ETV Bharat / entertainment

'Baby'ಯಾಗಿ ಬಂದ ವಿಜಯ್​ ದೇವರಕೊಂಡ ಸಹೋದರ: ಆನಂದ್​ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು..​

BABY: ಆನಂದ್​ ದೇವರಕೊಂಡ ನಟನೆಯ 'ಬೇಬಿ' ಸಿನಿಮಾ ಇಂದು ಬಿಡುಗಡೆಯಾಗಿದೆ.

baby movie
ಬೇಬಿ
author img

By

Published : Jul 14, 2023, 4:39 PM IST

ಟಾಲಿವುಡ್​ ನಟ ವಿಜಯ್​ ದೇವರಕೊಂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಫೇಮಸ್​ ಆಗಿದ್ದಾರೆ. ಇದೀಗ ಅವರ ಸಹೋದರ ಆನಂದ್​ ದೇವರಕೊಂಡ ಕೂಡ ಅಣ್ಣನ ಯಶಸ್ಸಿನ ಹಾದಿಯಲ್ಲೇ ಹೆಜ್ಜೆ ಇಡಲು ಮುಂದಾಗಿದ್ದಾರೆ. ಆನಂದ್​ ನಟಿಸಿರುವ 'ಬೇಬಿ' ಸಿನಿಮಾ ಇಂದು ಬಿಡುಗಡೆಯಾಗಿದೆ. ಈಗಾಗಲೇ ಹಾಡುಗಳು ಮತ್ತು ಪ್ರಚಾರದ ಮೂಲಕವೇ ಗಮನ ಸೆಳೆದಿದ್ದ ಈ ಚಿತ್ರ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸಿನಿಮಾದಲ್ಲಿ ಆನಂದ್​ ದೇವರಕೊಂಡ ಜೊತೆಗೆ ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕಲರ್ ಫೋಟೋ’ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿರುವ ಸಾಯಿ ರಾಜೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಟೀಸರ್ ಮತ್ತು ಟ್ರೇಲರ್​ಗಳು ಈಗಾಗಲೇ ಯುವಜನತೆಗೆ ಇಷ್ಟವಾಗುವಂತೆ ಕಟ್ಟಿಕೊಡಲಾಗಿದ್ದು, ಸಿನಿಮಾ ಬಗ್ಗೆಯೂ ಜನರು ಉತ್ತಮ ನಿರೀಕ್ಷೆ ಹೊಂದಿದ್ದಾರೆ. ಹಾಗಿದ್ದರೆ ಆ ನಿರೀಕ್ಷೆಗಳನ್ನು 'ಬೇಬಿ' ಪೂರೈಸಿದೆಯೇ? ಎಂಬುದರ ಕುರಿತ ಮಾಹಿತಿ ಹೀಗಿದೆ...

ಚಿತ್ರಕಥೆ: ವೈಶು ಅಲಿಯಾಸ್ ವೈಷ್ಣವಿ (ವೈಷ್ಣವಿ ಚೈತನ್ಯ) ಸ್ಲಂ ಏರಿಯಾದಲ್ಲಿ ಬೆಳೆದ ಹುಡುಗಿ. ಚಿಕ್ಕಂದಿನಿಂದಲೂ ತನ್ನ ಎದುರಿಗಿರುವ ಆನಂದ್ (ಆನಂದ್ ದೇವರಕೊಂಡ)ನನ್ನು ಪ್ರೀತಿಸುತ್ತಾಳೆ. ಇವರಿಬ್ಬರ ಪ್ರೀತಿ ಶಾಲಾ ದಿನಗಳಿಂದಲೇ ಶುರುವಾಗಿ ಒಂದು ಹಂತಕ್ಕೆ ತಲುಪುತ್ತದೆ. ಆದರೆ ಹತ್ತನೇ ತರಗತಿಯಲ್ಲಿ ಆನಂದ್​ ಫೇಲ್​ ಆದ ಕಾರಣ ಆಟೋ ಚಾಲಕನಾಗಿ ಕೆಲಸ ಮಾಡಲು ಶುರು ಮಾಡುತ್ತಾನೆ. ವೈಷ್ಟವಿ ಖಾಸಗಿ ಇಂಜಿನಿಯರಿಂಗ್​ ಕಾಲೇಜಿಗೆ ಸೇರುತ್ತಾಳೆ.

ಅಲ್ಲಿಯ ಹೊಸ ಪರಿಚಯಗಳು ಅವಳ ಆಲೋಚನಾ ವಿಧಾನವನ್ನು ಬದಲಾಯಿಸಲು ಪ್ರಾರಂಭಿಸುತ್ತವೆ. ಹೀಗೆ ವೈಶು ತನ್ನ ಸಹಪಾಠಿ ವಿರಾಜ್ (ವಿರಾಜ್ ಅಶ್ವಿನ್)ಗೆ ಹತ್ತಿರವಾಗುತ್ತಾಳೆ. ಗೆಳೆತನದ ಹೆಸರಲ್ಲಿ ಶುರುವಾದ ಸಂಬಂಧ ಪ್ರೇಮಕ್ಕೆ ತಿರುಗಿ ಅಡ್ಡ ದಾರಿ ಹಿಡಿಯುತ್ತದೆ. ಅನಿರೀಕ್ಷಿತ ಸಂದರ್ಭಗಳಿಂದ ವೈಷ್ಣವಿ ವಿರಾಜ್‌ಗೆ ದೈಹಿಕವಾಗಿ ಹತ್ತಿರವಾಗುತ್ತಾಳೆ. ಅದರ ನಂತರ ಏನಾಗುತ್ತದೆ? ಸತ್ಯ ತಿಳಿದಾಗ ಆನಂದ್​ ಪ್ರತಿಕ್ರಿಯೆ ಏನು? ಎಂಬುದು ಉಳಿದ ಕಥೆ.

