆಳ್ಳಿ ತೆರೆಯಲ್ಲಿ ಮಿಂಚಲು ಅಣಿಯಾಗಿದ್ದಾರೆ.

  • " class="align-text-top noRightClick twitterSection" data="">

ಅರ್ಜುನ್ ಯೋಗಿ 'ಅನಾವರಣ' ಶೀರ್ಷಿಕೆಯ ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದು, ಸಿನಿಮಾದ ಎರಡನೇ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ 'ಏನಾಗಿದೆ' ಎಂಬ ಪ್ರೇಮಗೀತೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 'ರೀ ದೇವರೇ' ಎಂಬ ಮತ್ತೊಂದು ಗಾನಬಜಾನವನ್ನು ನೀವು ನೋಡಬಹುದು. ಗಂಡ ಹೆಂಡತಿ ನಡುವಿನ ಮೆಲೋಡಿ ಮಸ್ತಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರೀಶ್ ಕುಮಾರ್ ಬಿ.ಕೆ. ಹಾಗೂ ಮೇಘನಾ ಕುಲಕರ್ಣಿ ಜೋಶಿ ಕಂಠದಾನ ಮಾಡಿದ್ದಾರೆ. ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ನಾಯಕಿಯಾಗಿ ಸಾರಿಕಾ ರಾವ್ ನಟಿಸಿದ್ದಾರೆ. ಇನ್ನುಳಿದಂತೆ ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದಿ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ, ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.

Anavarana movie song release
ಅನಾವರಣ ಚಿತ್ರದ ಹಾಡು ಬಿಡುಗಡೆ

ರಂಗ ಕಲಾವಿದರು, ನಿರ್ದೇಶಕರೂ ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರೂ 'ಅನಾವರಣ'ಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಇಬ್ಬರು ನಿರ್ದೇಶಕರಿಗಿದೆ.

ಇದನ್ನೂ ಓದಿ: 'ಕೆಜಿಎಫ್​ಗೂ ಮುನ್ನ ಯಶ್​ ಯಾರು?': ನಟ ಅಲ್ಲು ಅರ್ಜುನ್​ ತಂದೆ ಹೀಗೆ ಹೇಳಿದ್ದೇಕೆ?

ವೆಂಕಿ ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಬಿ.ಆರ್.ಹೇಮಂತ್ ಕುಮಾರ್ ಹಿನ್ನೆಲೆ ಸಂಗೀತ, ವಿಶಾಲ್ ಸಿ.ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾದೊಂದಿಗೆ ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ 'ನಮ್ಮ ಸಿನಿಮಾ ಬ್ಯಾನರ್'ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ.ಹೆಚ್. ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 1ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಅನಾವರಣ'ವಾಗಲಿದೆ.

Anavarana movie song release
'ರೀ ದೇವರೇ ಪತಿದೇವರೇ' ಹಾಡು ನೋಡಿದ್ರಾ

ಇದನ್ನೂ ಓದಿ: ಇಂದು 'ಆಟೋರಾಜ' ಶಂಕರ್‌ ನಾಗ್‌ ಜನ್ಮದಿನ: ಅಭಿಮಾನಿಗಳ ಮನದಾಳದಲ್ಲಿ ಶಂಕ್ರಣ್ಣ ಸದಾ ಜೀವಂತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.