ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅಭಿಮಾನಿಗಳಿಗೊಂದು ಗುಡ್ ನ್ಯೂಸ್. ನಿಮ್ಮ ಮೆಚ್ಚಿನ ನಟ ಮತ್ತೆ ಕೆಲಸ ಆರಂಭಿಸಿದ್ದಾರೆ. ತಮ್ಮ ಮುಂದಿನ ಚಿತ್ರದ ಶೂಟಿಂಗ್ ಸೆಟ್ಗೆ ಮರಳಿದ್ದಾರೆ. ಹೌದು, ಪ್ರಾಜೆಕ್ಟ್ ಕೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರು ಸದ್ಯ ಚೇತರಿಸಿಕೊಂಡಿದ್ದಾರೆ. ಮತ್ತೆ ಶೂಟಿಂಗ್ನಲ್ಲಿ ಭಾಗಿ ಆಗಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಬ್ಲಾಗ್ನಲ್ಲಿ ಶೇರ್ ಮಾಡಿದ್ದಾರೆ.
ಶೂಟಿಂಗ್ ಸೆಟ್ಗೆ ಸಂಬಂಧಿಸಿದ ಹಲವು ಫೋಟೋಗಳ ಜೊತೆಗೆ ತಾವು ಮೇಕಪ್ ಹಾಕಿಕೊಳ್ಳುತ್ತಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ನಾನು ಕೆಲಸಕ್ಕೆ ಮರಳಿದ್ದೇನೆ ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ಒಂದು ಫೋಟೋದಲ್ಲಿ ಬಿಗ್ ಬಿ ತಮ್ಮ ಈ ಚಿತ್ರ ತಂಡದೊಂದಿಗೆ ಚರ್ಚಿಸುತ್ತಿರುವುದು ಕಂಡುಬಂದಿದೆ. ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ಮೆಚ್ಚಿನ ನಟನ ಆರೋಗ್ಯ ಚೇತರಿಸಿಕೊಂಡಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
80ರ ಹರೆಯದಲ್ಲೂ ಅಮಿತಾಭ್ ಬಚ್ಚನ್ ಅವರಿಗಿರುವ ಚಿತ್ರಗಳ ಮೇಲಿನ ಸಮರ್ಪಣಾ ಮನೋಭಾವ ನೋಡಿದರೆ ಅಚ್ಚರಿ ಪಡಲೇಬೇಕು. ಶೂಟಿಂಗ್ ಸೆಟ್‌ಗಳಲ್ಲಿ ಅವರು ಬಹಳ ಎನರ್ಜಿಟಿಕ್ ಆಗಿ ಇರುತ್ತಾರೆ. ಭಾನುವಾರದಂದು ನಿಯಮಿತವಾಗಿ ತಮ್ಮ ಅಭಿಮಾನಿಗಳನ್ನು ಸಹ ಭೇಟಿಯಾಗುತ್ತಾರೆ. ಆದರೆ ಅನಾರೋಗ್ಯ ಹಿನ್ನೆಲೆ ಕೆಲ ವಾರಗಳ ಕಾಲ ಈ ಭೇಟಿಯನ್ನು ರದ್ದುಗೊಳಿಸಲಾಗಿತ್ತು.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಪ್ರಾಜೆಕ್ಟ್ ಕೆ ಸಿನಿಮಾದ ಫೈಟ್ ಸೀನ್ ವೇಳೆ ಅಮಿತಾಭ್ ಅವರು ಗಾಯಗೊಂಡಿದ್ದರು. ಮಾರ್ಚ್ 4ರಂದು ಈ ಘಟನೆ ನಡೆದಿತ್ತು. ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದರು. ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕೆಲ ವಾರಗಳ ಕಾಲ ವಿಶ್ರಾಂತಿ ಪಡೆದರು. ಗಾಯಗಳು ಬಹುತೇಕ ವಾಸಿಯಾಗುತ್ತಿದ್ದಂತೆ ಮತ್ತೆ ಚಿತ್ರದ ಶೂಟಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ದಿಶಾ ಪಟಾನಿ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಂದಿನ ವರ್ಷ ಜನವರಿ 12ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಶ್ರೀವಲ್ಲಿ: ರಶ್ಮಿಕಾ ಮಂದಣ್ಣ ಫಸ್ಟ್ ಲುಕ್, ಪುಷ್ಪಾ 2 ಟೀಸರ್ ತುಣುಕು ರಿಲೀಸ್
ಈ ಬಹುನಿರೀಕ್ಷಿತ ಪ್ರಾಜೆಕ್ಟ್ ಕೆ ದ್ವಿಭಾಷಾ ಸಿನಿಮಾ. ಹಲವು ಲೊಕೇಶನ್ಗಳಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ವೀಕೆಂಡ್ ವಿತ್ ರಮೇಶ್' ಸೀಟ್ನಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ಇಬ್ಬರು ಸಾಧಕರು
ಹೈದರಾಬಾದ್‌ನಲ್ಲಿ ಗಾಯಗೊಂಡ ಅಮಿತಾಭ್ ಕೆಲ ಕಾಲ ಮನೆಯಲ್ಲಿ ಸೂಕ್ತ ಆರೈಕೆ ಪಡೆದಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಆಗಾಗ್ಗೆ ಮಾಹಿತಿ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳ ಚಿಂತೆ ದೂರ ಮಾಡಿದ್ದರು. ಚೇತರಿಕೆಯತ್ತ ತಮ್ಮ ಪ್ರಯತ್ನಗಳನ್ನು ಹೇಳುತ್ತ ನೆಟ್ಟಿಗರಲ್ಲಿ ಸ್ಫೂರ್ತಿ ತುಂಬಿದ್ದರು. ಇದೀಗ ಶೂಟಿಂಗ್ ಸೆಟ್ಗೆ ಬಿಗ್ ಬಿ ಮರಳಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.