ETV Bharat / entertainment

ಅಂಬಿ ಪುಣ್ಯಸ್ಮರಣೆ: ಭಾವನಾತ್ಮಕ ಟ್ವೀಟ್ ಮಾಡಿದ ಪತ್ನಿ ಸುಮಲತಾ - pooja to ambarish tomb

ಅಂಬಿ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ನಟ ದರ್ಶನ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹಾಗು ಸಂಬಂಧಿಕರು ಕಂಠೀರವ ಸ್ಟುಡಿಯೋದಲ್ಲಿರುವ‌ ಅಂಬರೀಶ್ ಸಮಾಧಿಗೆ ಪೂಜೆ‌ ಸಲ್ಲಿಸಿದರು.

ambarish death anniversary
ಅಂಬಿ ಪುಣ್ಯಸ್ಮರಣೆ
author img

By

Published : Nov 24, 2022, 1:57 PM IST

ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ಅಂಬರೀಶ್​ ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ವರ್ಷ. ‘ರೆಬಲ್​ ಸ್ಟಾರ್​’ ಎಂದು ಪ್ರಖ್ಯಾತರಾಗಿದ್ದ ಅವರು ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ನಟನಾಗಿ, ರಾಜಕಾರಣಿ ಆಗಿ ಸಾಕಷ್ಟು ಗಮನ ಸೆಳೆದಿದ್ದರು. ಇಂದು ಅಂಬರೀಶ್​​ ಪುಣ್ಯ ಸ್ಮರಣೆ ಪ್ರಯುಕ್ತ ಅವರನ್ನು ಹಲವು ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಪತ್ನಿ, ಪುತ್ರ ಸೇರಿ ಕುಟುಂಬದವರು ಮತ್ತು ಅಭಿಮಾನಿಗಳು ಅಂಬಿ ಸಮಾಧಿ ಸ್ಥಳಕ್ಕೆ ತೆರಳಿ ನಮಿಸಿದ್ದಾರೆ.

ಅಂಬಿ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ನಟ ದರ್ಶನ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹಾಗು ಸಂಬಂಧಿಕರು ಕಂಠೀರವ ಸ್ಟುಡಿಯೋದಲ್ಲಿರುವ‌ ಅಂಬರೀಶ್ ಸಮಾಧಿಗೆ ಪೂಜೆ‌ ಸಲ್ಲಿಸಿದರು. ಅಂಬರೀಶ್ ಸ್ಮಾರಕ ನಿರ್ಮಾಣ ಕೆಲಸಗಳು ನಡೆಯುತ್ತಿರುವ ಹಿನ್ನೆಲೆ ಸಮಾಧಿ ಬಳಿ ಅಭಿಮಾನಿಗಳಿಗೆ ಪ್ರವೇಶ ಇಲ್ಲ. ‌ಈ ಕಾರಣಕ್ಕೆ ದೂರದಿಂದಲೇ ಅಭಿಮಾನಿಗಳು ಸಮಾಧಿಗೆ ನಮಸ್ಕರಿಸುತ್ತಿದ್ದಾರೆ.

ಅಂಬಿ ಪುಣ್ಯಸ್ಮರಣೆ

ಸುಮಲತಾ ಟ್ವೀಟ್: ಅಂಬರೀಶ್​​ ಅವರನ್ನು ಸ್ಮರಿಸಿ ಪತ್ನಿ ಸುಮಲತಾ ಅಂಬರೀಶ್​​​ ಭಾವುಕ ಬರಹವನ್ನು ಹಂಚಿಕೊಂಡಿದ್ದಾರೆ. ‘ನಟನಾಗಿ ಜೊತೆಯಾಗಿ, ಬಾಳ ಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಯಾವತ್ತಿಗೂ ಜೀವಂತ. ನಿಮ್ಮ ಸಿಡುಕು, ಸಂಭ್ರಮ ಹಿತ . ದೈಹಿಕವಾಗಿ ನೀವು ನಮ್ಮೊಂದಿಗೆ ಇಲ್ಲ ಅನ್ನುವುದನ್ನು ಬಿಟ್ಟರೆ, ಕ್ಷಣಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ. ನಿಮ್ಮ ಕನಸು, ಕನವರಿಕೆ, ಸಮಾಜಮುಖಿ ಕೆಲಸ, ನಾಡಿನ ಮೇಲಿದ್ದ ಒಲವು ಅವು ಮುಂದುವರಿಯುತ್ತಿವೆ ನಿಮ್ಮದೇ ಹೆಸರಿನಲಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಾಂತರಾಳದ ನಮನ. ಅಂಬಿ ಅಮರ’ ಎಂದು ಟ್ವೀಟ್​ ಮೂಲಕ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಮಾಡೆಲ್ ಜತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ.. ಮುಹೂರ್ತ ಫಿಕ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.