ETV Bharat / entertainment

ಅಟ್ಲೀ ಜೊತೆಗಿನ ಸಿನಿಮಾಗೆ 'ಯೆಸ್​' ಎಂದ ಅಲ್ಲು ಅರ್ಜುನ್​; ಶೀಘ್ರದಲ್ಲೇ ಶೂಟಿಂಗ್​ ಶುರು - ಈಟಿವಿ ಭಾರತ ಕನ್ನಡ

ನಟ ಅಲ್ಲು ಅರ್ಜುನ್​ ಮತ್ತು ನಿರ್ದೇಶಕ ಅಟ್ಲೀ ಕಾಂಬೋದಲ್ಲಿ ಮೂಡಿಬರಲಿರುವ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಹೊರಬಿದ್ದಿದೆ.

Allu Arjun next movie with director Atlee
ಅಟ್ಲೀ ಜೊತೆಗಿನ ಸಿನಿಮಾಗೆ 'ಯೆಸ್​' ಎಂದ ಅಲ್ಲು ಅರ್ಜುನ್​; ಶೀಘ್ರದಲ್ಲೇ ಶೂಟಿಂಗ್​ ಶುರು
author img

By ETV Bharat Karnataka Team

Published : Dec 26, 2023, 3:56 PM IST

ಟಾಲಿವುಡ್​ ನಟ​ ಅಲ್ಲು ಅರ್ಜುನ್​ ಮತ್ತು ಖ್ಯಾತ ನಿರ್ದೇಶಕ ಅಟ್ಲೀ ಕಾಂಬೋದಲ್ಲಿ ಸಿನಿಮಾವೊಂದು ಮೂಡಿಬರಲಿದೆ. ಇತ್ತೀಚೆಗಷ್ಟೇ ಈ ಪ್ರಾಜೆಕ್ಟ್​​​ ಬಗ್ಗೆ ಮತ್ತೊಂದು ಸುದ್ದಿ ಹಾಟ್​ ಟಾಪಿಕ್​ ಆಗಿದೆ. ಸದ್ಯ 'ಪುಷ್ಪ: ದಿ ರೂಲ್​' ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್​, ಅಟ್ಲೀ ಜೊತೆಗಿನ ಸಿನಿಮಾಗೆ ಯೆಸ್​ ಎಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಪುಷ್ಪ 2 ಚಿತ್ರೀಕರಣ ಮುಗಿದ ನಂತರ ಈ ಸಿನಿಮಾದ ಕೆಲಸಗಳು ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.

ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಸಂಪೂರ್ಣ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಶುದ್ಧ ಕಮರ್ಷಿಯಲ್​ ಎಂಟರ್​ಟೈನರ್​ ಆಗಿ ತಯಾರಾಗಲಿದೆಯಂತೆ. ಅಟ್ಲೀ 2024ರಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಯೋಜನೆಯ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಇತ್ತೀಚೆಗೆ ಮುಂಬೈನಲ್ಲಿ ಅಟ್ಲೀ ಅವರನ್ನು ಭೇಟಿಯಾಗಿದ್ದಾರೆ. ಈ ಮೀಟ್​​ ಸಾಕಷ್ಟು ಕುತೂಹಲಕಾರಿಯಾಗಿದೆ ಎಂದು ವರದಿಗಳು ಹೇಳಿವೆ. ಇಬ್ಬರೂ ಸಂಭವನೀಯ ಸಹಯೋಗದ ಕುರಿತು ಬಹಳ ಉತ್ಸುಕರಾಗಿದ್ದಾರೆ. ಚರ್ಚೆ ಇನ್ನೂ ಆರಂಭಿಕ ಹಂತದಲ್ಲಿದೆಯಾದರೂ, ಹೈ ಬಜೆಟ್​ ಚಿತ್ರ ಬಹಳ ಚೆನ್ನಾಗಿ ಮೂಡಿ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಜವಾನ್‌ನ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಸೌತ್​ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಡೈರೆಕ್ಟರ್​ ಅಟ್ಲೀ ಆ್ಯಕ್ಷನ್​ ಕಟ್​ ಹೇಳಲಿರುವ ಮುಂದಿನ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಜವಾನ್​​ ಮೂಲಕ ಬಹುಬೇಡಿಕೆ ನಿರ್ದೇಶಕರಾಗಿ ಅಟ್ಲೀ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಿರುವಾಗ, ಅಲ್ಲು ಅರ್ಜುನ್‌ ಅವರಿಗಾಗಿ ಯಾವ ರೀತಿಯ ಸ್ಕ್ರಿಪ್ಟ್ ರೆಡಿ ಮಾಡಲಿದ್ದಾರೆ. ನಟನ ಪ್ರತಿಭೆಯನ್ನು ಚಿತ್ರದಲ್ಲಿ ಹೇಗೆ ತೋರಿಸಲಿದ್ದಾರೆ ಎಂಬುದೀಗ ಕುತೂಹಲಕಾರಿ ವಿಷಯವಾಗಿದೆ. ಸ್ಟಾರ್ ನಟ-ನಿರ್ದೇಶಕ ಜೋಡಿ ಸೇರಿ ಸಿನಿಮಾ ಮಾಡಿದ್ರೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಪಕ್ಕಾ. ಏಕೆಂದರೆ, ಅಟ್ಲೀ ಅದ್ಭುತ ಕಥೆಗಾರ, ನಿರ್ದೇಶಕ. ಅಲ್ಲು ಅರ್ಜುನ್ ಆಕರ್ಷಕ ಅಭಿನಯಕ್ಕೆ ಹೆಸರುವಾಸಿ ಎಂಬುದು ನಿಮಗೆ ತಿಳಿದೇ ಇದೆ.

ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಮುಂದಿನ ವರ್ಷ ಆಗಸ್ಟ್ 15 ರಂದು ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಸುಕುಮಾರ್ ನಿರ್ದೇಶನದ ಆ್ಯಕ್ಷನ್ ಸಿನಿಮಾದಲ್ಲಿ, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಭಾಗದಲ್ಲಿದ್ದ ಪ್ರಮುಖ ಪಾತ್ರಗಳು ಸೀಕ್ವೆಲ್​ನಲ್ಲಿಯೂ ಮುಂದುವರಿದಿದ್ದಾರೆ. ಈ ಹೈ ವೋಲ್ಟೇಜ್​ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ. ಅಲ್ಲು ಅರ್ಜುನ್​​ ಮುಂದಿನ ಹೊಸ ಸಿನಿಮಾ ಮೇಲೆ ಆಸಕ್ತಿ ವ್ಯಕ್ತವಾಗಿದೆ.

ಇದನ್ನೂ ಓದಿ: ಸ್ಕ್ರಿಪ್ಟ್​ ರೆಡಿ, ಮತ್ತೊಬ್ಬ ಸ್ಟಾರ್​ ನಟನ ಜೊತೆ ನಿರ್ದೇಶಕ ಅಟ್ಲೀ ಸಿನಿಮಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.