"ಮೊದಲ ಪ್ರೀತಿ ಸಾವಿನಲ್ಲೂ ಕೊನೆಗೊಳ್ಳುವುದಿಲ್ಲ. ಬದಲಾಗಿ ಅದು ನಮ್ಮ ಹೃದಯದ ಆಳದಲ್ಲಿ ಶಾಶ್ವತವಾಗಿ ನೆಲೆಸಿರುತ್ತದೆ" ಎಂಬುದು ಬೇಬಿ ಟ್ರೇಲರ್​ ಪ್ರಾರಂಭದಲ್ಲಿ ಉಲ್ಲೇಖಿಸಿರುವ ಸಾಲುಗಳು. ಆ ಮಾತಿನಂತೆಯೇ ಕಥೆಗಳು ಸಾಗುತ್ತವೆ. ಅಪರಿಚಿತ ವಯಸ್ಸಿನಲ್ಲಿ ಹುಟ್ಟಿಕೊಂಡ ಪ್ರೇಮಕಥೆ, ಅವರು ದೊಡ್ಡವರಾದಂತೆ ಯಾವ ತಿರುವನ್ನು ಪಡೆದುಕೊಂಡು ಎಲ್ಲಿಗೆ ತಲುಪಿತು? ಅದೇ ನಿಜವಾದ ಕಥೆ.

ಇಂತಹ ಬಾಲ್ಯದ ಪ್ರೇಮ ಕಥೆಗಳು ಅನೇಕರ ಜೀವನದಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹವರಲ್ಲಿ ಹೆಚ್ಚಿನದ್ದು ದುರಂತ ಪ್ರೇಮ ಕಥೆಯೇ. ಈ ಬೇಬಿ ಕೂಡ ಅಂತಹದ್ದೇ ನವಿರಾದ ಪ್ರೇಮಕಥೆಯಾಗಿದ್ದು, ನಿರ್ದೇಶಕ ಸಾಯಿ ರಾಜೇಶ್​ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಇಂದಿನ ಯುವಜನತೆಗೆ ಈ ಸಿನಿಮಾ ಚೆನ್ನಾಗಿ ಕನೆಕ್ಟ್ ಆಗಲಿದೆ.

ಸಿನಿಮಾದಲ್ಲಿ ಕಂಡುಬರುವ ಬಹುತೇಕ ದೃಶ್ಯಗಳು ಯುವಕ-ಯುವತಿಯರ ನಡುವಿನ ಪ್ರೀತಿ ಮತ್ತು ಅವರ ಆಲೋಚನಾ ಕ್ರಮದ ಪ್ರತಿಬಿಂಬವಾಗಿದೆ. ಆನಂದ್ ಅವರನ್ನು ಭಗ್ನ ಪ್ರೇಮಿ ಎಂದು ಪರಿಚಯಿಸಿದ ರೀತಿ, ಅವರ ದೃಷ್ಟಿಕೋನದಿಂದ ಮೂಲ ಕಥೆಯನ್ನು ಆರಂಭಿಸಿದ ರೀತಿ ತುಂಬಾ ಚೆನ್ನಾಗಿದೆ. ಪದಗಳಿಲ್ಲದಿದ್ದರೂ ಭಾವಾಭಿನಯ ಮತ್ತು ಹಿನ್ನೆಲೆ ಸಂಗೀತದ ಮೂಲಕ ಅವರ ಪ್ರೀತಿಯನ್ನು ಹೈಲೈಟ್ ಮಾಡಿರುವ ರೀತಿ ಆಕರ್ಷಕವಾಗಿದೆ.

ಪ್ರೇಕ್ಷಕರ ಅಭಿಪ್ರಾಯವೇನು?: 'ಬೇಬಿ' ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಸಿನಿಮಾದ ಮೊದಲ ಭಾಗ ಆಸಕ್ತಿದಾಯಕವಾಗಿದೆ. ಎರಡನೇ ಭಾಗವನ್ನು ಇನ್ನೂ ಸ್ವಲ್ಪ ರಸವತ್ತಾಗಿ ಮಾಡುವಲ್ಲಿ ನಿರ್ದೇಶಕರು ಹಿಂದೇಟು ಹಾಕಿರುವಂತೆ ತೋರುತ್ತಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಪ್ರಮುಖ ದೃಶ್ಯಗಳು ಭಾವನಾತ್ಮಕವಾಗಿದೆ. ಆದರೆ ಸಿನಿಮಾ ತೀರಾ ಸಲೀಸಾಗಿ ಸಾಗಿದೆಯಂತೆ. ಕ್ಲೈಮ್ಯಾಕ್ಸ್‌ ತೃಪ್ತಿಕರ ಎನಿಸುವುದಿಲ್ಲ. ಪ್ರೇಮಿತಾ ಮುಂತಾದ ಸಿನಿಮಾಗಳು ಈ ಸಂದರ್ಭ ನೆನಪಿಗೆ ಬರುತ್ತವೆಯಂತೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಸಹೋದರನ ಸಿನಿಮಾ ಪ್ರೀಮಿಯರ್​ನಲ್ಲಿ ನಟಿ ರಶ್ಮಿಕಾ ಮಂದಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.